ವಿಭಿನ್ನ ಶೈಲಿಯ ಫಿಶ್ ತವಾ ಫ್ರೈಗೆ ಗ್ರಾಹಕರು ಫಿದಾ : ಪುತ್ತೂರಿನಲ್ಲೊಂದು ಫೈವ್ ಸ್ಟಾರ್ ಫುಡ್ ರೆಸಿಪಿ ಹೊಟೇಲ್

0

ಮಧ್ಯಾಹ್ನದ ಹೊತ್ತಿಗೆ ಘಮ ಘಮ ಪರಿಮಳದೊಂದಿಗೆ, ಶುದ್ದ, ಆರೋಗ್ಯಕರ ಊಟ ಸಿಕ್ಕರೆ ಯಾರು ತಾನೆ ಇಷ್ಟಪಡುವುದಿಲ್ಲ. ಮನೆಯೂಟದಂತಿರುವ ಹೊಟೇಲ್ ಫುಡ್ ಸಿಗದೆ ಹೈರಾಣಾಗಿದ್ದೇವೆ ಎನ್ನೋ ಪುತ್ತೂರಿನ ನಿತ್ಯ ಉದ್ಯೋಗಿಗಳಂತೂ ಮೀನು ಊಟಕ್ಕೆ ಇಲ್ಲಿಗೆ ಬಂದರೆ ಮತ್ತೆ ಮತ್ತೆ ಬಂದೇ ಬರ್ತಾರೆ… ಪುಡಿ ಪುಡಿ ಕ್ರಿಸ್ಪಿ ಕ್ರಿಸ್ಪಿ ಮಸಾಲೆ, ಫ್ರೆಶ್ ಮೀನು, ಕಬಾಬ್, ವೆರೈಟಿ ಚಿಕನ್ ಐಟಂ ಗಳಿಗೆ ತಕ್ಕಂತೆ ಮೀನು ಸಾರಿನ ಊಟ, ಬಿರಿಯಾನಿ ಪ್ರಿಯರಿಗೆ ದೊನ್ನೆ ಬಿರಿಯಾನಿ, ಧಮ್ ಬಿರಿಯಾನಿ… ಹೀಗೆ ಫೈವ್ ಸ್ಟಾರ್, ತ್ರಿಸ್ಟಾರ್ ಹೊಟೇಲ್‌ನಲ್ಲಿರುವ ಫುಡ್ ಪುತ್ತೂರಿನಲ್ಲಿ ಸಿಗುತ್ತೆ ಅಂದಾದರೆ ನೀವೂ ಇಲ್ಲಿಗೆ ಒಮ್ಮೆಯಾದರೂ ಭೇಟಿ ಕೊಟ್ಟೇ ಕೊಡ್ತೀರಿ..‌


ಕರ್ನಾಟಕದ ವಿವಿಧ ಕಡೆ ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಫುಡ್ ಕನ್ಸಲ್ಟೆನ್ಸಿಯಾಗಿ 23 ವರ್ಷಗಳ ಅನುಭವವಿರುವ ಶಿವಪ್ರಸಾದ್ ರವರು ತನ್ನ ಊರಿನಲ್ಲಿ ಇಂಥದ್ದೊಂದು ಪರಿಕಲ್ಪನೆಯಲ್ಲಿ ಪುತ್ತೂರಿಗರಿಗೆ ಮತ್ತು ಪುತ್ತೂರಿಗೆ ಪರವೂರಿನಿಂದ ಬರುವವರಿಗೆ ಸಖತ್ ಮನೆಯೂಟದ ಶೈಲಿಯ ಮಾಂಸಾಹಾರಿ, ಸಸ್ಯಾಹಾರಿ ಊಟ ನೀಡುತ್ತಿದ್ದಾರೆ.


