ಬಹುಮುಖ ಪ್ರತಿಭೆ, ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನ ತಜ್ಞ ವೈದ್ಯ ಡಾ. ಸುಜಯ್ ತಂತ್ರಿ ಕೆಮ್ಮಿಂಜೆಯವರಿಗೆ ‘ಆಯುರ್ವೇದ ರತ್ನ’ ಪ್ರಶಸ್ತಿ

0

ಪುತ್ತೂರು: ವೈದ್ಯಕೀಯ ಹಾಗೂ ಪಾರಂಪರಿಕ ತಾಂತ್ರಿಕ ವೃತ್ತಿಕ್ಷೇತ್ರಗಳಲ್ಲಿ ನೀಡಿದ ಅಪಾರ ಸೇವೆಯನ್ನು ಗುರುತಿಸಿ, ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನ ತಜ್ಞ ವೈದ್ಯ
ಡಾ. ಸುಜಯ್ ತಂತ್ರಿ ಕೆಮ್ಮಿಂಜೆಯವರಿಗೆ ಪೂಣೆಯ “ನಿರ್ವಿಕಾರ್ ಆಯುರ್ವೇದ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್” ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ‘ಆಯುರ್ವೇದ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರಸಿದ್ದ ತಂತ್ರಿ ಮನೆತನದ ಬ್ರಹ್ಮಶ್ರೀ ದಿ.ಕೆಮ್ಮಿಂಜೆ ಕೇಶವ ತಂತ್ರಿಗಳ ಮೊಮ್ಮಗ ಹಾಗೂ ಕೆಮ್ಮಿಂಜೆ ದಿ.ಸುಬ್ರಹ್ಮಣ್ಯ ತಂತ್ರಿ ಮತ್ತು ಸರಸ್ವತಿ ದಂಪತಿ ಪುತ್ರನಾಗಿರುವ ಡಾ. ಸುಜಯ್ ತಂತ್ರಿ ಕೆಮ್ಮಿಂಜೆಯವರು ಬೆಳ್ತಂಗಡಿಯ ಪ್ರಸನ್ನ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುತ್ತಾರೆ. ಜೊತೆಗೆ ಪಾರಂಪರಿಕ ತಾಂತ್ರಿಕ ವೃತ್ತಿಯನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ ತಾಲೂಕಿನ ಏಕೈಕ ವೈದ್ಯರಾಗಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಸೇವಾ ಮನೋಭಾವದಿಂದ ಅನೇಕ ಆರ್ಥಿಕ ಅಶಕ್ತರಿಗೆ ಸೇವಾ ರೂಪದಲ್ಲೂ ಚಿಕಿತ್ಸೆ ನೀಡಿ, ಜನಮಾನಸದಲ್ಲಿ ಅಪಾರ ಗೌರವವನ್ನು ಗಳಿಸಿಕೊಂಡಿರುತ್ತಾರೆ.

ಇವರು ಪುರುಷರಕಟ್ಟೆಯಲ್ಲಿ ‘ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್’ ಅನ್ನು ನಡೆಸಿಕೊಂಡು ಬರುತ್ತಿದ್ದು ಅಲ್ಲಿ ಅವರು ಪ್ರತಿದಿನ ಸಂಜೆ 5.00 ರಿಂದ 7.೦೦ ಗಂಟೆಯವರೆಗೆ ಡಾ. ಸುಜಯ್ ತಂತ್ರಿಯವರು ರೋಗಿಗಳ ಸಂದರ್ಶನಕ್ಕೆ ಲಭ್ಯರಿರುತ್ತಾರೆ.

LEAVE A REPLY

Please enter your comment!
Please enter your name here