ಕಡಬ:ಜಾತಿ ನಿಂದನೆ,ಹಲ್ಲೆ,ಬೆದರಿಕೆ ಆರೋಪ : ಮೂವರ ವಿರುದ್ಧ ಪ್ರಕರಣ ದಾಖಲು

0

ಕಡಬ:ಜಾತಿ ನಿಂದನೆ ಮಾಡಿ,ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.


ಪಾಲ್ತಾಡು ಗ್ರಾಮದ ಜಗದೀಶ(28ವ.)ಎಂಬವರು ಪೊಲೀಸರಿಗೆ ದೂರು ನೀಡಿ,‘ಜ.16ರಂದು ರಾತ್ರಿ ಸುಮಾರು 10.30 ಗಂಟೆಯ ನಡುವೆ ನಾನು ಕಡಬ ಗ್ರಾಮದ ಸುರಭಿ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಕ್ಯಾಶ್ ಕೌಂಟರ್ ಸಮೀಪ ನಿಂತಿದ್ದಾಗ, ಪರಿಚಯಸ್ಥರಾದ ಅಜಯ್, ಬೇಬಿ ಮತ್ತು ಅನಿಲ್ ಎಂಬವರು ವಿನಾಕಾರಣ ಜಗಳ ಆರಂಭಿಸಿ,ಜಾತಿ ನಿಂದನೆ ಮಾಡುತ್ತಾ ಕೈಯಿಂದ ಕೆನ್ನೆ, ತಲೆ,ಭುಜ,ಬೆನ್ನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ:115(2), 352, 351(3) BNS-2023 & : 3(1), (r), & (S) the Sc & St (Prevention of atrocities) Amendment act-2015.ನಂತೆ ಪ್ರಕರಣದ (ಅ.ಕ್ರ.08/2026)ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here