ಪುತ್ತೂರು ಮುಖ್ಯ ಕೇಂದ್ರಭಾಗದಿಂದ ಅನತಿ ದೂರದಲ್ಲಿ ಅಂದರೆ ಕೋರ್ಟು ರಸ್ತೆಯ ಬಂಗಾರದ ಕಟ್ಟೆ ಜ್ಯುವೆಲ್ಲರಿ ಮುಂಭಾಗದಲ್ಲಿ ಈ ಹೊಟೇಲ್ ಇದೆ. ಅಂದ ಹಾಗೆ ಪಂಚತಾರಾ ಹೊಟೇಲ್ ಫುಡ್ ಮೆನು ಹೊಂದಿರುವ ಈ ಹೊಟೇಲ್ ಹೆಸರು ಪಂಚರತ್ನ.. ಇಲ್ಲಿ ಮನೆಯಲ್ಲೇ ಕುಟ್ಟಿ ಪುಡಿ ಮಾಡಿದ ಮಸಾಲೆ ಹಾಗೂ ಶುದ್ದ ಗಾಣದ ತೆಂಗಿನ ಎಣ್ಣೆಯಿಂದಲೇ ಮಾಡಿದ ಕೈಗೆಟಕುವ ದರದ ಫಿಶ್ ತವಾ ಫ್ರೈಗೆ ಅಂತೂ ಗ್ರಾಹಕರು ಫಿದಾ ಆಗಿಬಿಟ್ಟಿದ್ದಾರೆ.‌


ಹೊಟೇಲ್ ಮಾಲೀಕ ಶಿವಪ್ರಸಾದ್ ರವರು ಕರ್ನಾಟಕದ ಅನೇಕ ಪ್ರಾದೇಶಿಕ ರೆಸಿಪೀ ಮಾಡುವುದರಲ್ಲಿ ನಿಸ್ಸೀಮ ಎನಿಸಿಕೊಂಡಿದ್ದಾರೆ. 23 ವರ್ಷಗಳಿಂದ ಹೊಟೇಲ್‌ಗಳಲ್ಲಿ ಕನ್ಸಲ್ಟೆನ್ಸಿಯಾಗಿ ಸೌತ್ ಇಂಡಿಯನ್ ಐಟಂಗಳಲ್ಲದೇ, 1000 ಮೇಲೆ ರೆಸಿಪೀ ಮಾಡುವ ಓರ್ವ ಬಾಣಸಿಗ ಎನಿಸಿಕೊಂಡಿರುವ ಶಿವಪ್ರಸಾದ್ ರವರು ದೂರದೂರಿನಲ್ಲಿ ಕೆಲಸ ಮಾಡಿದವರು. ಬೆಂಗಳೂರಿನ ಫೈವ್ ಸ್ಟಾರ್, ತ್ರಿಸ್ಟಾರ್ ಹೊಟೇಲ್, ಮಂಗಳೂರಿನ ಹೊಟೇಲ್ ನಾರಾಯಣ, ಕೆನರಾ ಕ್ಲಬ್ ಹೀಗೆ ನಾನಾ ಹೊಟೇಲ್‌ಗಳಲ್ಲಿ ಕೆಲಸ ಮಾಡಿ ಅನುಭವ ಸಾಽಸಿದ್ದಾರೆ. ಅದೇ ಐಟಂಗಳನ್ನು ಮನೆಯೂಟದ ರೀತಿಯಲ್ಲಿ ‘ನಮ್ಮೂರಿನಲ್ಲಿ ಕೊಟ್ಟರೆ ಹೇಗೆ ಎಂದು ಆಲೋಚನೆ ಮಾಡಿ ಯಾವುದೇ ಕಲರ್, ಕೆಮಿಕಲ್ ಬಳಸದೆ ಮನೆಯೂಟದಂತೆ ಕೊಡುವ ಪ್ರಯತ್ನದಲ್ಲಿ ಶಿವಪ್ರಸಾದ್ ಯಶಸ್ಸು ಕಂಡಿದ್ದಾರೆ. ಕ್ವಾಲಿಟಿಯಲ್ಲಿ ಯಾವುದೇ ಕಾಂಪ್ರಮೈಸ್ ಮಾಡದಿದ್ದಾಗ ಟೇಸ್ಟ್ ಚೆನ್ನಾಗಿ ಬರುತ್ತದೆ’ ಎನ್ನುವುದು ಶಿವಪ್ರಸಾದ್‌ರವರ ವಿಶ್ವಾಸದ ಮಾತುಗಳು.‌


