







ನೆಲ್ಯಾಡಿ: ಸಂತಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿ ಇದರ ಕಾರ್ಯದರ್ಶಿಯಾಗಿ ಅಬ್ರಹಾಂ ವರ್ಗೀಸ್ ಅವರು ಮರು ನೇಮಕಗೊಂಡಿದ್ದಾರೆ.


ಹೊನ್ನಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಮಾರ್ಕೋಸ್ ಮಾರ್ ಕ್ರಿಸ್ಟೋಮಸ್ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡು ಈ ನೇಮಕ ಮಾಡಲಾಗಿದೆ. ಅಬ್ರಹಾಂ ವರ್ಗೀಸ್ ಅವರು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 48 ವರ್ಷಗಳ ಸುಧೀರ್ಘ ಶೈಕ್ಷಣಿಕ ಅನುಭವ, ಅಪಾರ ಜ್ಞಾನ ಹಾಗೂ ದೃಢ ಆಡಳಿತ ಸಾಮರ್ಥ್ಯ ಹೊಂದಿರುವ ಅಬ್ರಹಾಂ ವರ್ಗೀಸ್ ಅವರು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದ ಫಲವಾಗಿ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟೂ ಉನ್ನತ ಮಟ್ಟಕ್ಕೆ ತಲುಪಲಿ ಎಂಬ ಉದ್ದೇಶವಿಟ್ಟುಕೊಂಡು ಅಬ್ರಹಾಂ ವರ್ಗೀಸ್ ಅವರನ್ನು ಮರು ನೇಮಕ ಮಾಡಲಾಗಿದೆ. ಸಂಸ್ಥೆ ಸುವರ್ಣ ಮಹೋತ್ಸವದತ್ತ ಸಾಗುತ್ತಿರುವ ಹಂತದಲ್ಲಿ ಅಬ್ರಹಾಂ ವರ್ಗೀಸ್ ಅವರ ಮರು ನೇಮಕ ಮಾಡಲಾಗಿದೆ.



ಅಬ್ರಹಾಂ ವರ್ಗೀಸ್ ಅವರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ನೆಲ್ಯಾಡಿ ಲೀಜನ್ ಸ್ಥಾಪಕ ಅಧ್ಯಕ್ಷರಾಗಿ, ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷರಾಗದ್ದು ಹಲವು ಸಂಘಟನೆಗಳಲ್ಲೂ ತೊಡಗಿಕೊಂಡಿದ್ದಾರೆ.










