







ಪುತ್ತೂರು: ಕೊಯಿಲ ಪಂಚಾಯತ್ ಸಭಾಂಗಣದಲ್ಲಿ ವಿಕಲ ಚೇತನರ ವಿಶೇಷ ಗ್ರಾಮ ಸಭೆಯು ಜ.18ರಂದು ನಡೆಯಿತು. ಪುಷ್ಪ ಸುಭಾಸ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ, ನಾಡ ಗೀತೆಯ ಮೂಲಕ ವಿಕಲ ಚೇತನರ ವಿಶೇಷ ಗ್ರಾಮ ಸಭೆಗೆ ಚಾಲನೆ ನೀಡಲಾಯಿತು.


ಪುತ್ತೂರು ತಾಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಶೇಷ ಚೇತನರಿಗೆ ಬಳಕೆ ಯಾಗುವ ಬ್ರೈಲ್ ಲಿಪಿ,ಅಬಕಾಸ್ ಹಾವು-ಏಣಿ ಅಟ್ಟ, ಕೊಯಿಲ ಗ್ರಾಮ ಪಂಚಾಯತ್ ಗ್ರಂಥಾಲಯ ವಿಶೇಷ ಚೇತನ ವ್ಯಕ್ತಿಗಳಿಗೆ ಗ್ರಂಥಾಲಯ ಇರುವ ಸೌಲಭ್ಯ ಬಳಕೆ,ವಿಕಲ ಚೇತನರ ಇಲಾಖೆ ಯೋಜನೆಗಳ ಎಂಡೋ ಪೀಡಿತರ ಪಿಂಚಣಿ ಆರೋಗ್ಯ ಸೌಲಭ್ಯದ ಬಗ್ಗೆ, ವಿಕಲ ಚೇತನರ ಕಾಯ್ದೆ 2016 (21) ವಿಧದ ವಿಕಲತೆ ಬಗ್ಗೆ ಹಿರಿಯ ನಾಗರಿಕರ ಕಾಯ್ದೆ ಬಗ್ಗೆ ವಿಕಲ ಚೇತನರ ಆರೈಕೆ ದಾರ ಪಿಂಚಣಿ ಸೌಲಭ್ಯದ ಬಗ್ಗೆ ಮಾಹಿತಿ, ಮಾನಸಿಕ ವಿಕಲ ಚೇತನರ ಟೆಲಿ ಮನಸ್ 14416 ಸಹಾಯ ವಾಣಿ ಬಗ್ಗೆ ಕೇಂದ್ರ ಸರಕಾರ /ರಾಜ ಸರಕಾರಿ ಹಾಗೂ ಖಾಸಗಿ ಕಚೇರಿಯಲ್ಲಿ ವಿಕಲ ಚೇತನರ ಸೇಹಿ ವಾತಾವರಣ ಬಗ್ಗೆ ಮಾಹಿತಿ ನೀಡಿದರು.



ಕೊಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ. ಎನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪಮ್ಮು ವಂದಿಸಿದರು.ಅತಿಕ್ಕಮ್ಮ ಸಹಕರಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಯತೀಶ್ ಕುಮಾರ್ ಎಸ್. ಎಚ್, ಗ್ರಾಮ ಪಂಚಾಯತ್ ಸದಸ್ಯರು,ಆಶಾ ಕಾರ್ಯಕರ್ತರು, ಶಾಲೆ ಮುಖ್ಯ ಗುರುಗಳು, ಅಂಗನವಾಡಿ ಕಾರ್ಯಕರ್ತರು, ಕೊಯಿಲ ಆರೋಗ್ಯ ಕೇಂದ್ರದ ಸಮುದಾಯದ ಅಧಿಕಾರಿಗಳು, ವಿಕಲಚೇತನರು ಹಾಗೂ ವಿಕಲ ಚೇತನರ ಪೋಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿಕಲ ಚೇತನರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ದರ್ಣಪ್ಪ ಗೌಡ ರವರು ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಅತಿಕಮ್ಮ ಪಡೆದುಕೊಂಡರು.










