







ಪುತ್ತೂರು:ಪುತ್ತೂರು:ಹನುಮಗಿರಿ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ 2026ರ ಎಪ್ರಿಲ್‌ನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಕೆದಂಬಾಡಿ ಗ್ರಾಮದ ಭಕ್ತಾದಿಗಳ ಸಭೆ ಹಾಗೂ ಗ್ರಾಮ ಸಮಿತಿ ರಚನೆ ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.


ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್ ಸಿ ನಾರಾಯಣ್, ನಿತೀಶ್ ಶಾಂತಿವನ , ಶ್ರೀರಾಮ ಮಂದಿರದ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ಸಮಿತಿ ರಚಿಸಿದರು.



ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಮುಂಡಾಳಗುತ್ತು ಮೋಹನ್ ಆಳ್ವ,ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಗೌಡ ಗುತ್ತು,ಜಪಯಜ್ಞಾ ಸಮಿತಿ ಗ್ರಾಮ ಸಂಚಾಲಕರಾಗಿ ಸಂತೋಷ್ ಕುಮಾರ್ ಕೆ,ಸಹ ಸಂಚಾಲಕರಾಗಿ ಮುಂಡಾಳಗುತ್ತು ವಿನೋದ್ ಕುಮಾರ್ ರೈ,ಚಂದ್ರ ಇದ್ಪಾಡಿ,ಸೂರ್ಯ ಪ್ರಸನ್ನ,ಆನಂದ ರೈ,ರಥಯಾತ್ರೆ ಗ್ರಾಮ ಸಂಚಾಲಕರಾಗಿ ಯಶೋಧರ ಚೌಟ, ಸಹ ಸಂಚಾಲಕರಾಗಿ ನೇಮಿರಾಜ್ ರೈ ಕುರಿಕ್ಕಾರ,ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ರಾಕೇಶ್ ರೈ ಬೋಲೋಡಿಗುತ್ತು,ಸಹ ಸಂಚಾಲಕರಾಗಿ ಜನಾರ್ದನ ರೈ ಪಡ್ಡಂಬೈಲು,ರಕ್ಷಿತ್ ಇದ್ಯಪ್ಪೆ,ಜಗದೀಶ್ ರೈ ಚಾವಡಿ,ಧನಂಜಯ ಗೌಡ ಪಟ್ಟೆ,ಭಜನಾ ಸಂಕೀರ್ತನಾ ಗ್ರಾಮ ಸಂಚಾಲಕರಾಗಿ ಪದ್ಮನಾಭ ಗೌಡ ಮುಂಡಾಳ,ಮಹಿಳಾ ಸಮಿತಿ ಗ್ರಾಮ
ಸಂಚಾಲಕಿಯಾಗಿ ಸೌಮ್ಯ ಮಣಿ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ರತನ್ ರೈ ಕುಂಬ್ರ ಅವರನ್ನು ನೇಮಿಸಲಾಯಿತು.
ಈ ಸಂದರ್ಭದಲ್ಲಿ ಸೌಮ್ಯ ಮಣಿ, ಸಂತೋಷ್ ಕುಮಾರ್, ಪದ್ಮನಾಭ ಗೌಡ ಮುಂಡಾಳ, ರತನ್ ರೈ ಕುಂಬ್ರ, ಪಡ್ಡಂಬೈಲು ಜನಾರ್ದನ ರೈ, ಯಶೋಧರ ಚೌಟ, ವಿಜಯ್ ಕುಮಾರ್ ರೈ, ಜೈ ಶಂಕರ್ ರೈ, ರಾಜೀವ ರೈ, ಮುಂಡಾಳಗುತ್ತು ಮೋಹನ ಆಳ್ವ, ವಿನೋದರೈ ಮುಂದಾಳ, ಬಾಲಕೃಷ್ಣ ಚೌಟ, ರಾಕೇಶ್ ರೈ, ನೇಮಿರಾಜ ರೈ ಕುರಿಕ್ಕಾರ, ಶರತ್ ಗೌಡ ಗುತ್ತು, ಕೊಡಿಯಕ್ಕ ಮೋಹನ ಪಾಟಾಳಿ, ಪ್ರಸಾದ್ ರೈ, ವಿಶ್ವನಾಥ, ಅರುಣ ಕುಮಾರ್ ಅಳ್ವ, ಚಂದ್ರನಲಿಕೆ ಇದ್ದಾಡಿ ಉಪಸ್ಥಿತರಿದ್ದರು.