ಮಹಿಳೆಯರೇ ಇಲ್ಲಿ ಸರ್ವ್ ಮಾಡ್ತಾರೆ..:
ಹೊಟೇಲ್ ಮ್ಹಾಲೀಕ ಇಲ್ಲಿ ಎದುರು ಕಾಣಸಿಗಲ್ಲ. ಮಧ್ಯಾಹ್ನವಂತೂ ಕಿಚನ್ ರೂಂ ನಿಂದ ಇವರ ವಾಯ್ಸ್ ಮಾತ್ರ ಕೇಳಿಬರುತ್ತದೆ. ಬಂಗುಡೆ ಮಸಲಾ ಫ್ರೈ ರೆಡೀ, ಅಂಜಲ್ ಫ್ರೈ ರೆಡಿ.. ಟೇಬಲ್ ನಂ. 3 ಬಿರಿಯಾನಿ ರೆಡಿ.. ಹೀಗೆ ಹೇಳ್ತಿರಬೇಕಾದರೆ ಮುಂಭಾಗದಲ್ಲಿರುವ ಮಹಿಳಾ ಸರ್ವರ್ ಗಳು ನಗುಮೊಗದಿಂದ ಪಾದರಸದಂತೆ ಓಡಾಡುತ್ತಾ ಗ್ರಾಹಕರಿಗೆ ಫುಡ್ ಸರ್ವ್ ಮಾಡುವುದು ಇಲ್ಲಿನ ಸ್ಪೆಷಲ್. ಶಿವಪ್ರಸಾದ್ ರವರ ಪತ್ನಿ ಅನುಶಾ ಹಾಗೂ ನಾದಿನಿ ಅಶ್ವಿನಿರವರದ್ದು ಪಟಾಪಟ್ ಸರ್ವಿಂಗ್ ಹಾಗೂ ಬಿಲ್ಲಿಂಗ್.. ನೈರ್ಮಲ್ಯ ಮತ್ತು ಮಹಿಳಾ ಸಬಲೀಕರಣಕ್ಕೆ ಈ ಹೊಟೇಲ್ ಹೆಚ್ಚು ಒತ್ತು ನೀಡಿದೆ. ಹಾಗಾಗಿ ಗ್ರಾಹಕರೂ ಮನೆಯ ವಾತಾವರಣದಲ್ಲಿ ಊಟಕ್ಕೆ ಫುಲ್ ಖುಷ್ ಆಗಿಬಿಟ್ಟಿದ್ದಾರೆ.


ಏಳೂ ದಿನ ಏಳು ಬಿರಿಯಾನಿ ಸ್ಪೆಷಲ್:
ಮಧ್ಯಾಹ್ನ ಪಂಚರತ್ನದಲ್ಲಿ ಫಿಶ್ ಮೀಲ್, ತಾಳಿ, ಗಂಜಿ ಊಟ, ವೆಜ್ ತಾಲಿ, ನಾನ್‌ವೆಜ್ ತಾಲಿ, ಚಿಕನ್ ಮತ್ತು ಮಟನ್ ಬಿರಿಯಾನಿ ಐಟಂಗಳಿರುತ್ತವೆ. ವಾರದ ಏಳೂ ದಿನ ಬೇರೆ ಬೇರೆ ರೀತಿಯ ಬಿರಿಯಾನಿ ಸ್ಪೆಷಲ್ ಇರುತ್ತದೆ. ಪಂಚರತ್ನ ಸ್ಪೆಷಲ್ ಬಿರಿಯಾನಿ, ಅಂಬುರು ಬಿರಿಯಾನಿ, ಬೆಳಗಾಂ ಬಿರಿಯಾನಿ, ಭಟ್ಕಳ ಬಿರಿಯಾನಿ, ಮಡಿಕೇರಿ ಕೂರ್ಗ್ ಬಿರಿಯಾನಿ, ಆಂಧ್ರ, ಚೆನೈ ಮಾದರಿಯ ಬಿರಿಯಾನಿ ಹೀಗೆ, ನಾನಾ ವಿಧದ ಬಿರಿಯಾನಿ ಇಲ್ಲಿರುತ್ತದೆ. ಮಧ್ಯಾಹ್ನ 3 ಗಂಟೆಯೊಳಗಡೆ ಬಿರಿಯಾನಿ ಖಾಲಿಯಾಗುತ್ತಿದೆ.


