ಕೊಡಿಯಾಲ ಕಲ್ಪಡ ಶ್ರೀ ಉಳ್ಳಾಕುಲು, ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಕಾಣಿಯೂರು: ಕೊಡಿಯಾಲ ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಆಶ್ಲೇಷ ಬಲಿ, ನವಕ ಕಲಶಾಭಿಷೇಕ ಮತ್ತು ನಾಗತಂಬಿಲ ಹಾಗೂ ಶ್ರೀ ಉಳ್ಳಾಕುಲು ,ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಜ.14,15 ರಂದು ಭಕ್ತಿ ಸಂಭ್ರಮದಿಂದ ನಡೆಯಿತು.

ಜ.7ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಿತು. ಜ.14 ರಂದು ಬೆಳಿಗ್ಗೆ ಪುಣ್ಯಾಹಃ ಶುದ್ಧಿ,ಆಶ್ಲೇಷ ಬಲಿ, ನವಕ ಕಲಶಾಭಿಷೇಕ ಮತ್ತು ನಾಗ ತಂಬಿಲ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.


ಮಧ್ಯಾಹ್ನ ಸಂಕ್ರಮಣ ಪೂಜೆ, ಸಂಜೆ ಶ್ರೀ ಉಳ್ಳಾಕುಲು, ಚಾಮುಂಡಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ಶ್ರೀ ಉಳ್ಳಾಲ್ತಿ ಕುಣಿತಾ ಭಜನಾ ತಂಡ ಪುಣ್ಚಪ್ಪಾಡಿ ಮತ್ತು ಧರ್ಮಶ್ರೀ ಮಕ್ಕಳ ಕುಣಿತ ಭಜನಾ ತಂಡ ಮೂವಪ್ಪೆ ಕಲ್ಪಡ ಇವರಿಂದ ಭಜನೆ ಹಾಗೂ ಕುಣಿತ ಭಜನೆ ನಡೆಯಿತು. ಜ.15 ರಂದು ಪ್ರಾತಃಕಾಲ ಶ್ರೀ ಉಳ್ಳಾಕುಲು ದೈವದ ನೇಮೋತ್ಸವ ನಡೆಯಿತು.
ನಂತರ ಶ್ರೀ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಭಕ್ತಿ, ಸಂಭ್ರಮದಿಂದ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ಉಳ್ಳಾಕುಲು ದೈವಸ್ಥಾನ ಕೊಡಿಯಾಲ ಕಲ್ಪಡ ಇದರ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ, ಮೊಕ್ತೇಸರರಾದ ಶಿವರಾಮ ಉಪಾಧ್ಯಾಯ, ಕಾರ್ಯದರ್ಶಿ ಬಾಲಕೃಷ್ಣ ಕೆ.ಜೆ, ಉಪಾಧ್ಯಕ್ಷ ಯುವರಾಜ ಕೆ, ಜೊತೆ ಕಾರ್ಯದರ್ಶಿ ಧರ್ಮಪಾಲ ಕೆ ಹಾಗೂ ಸರ್ವ ಸದಸ್ಯರು ಮತ್ತು ಎಂಟು ಮನೆಯವರು ಹಾಗೂ ಊರ, ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here