ಪ್ರಗತಿ ಕಾಲೇಜ್ ಆಫ್ ‌ನರ್ಸಿಂಗ್ ಸೈನ್ಸ್ ನ ವಿದ್ಯಾರ್ಥಿಗಳ ಲ್ಯಾಂಪ್ ಲೈಟ್ನಿಂಗ್ , ಪ್ರತಿಜ್ಞಾ ಸ್ವೀಕಾರ

0

*ನರ್ಸಿಂಗ್ ಕೇವಲ ಪಠ್ಯ ವಿಷಯವಲ್ಲ ಅದೊಂದು ತ್ಯಾಗ, ಸೇವೆಯ ಪ್ರತೀಕವಾಗಿದೆ: ಡಾ. ದೀಪಕ್ ರೈ
*ಗ್ರಾಮೀಣ ಭಾಗದ ಮಕ್ಕಳಿಗೆ ಇದೊಂದು ಸುವರ್ಣಾವಕಾಶವಾಗಿದೆ: ಕೆ. ಪುಷ್ಪಾವತಿ
*ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ: ಡಾ. ಯು. ಶ್ರೀಪತಿ ರಾವ್

ಪುತ್ತೂರು: ಬಹಳ ಸುಂದರ ಕಾರ್ಯಕ್ರಮ ಇದಾಗಿದೆ. ಶ್ರೀಪತಿ ರಾವ್ ಓರ್ವ ಉತ್ತಮ ವೈದ್ಯರಾಗಿ ನರ್ಸಿಂಗ್ ಕಾಲೇಜ್ ಕಟ್ಟಿರುವುದು ಉತ್ತಮ ಬೆಳವಣಿಗೆ.ಪ್ರಗತಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಪುತ್ತೂರಿನ ಪ್ರಥಮ ಕಾಲೇಜುಗಳಾಗಿವೆ ಎನ್ನಲು ಕುಶಿಯಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ಉತ್ತಮ ವಾಗಲಿ. ನರ್ಸಿಂಗ್ ಕೇವಲ ಪಠ್ಯ ವಿಷಯವಲ್ಲ. ಅದೊಂದು ತ್ಯಾಗ, ಸೇವೆಯ ಪ್ರತೀಕವಾಗಿದೆ. ನಿಮ್ಮ ಸ್ಕಿಲ್ ನಿಮ್ಮ‌ ಭವಿ಼ಷ್ಯವನ್ನು ನಿರ್ದರಿಸಲಿದೆ. ಮೆಡಿಕಲ್ ಫೀಲ್ಡ್ ನಲ್ಲಿ ನಿರಂತರ ಕಲಿಕೆ‌ ಅಗತ್ಯ. ಒಂದು ಉತ್ತಮ ವಿದ್ಯಾಸಂಸ್ಥೆ ಇದಾಗಿದೆ. ಉತ್ತಮ ಶಿಕ್ಷಕ ವೃಂದವೇ ಇಲ್ಲಿದೆ ಎಲ್ಲರಿಗೂ ಒಳಿತಾಗಲಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದರು.

ಅವರು ಪುತ್ತೂರು ಟೌನ್ ಹಾಲ್ ನಲ್ಲಿ ಜ.21ರಂದು ನಡೆದ ಪ್ರಗತಿ ಕಾಲೇಜ್ ಆಫ್ ‌ನರ್ಸಿಂಗ್ ಸೈನ್ಸ್ ನ ಬಿ.ಎಸ್.ಸಿ. ನರ್ಸಿಂಗ್ ಕೋರ್ಸಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳ ಲ್ಯಾಂಪ್ ಲೈಟ್ನಿಂಗ್ ಹಾಗೂ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ. ಪ್ರಗತಿ ಅಲೈಡ್ ಹಲ್ತ್ ಸೈನ್ಸ್ ಮತ್ತು ಪಾರಾ ಮೆಡಿಕಲ್ ವಿದ್ಯಾರ್ಥಿಗಳ ಪ್ರೆಶರ್ಸ್ ಡೇ ಕಾರ್ಯಕ್ರಮವನ್ನು‌ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ಸರಕಾರಿ ಆಸ್ಪತ್ರೆಯ ನರ್ಸಿಂಗ್ ಸುಪರಿಡೆಂಟ್ ಕೆ. ಪುಷ್ಪಾವತಿ ರವರು ಮಾತನಾಡಿ ತುಂಬಾ ಸಂತಸದ ವಿಚಾರ. ಗ್ರಾಮೀಣ ಭಾಗದ ಮಕ್ಕಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ವಿದ್ಯಾರ್ಥಿಗಳ ಯಶಸ್ಸಿಗೆ ಸಿಸ್ತು, ಸಂಯಮ ಅಗತ್ಯ. ಭವಿಷ್ಯದ ಗುರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಿರಬೇಕು. ಆರೋಗ್ಯವೇ ಎಲ್ಲರ ಆಸ್ತಿ ಎಂದರು.

ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಯು. ಶ್ರೀಪತಿ ರಾವ್ ರವರು ಮಾತನಾಡಿ ಇಂದು ಬೆಳಗಿದ ದೀಪ ದೇಶವನ್ನು ಬೆಳಗಿಸುವಂತಾಗಲಿ. ಗುಣಮಟ್ಟದ ಸೇವೆ ನಮ್ಮದಾಗಬೇಕು. ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸಂಸ್ಥೆ ಹುಟ್ಟು ಸುಲಭವಲ್ಲ. ಉತ್ತಮ ಶಿಕ್ಷಕರು ಸಿಕ್ಕಿದಾಗ ಮಕ್ಕಳ ಭವಿಷ್ಯ ಉತ್ತಮವಾಗಲು ಸಾಧ್ಯ.ನನ್ನ‌ ಯಶಸ್ಸಿನ ಹಿಂದೆ ನನ್ನ ಬಳಗದ ಶ್ರಮವಿದೆ.ರೋಗಿಯನ್ನು ಗುಣಮುಖರನ್ನಾಗಿಸುವಲ್ಲಿ ವೈದ್ಯರಿಗಿಂತ ನರ್ಸ್ ಗಳ ಪಾತ್ರ ಪ್ರಮುಖವಾದುದು.ವಿದ್ಯಾರ್ಥಿಗಳ ಜೀವನ ಸಿಂಪಲ್‌ ಅಲ್ಲ. ತಾಳ್ಮೆ ಇದ್ದಲ್ಲಿ
ನಿಮ್ಮ‌ ಸಮಸ್ಯೆಗಳಿಗೆ ಪರಿಹಾರ ಬಲುಸುಲಭ.ಶಿಕ್ಷಕರ ಮಾತುಗಳನ್ನು ಪಾಸಿಟಿವ್ ಆಗಿ ತೆಗೆದುಕೊಂಡಾಗ ವಿದ್ಯಾರ್ಥಿಗಳ ಜೀವನ ಸುಂದರವಾಗುತ್ತದೆ.ಈ ಭಾಗದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಉತ್ತಮ ಅವಕಾಶ ಕಲ್ಪಿಸಿದೆ. ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ. ಉತ್ತಮವಾಗಿ ವಿದ್ಯಾಭ್ಯಾಸ ಮಾಡಿದಲ್ಲಿ ಉನ್ನತ ದರ್ಜೆಗೇರಲು ಸಾಧ್ಯ ಎಂದರು.

ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿ ಡಾ. ಸುಧಾ ಎಸ್.ರಾವ್, ಪ್ರಗತಿ ಗ್ರೂಪ್ ಆಪ್ ಕಾಲೇಜಿನ ಆಡಳಿತಾಧಿಕಾರಿಪ್ರೀತಾ ಹೆಗ್ಡೆ, ಪ್ರಗತಿ ಎಲೈಡ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲರದ ಮಾನಸಾ ಪಿ. ಮೊದಲಾದವರು ವೇದಿಕೆಯಲ್ಲಿದ್ದರು.ಇದೇ ಸಂದರ್ಭದಲ್ಲಿ ಡಿಸ್ಟಿಂಕ್ಷನ್ ಪಡೆದ ಪ್ರಗತಿ ಅಲೈಡ್ ಹೆಲ್ತ್ ಸೈನ್ಸ್ ನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಪ್ರಗತಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಜಿ. ಪ್ರತಿಜ್ಞಾ ವಿಧಿ ಬೋಧಿಸಿದರು.


ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲರಾದ ಚೈತ್ರಾ ಕೆ. ವಂದಿಸಿದರು.ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ಕುಮಾರ್ ರೈ, ಪ್ರಗತಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು , ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಪನ್ಯಾಸಕಿ ಅನಿತಾ ಸ್ವಾಗತಿಸಿದರು.ಶ್ಯಾಲೆಟ್ ಮತ್ತು ಪೂಜಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಿತು‌.

LEAVE A REPLY

Please enter your comment!
Please enter your name here