ಶ್ರೀ ಕ್ಷೇತ್ರ ಹನುಮಗಿರಿ ಬ್ರಹ್ಮಕಲಶೋತ್ಸವ- ಕುರಿಯ ಗ್ರಾಮ ಸಮಿತಿ ರಚನೆ

0

ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಜ.7ರಂದು ಬುಧವಾರದಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣ ಉಳ್ಳಾಲ, ಕುರಿಯದಲ್ಲಿ ಕುರಿಯ ಗ್ರಾಮ ಸಮಿತಿ ರಚನೆಯ ಬಗ್ಗೆ ಕುರಿಯ ಗ್ರಾಮದ ಭಗವದ್ಭಕ್ತರ ಸಭೆಯನ್ನು ಬ್ರಹ್ಮಕಲಶೋತ್ಸವ ನಗರ-ಗ್ರಾಮ ಸಮಿತಿ ರಚನಾ ಸಂಚಾಲಕರಾದ ಸಾಜ ರಾಧಾಕೃಷ್ಣ ಆಳ್ವರ ಅಧ್ಯಕ್ಷತೆಯಲ್ಲಿ ನಡೆಸಿ ಗ್ರಾಮದ ವಿವಿಧ ಜವಾಬ್ದಾರಿಗಳನ್ನು ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ,ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ , ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ್, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತು, ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಯರಾಮ ರೈ , ಅಡ್ಯೆತ್ತಿಮಾರ್ ವಿಷ್ಣುಮೂರ್ತಿ ದೇವಾಲಯದ ಗೌರಾಧ್ಯಕ್ಷರಾದ ಶಿವರಾಮ ಆಳ್ವ ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ಘೋಷಿಸಲಾಯಿತು.

ಕುರಿಯ ಗ್ರಾಮ ಸಮಿತಿ ಅಧ್ಯಕ್ಷ – ಜಯರಾಮ ರೈ, ಪ್ರಧಾನ ಕಾರ್ಯದರ್ಶಿ – ಹರೀಶ್ ಡಿಂಬ್ರಿ, ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕ – ಜಯರಾಜ್ ಭಂಡಾರಿ ಡಿಂಬ್ರಿ, ಸಹ ಸಂಚಾಲಕ – ಆನಂದ ರೈ ಡಿಂಬ್ರಿ, ರಥಯಾತ್ರೆ ಗ್ರಾಮ ಸಂಚಾಲಕ – ಸನತ್ ರೈ ಎಲ್ನಾಡು ಗುತ್ತು, ಸಹ ಸಂಚಾಲಕ – ಸುಂದರ ಪೂಜಾರಿ ಬೋಳಂತಿಮಾರು, ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕ – ಶ್ರೀ ಕೃಷ್ಣ ಬೋಳಂತಿಮಾರು, ಸಹ ಸಂಚಾಲಕ – ಧನರಾಜ್ ಅಲೆಂಕಿ, ದಿನೇಶ್ ಸಾಲಿಯಾನ್, ಗೋಪಾಲ ಕರೆಜ್ಜ ಭಜನಾ ಸಂಕೀರ್ತನಾ
ಗ್ರಾಮ ಸಂಚಾಲಕ – ಚಂದ್ರಹಾಸ ರೈ ತುಂಬೆದಕೋಡಿ.

ಮಹಿಳಾ ಸಮಿತಿ ಗ್ರಾಮ
ಸಂಚಾಲಕಿ – ಕಮಲ ಸಂಕಪ್ಪ ಓಟೆತ್ತಿಮಾರು, ಸಾಮಾಜಿಕ ಜಾಲತಾಣ ಸಂಚಾಲಕ – ಸತೀಶ್ ಬೋಳಂತಿಮಾರು

ಈ ಸಂದರ್ಭದಲ್ಲಿ ತಿರುಮಲೇಶ್ವರ ಭಟ್, ವೆಂಕಟರಮಣ, ರಮೇಶ್ ರೈ ಡಿಂಬ್ರಿ, ರವೀಂದ್ರನಾಥ ರೈ ಬಳ್ಳ ಮಜಲು, ಜೈರಾಜ್ ಭಂಡಾರಿ, ಧನರಾಜ್ ಅಲೆಕಿ, ಹರೀಶ್ ಡಿಂಬ್ರಿ, ಶ್ರೀಕೃಷ್ಣ ಬೊಳಂತಿಮಾರು, ದಿನೇಶ್ ಬೊಳಂತಿಮಾರು, ಸನತ್ ರೈ ಎಳ್ನಾಡುಗುತ್ತು, ಬಾಲಚಂದ್ರ ರೈ ಕುರಿಯ, ಜಗದೀಶ ರೈ ಡಿಂಬ್ರಿ, ಸಂಕಪ್ಪ ಕುರಿಯ, ಸುಂದರ ಪೂಜಾರಿ ಬೊಳಂತಿಮಾರು, ಸುಂದರ ಪೂಜಾರಿ ಮಾಪಾಲ, ಜಯರಾಮ ರೈ, ಶಿವರಾಮ ಆಳ್ವ, ಆನಂದ, ವಿಜಯಹರಿ ರೈ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here