ಚಿಕನ್ ಕಡಿಪತ್ತ ಸ್ಪೆಷಲ್:
ಚಿಕನ್ ಐಟಂಗಳಲ್ಲಿ ಚಿಕನ್ ಚಿಲ್ಲಿ, ಘೀ ರೋಸ್ಟ್, ಆಂಧ್ರ ಚಿಕನ್, ಪೆಪ್ಪರ್ ಚಿಕನ್ ಇತ್ಯಾದಿಗಳು ಇವೆ. ಪುತ್ತೂರಿಗರಿಗೆ ಗ್ರೀನ್ ಚಿಕನ್ ಸುಕ್ಕ ಫೆವರೀಟ್ ಆಗಿದೆ. ಅದನ್ನೂ ಮಾಡಿಕೊಡುತ್ತಿದ್ದಾರೆ. ‘ಚಿಕನ್ ಕಡಿಪತ್ತ’ ಪಂಚರತ್ನ ಸ್ಪೆಷಲ್ ಚಿಕನ್ ರೆಸಿಪಿ.


ಸಾಂಪ್ರದಾಯಿಕ ಫುಡ್:
ಪಂಚತಾರಾ ರೆಸಿಪಿ ಐಟಂಗಳಿದ್ದರೂ ಇಲ್ಲಿ ತುಳುನಾಡಿನ ಸಾಂಪ್ರದಾಯಿಕ ಫುಡ್ ಶೈಲಿ ಕಾಣುತ್ತದೆ. ಟೇಬಲ್ ಗೆ ಪ್ರಥಮವಾಗಿ ಸರ್ವ್ ಆಗುವುದೇ ಇಲ್ಲಿ ತುಳುನಾಡಿನ ಗಂಜಿ ತೆಲಿ.‌


ಈ ಸಮಯದಲ್ಲಿ ಬನ್ನಿ..:
ಬೆಳಿಗ್ಗೆ 9.30 ರಿಂದ 11.30 ರವರೆಗೆ ಬ್ರೇಕ್ ಫಾಸ್ಟ್. ಇಡ್ಲಿ, ಪಜೆ ಮಡಿಕೆಯಂತಹ ಸಾಂಪ್ರದಾಯಿಕ ತಿಂಡಿಗಳು, 11.30 – 4.30 ಮಧ್ಯಾಹ್ನ ಊಟ, ಸಂಜೆ ತುಳುನಾಡಿನ ಫೆವರೀಟ್ ಪುಂಡಿಗಸಿ, ದೋಸೆ, ಸಾಲ್ಟ್ ಪೆಪ್ಪರ್ ಕ್ರಿಸ್ಪಿ ಕಾರ್ನ್. ಇದು ಪಂಚರತ್ನ ಇವಿನಿಂಗ್ ಚಾಟ್ಸ್ ಸ್ಪೆಷಲ್. ರಾತ್ರಿ 7 ರಿಂದ 10.೦೦ ರವರೆಗೆ ರಾತ್ರಿ ಊಟ ಇರುತ್ತದೆ. ಪಾರ್ಸೆಲ್ ಸರ್ವೀಸ್ ಕೂಡಾ ಲಭ್ಯವಿದ್ದು, ಕ್ಯಾಟರಿಂಗ್ ಸರ್ವೀಸ್ ಇದೆ.


