ಈಶ್ವರಮಂಗಲ: ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ, ಪೂರ್ವಭಾವಿ ಸಭೆ

0

ಪುತ್ತೂರು: ಈಶ್ವರಮಂಗಲ ಮಂಡಲ ನೆಟ್ಟಣಿಗೆ ಮುಡ್ನೂರು ಗ್ರಾಮ ಮತ್ತು ಪಡುವನ್ನೂರು ಗ್ರಾಮ ವತಿಯಿಂದ ಫೆ.1 ರಂದು ನಡೆಯುವ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಪೂರ್ವಭಾವಿ ಸಭೆಯು ಜ.21ರಂದು ಹನುಮಗಿರಿಯಲ್ಲಿ ನಡೆಯಿತು.

ಹಿಂದೂ ಸಮಾಜದ ಏಕತೆಯನ್ನು ಬಲಗೊಳಿಸುವುದರೊಂದಿಗೆ ಪ್ರತಿ ಮನೆ ಮನಗಳಲ್ಲೂ ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆ ಬಲಪಡಿಸುವ ಉದ್ದೇಶದಿಂದ ಫೆ.1ರಂದು ನಡೆಯಲಿರುವ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆಯನ್ನು ಲಕ್ಷ್ಮೀ ನಾರಾಯಣ ಕುಂಜತ್ತಾಯ ಅವರು ಶ್ರೀ ಪಂಚಮುಖಿ ಆಂಜನೇಯನ ಸನ್ನಿಧಾನದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಈಶ್ವರಮಂಗಲ ಮಂಡಲ ಇದರ ಸಂಯೋಜಕ ಶಿವರಾಮ ಪಿ ಈಶ್ವರಮಂಗಲ, ಸಹ ಸಂಯೋಜಕ ವಿನೋದ್ ರಾಜ್ ರೈ ಕರ್ಪುಡಿಕಾನ, ರವಿಕಿರಣ ಶೆಟ್ಟಿ ಬೆದ್ರಾಡಿ, ಮಂಜುನಾಥ ರೈ ಸಾಂತ್ಯ, ಶಿವರಾಮ ಶರ್ಮ ಕತ್ರಿಬೈಲು, ಆನಂದ ರೈ ಸಾಂತ್ಯ, ಪದ್ಮನಾಭ ಗೌಡ ಮಡ್ಯಲಮಜಲು, ರಾಘವೇಂದ್ರ ಆಚಾರ್ಯ, ಜಯಾನಂದ ಕೋರಿಗದ್ದೆ, ಸನತ್ ರೈ, ಪ್ರವೀಣ್ ರೈ, ಮಹಾಲಿಂಗ ಪಾಟಾಳಿ, ಶಿವಪ್ಪ, ರಾಜೇಂದ್ರ ಪ್ರಸಾದ್ ರೈ ಮೇನಾಲ, ಪ್ರವೀಣ್ ರೈ ಮೇನಾಲ, ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ಮೋನಪ್ಪ ಪುಂಡಿಕಾಯಿ, ದೀಪಕ್ ಮುಂಡ್ಯ, ಭರತ್ ರೈ ಮೂಡಾಯೂರು, ವೆಂಕಟೇಶ್ ಕನ್ನಡ್ಕ, ಅಚ್ಯುತ್ತ ಭಟ್ ಸುಳ್ಯಪದವು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here