







ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವತದಲ್ಲಿ ಜ.20ರಂದು ಪ್ರಾರಂಭಗೊಂಡಿದೆ.



ಜ.20ರಂದು ಬೆಳಗ್ಗೆ 9 ಗಂಟೆಗೆ ಉಗ್ರಾಣ ಮುಹೂರ್ತ, ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಸಂಜೆ 7 ಗಂಟೆಯಿಂದ ಶ್ರೀಕೃಷ್ಣ ಜನ್ಮ ಕಂಸವಧೆ’ ಯಕ್ಷಗಾನ ಪ್ರದರ್ಶನ ಮತ್ತು ನೃತ್ಯ ನಿನಾದ ಕಾರ್ಯಕ್ರಮ ನಡೆಯಿತು.



ಜ.21ರಂದು ಬೆಳಗ್ಗೆ 9 ಗಂಟೆಗೆ ಆಶ್ಲೇಷ ಬಲಿಪೂಜೆ, ನಾಗ ದೇವರಿಗೆ ಕಲಶಾಭಿಷೇಕ, ತಂಬಿಲಸೇವೆ, ಶ್ರೀ ಮಹಾವಿಷ್ಣು ಆರಾಧನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಬಾಯಂಬಾಡಿ ಶ್ರೀ ಷಣ್ಮುಖದೇವ ಭಜನಾ ತಂಡ, ಪಾಂಬಾರು ಸ್ಪಂದನಾ ಜ್ಞಾನ ವಿಕಾಸ ತಂಡ,ಪೆರ್ಲಂಪಾಡಿ ಆದಿಶಕ್ತಿ ಭಜನಾ ಮಂಡಳಿ,ಕಂಟ್ರಮಜಲು ವಾಗ್ದೇವಿ ಮಹಿಳಾ ಭಜನಾ ಮಂಡಳಿ, ಕೊಳ್ತಿಗೆ-ಪೆರ್ಲಂಪಾಡಿ ಮರಾಠಿ ಸಮಾಜ ಸೇವಾ ಸಂಘ ಕುಣಿತ ಭಜನಾ ತಂಡ,ಕಲಾಯಿ ಮಹಮ್ಮಾಯಿ ಭಜನಾ ತಂಡಗಳಿಂದ ಭಜನೆ ಮತ್ತು ಕುಣಿತ ಭಜನೆ ನಡೆಯಿತು.
ರಾತ್ರಿ ಶ್ರೀದೇವರಿಗೆ ಮಹಾಪೂಜೆ ನಡೆದು ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ, ಉತ್ಸವ, ರಥೋತ್ಸವ, ಕಟ್ಟೆಪೂಜೆ, ಅಶ್ವತ್ಥಕಟ್ಟೆಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗಂಗಾಧರ ಗೌಡ ಕೆಮ್ಮಾರ,ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ಆರ್.ಲಕ್ಷ್ಮಣ ಗೌಡ ಕುಂಟಿಕಾನ ಸ್ಥಳಮನೆ,ಅಧ್ಯಕ್ಷ ಮುರಳೀಧರ ಎಸ್.ಪಿ.ಕೆಮ್ಮಾರ,ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ರೈ ದುಗ್ಗಳ ,ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಬಡೆಕ್ಕಿಲಾಯ,ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಶ್ರೀಧರ ಪೂಜಾರಿ ಚಾಳೆಪಡ್ಪು,ಕೋಶಾಧಿಕಾರಿ ಮುರಳೀಧರ ಎಸ್.ಪಿ.ಕೆಮ್ಮಾರ,ಸದಸ್ಯರಾದ ಶಿವರಾಮ ಭಟ್ ಸಿ.ಎಚ್,ಮಾಯಿಲಪ್ಪ ರೈ ಕೊರ್ಬಂಡ್ಕ ಬೀಡು,ಗಣೇಶ್ ಶೇಡಿಗುರಿ,ವಸಂತಿ ಕೊರ್ಬಂಡ್ಕ ಸೇರಿದಂತೆ ಉಪಸಮಿತಿಗಳ ಸದಸ್ಯರು,ಭಕ್ತಾದಿಗಳು ಉಪಸ್ಥಿತರಿದ್ದರು.
ಇಂದು ರಥೋತ್ಸವ, ದರ್ಶನ ಬಲಿ
ಜ.22 ರಂದು ಬೆಳಗ್ಗೆ 8 ಗಂಟೆಗೆ ಮಹಾಗಣಪತಿ ಹೋಮ, ಕಲಶಾಭಿಷೇಕ, ಶ್ರೀ ದೇವರ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ ,ದರ್ಶನ ಬಲಿ, ಬಟ್ಟಲು ಕಾಣಿಕೆಯೂ ನೆರವೇರಲಿದೆ. ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 3ರಿಂದ ದೇವಸ್ಥಾನದಿಂದ ದೈವಗಳ ಭಂಡಾರವೆತ್ತುವುದು, ರಾತ್ರಿ 7 ರಿಂದ ರಂಗಪೂಜೆ, ರಾತ್ರಿ 7.30ರಿಂದ ವ್ಯಾಘ್ರ’ಚಾಮುಂಡಿ, ವಾರಾಹಿ ದೈವದ ನೇಮ, ಕಾಣಿಕೆ ಹರಕೆ ಸಮರ್ಪಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಜ.23ರಂದು ಬೆಳಗ್ಗೆ 6ರಿಂದ ಶ್ರೀ ಧೂಮ್ರ-ಧೂಮಾವತಿ, ರಕ್ತೇಶ್ವರಿ ಮತ್ತು ಶಿರಾಡಿ ದೈವಗಳ ನೇಮ ನಡಾವರಿ, ಕಾಣಿಕೆ ಹರಕೆ ಸಮರ್ಪಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.