ಸೆಲೆಬ್ರೇಷನ್ ಪಾರ್ಟಿಗೂ ಹೇಳಿಮಾಡಿಸಿದ ಜಾಗ:
ಬರ್ತ್‌ಡೇ ಪಾರ್ಟಿ, ಯಾವುದೇ ಸೆಲೆಬ್ರೇಷನ್ ಪಾರ್ಟಿಗೂ ಬೇಕಾದ ಐಟಂಗಳನ್ನು ಮಾಡಿಕೊಡುವ ವ್ಯವಸ್ಥೆ ಇದೆ. ಲಿಮಿಟೆಡ್ ಮಂದಿ ಬಂದು ಸೆಲೆಬ್ರೇಷನ್ ಮಾಡುವುದಿದ್ದರೂ ಇಲ್ಲಿ ಅವಕಾಶವಿದೆ.


ಪಾರ್ಕಿಂಗ್ ವ್ಯವಸ್ಥೆಯಿದೆ:
ಪುತ್ತೂರಿನ ಕೋರ್ಟುರಸ್ತೆ ಅಂದೊಡನೆ ವಾಹನ ಪಾರ್ಕಿಂಗ್ ಸ್ವಲ್ಪ ಕಷ್ಟ ಎಂದೆನಿಸುತ್ತದೆ. ಆದರೆ ಈ ಹೊಟೇಲ್ ಪಕ್ಕದಲ್ಲಿ ದ್ವಿಚಕ್ರ, ಕಾರುಗಳ ಪಾರ್ಕಿಂಗ್‌ಗೆ ಸ್ಥಳಾವಕಾಶವಿದ್ದು, ಗ್ರಾಹಕರ ಆ ಕೊರತೆಯನ್ನು ಭರ್ತಿ ಮಾಡಿದೆ.


ತುಳುನಾಡಿಗರು, ತುಳುನಾಡಿಗೆ ಬಂದ ಪರವೂರಿಗರಂತೂ ನಾನ್‌ವೆಜ್ ಪ್ರಿಯರಾದರೆ ‘ಕುಡ್ಲದ ಮೀನ್’ ಊಟ ಟೇಸ್ಟ್ ಮಾಡದೇ ಹೋಗಲ್ಲ. ಅದರಲ್ಲೂ ಎಲ್ಲಾ ರೀತಿಯಿಂದ ಬೆಳೆಯುತ್ತಿರುವ ಪುತ್ತೂರಿನಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಪರವೂರಿನವರೂ ಬರುತ್ತಿದ್ದಾರೆ. ಮಂಗಳೂರು ಶೈಲಿಯ ಮೀನು ಊಟ ಸವಿಯಲು ಪುತ್ತೂರಿನ ಕೋರ್ಟು ರಸ್ತೆಯಲ್ಲಿ ಪಂಚರತ್ನ ಹೊಟೇಲ್ ಗೆ ಒಮ್ಮೆ ನೀವೂ ಭೇಟಿ ಕೊಟ್ಟು ನೋಡಿ..

ಇದು ಪಂಚರತ್ನದಲ್ಲಿ ಮಾತ್ರ.
ಮನೆಯಲ್ಲೇ ಕುಟ್ಟಿ ಪುಡಿ ಮಾಡಿದ ಮಸಾಲೆ, ಶುದ್ದ ತೆಂಗಿನ ಎಣ್ಣೆಯಲ್ಲಿ ಕರಿದ ಫಿಶ್ ತವಾ ಫ್ರೈ ಮಿತದರದಲ್ಲಿ ನೀಡುತ್ತಿರುವುದು ಪಂಚರತ್ನ ಹೊಟೇಲ್ ವಿಶೇಷತೆಯಾಗಿದೆ.

ಹೋಟೆಲ್
ಪಂಚರತ್ನ ಶ್ರೀ ಬಂಗಾರದ ಕಟ್ಟೆ ಮುಂಭಾಗ, ಕೋರ್ಟ್ ರಸ್ತೆ ಪುತ್ತೂರು
8050457329

LEAVE A REPLY

Please enter your comment!
Please enter your name here