ಹಿರೆಬಂಡಾಡಿ ಸೆಟ್ಲೆಪಾಲು ನಿವಾಸಿ ನಿವೃತ್ತ ಮುಖ್ಯ ವಿಜ್ಞಾನಿ ಡಾ.ಬಿ.ಸುಂದರ್ ರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಜ.9 ರಂದು ನಿಧನರಾದ ಕೊಯಂಬುತ್ತೂರು ICAR ಕಬ್ಬು ಸಂಶೊಧನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರೆಬಂಡಾಡಿ ಸೆಟ್ಲೆಪಾಲು ನಿವಾಸಿ ಡಾ.ಬಿ ಸುಂದರ್ ರವರ ಉತ್ತರ ಕ್ರಿಯೆ ಮತ್ತು ಶ್ರದ್ದಾಂಜಲಿ ಸಭೆ ಜ.22 ರಂದು ಮದ್ಯಾಹ್ನ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು.


ನುಡಿನಮನ ಸಲ್ಲಿಸಿದ ನವದೆಹಲಿಯಲ್ಲಿರುವ ಜವಾಹರ್ ಲಾಲ್ ನೆಹರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಾಯನ ಮತ್ತು ಯೋಜನಾ ವಿಭಾಗದ ಪ್ರಾಧ್ಯಾಪಕ ಡಾ .ರಮೇಶ್ ಸಾಲಿಯಾನ್ ಮಾತನಾಡಿ, ಕೊಯಂಬುತ್ತೂರು ಇಚರ ಕಬ್ಬು ಸಂಶೊಧನ ಕೇಂದ್ರದಲ್ಲಿ ಮುಖ್ಯ ವಿಜ್ಞಾನಿಯಾಗಿ, ಕ್ರಾಪ್ ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್ ಮುಖ್ಯಸ್ಥರಾಗಿ, ನಿರ್ದೇಶಕರಾಗಿ, ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ತಮಿಳುನಾಡು ಯುನಿವರ್ಸಿಟಿಯಲ್ಲಿ ಚಿನ್ನದ ಪದಕದೊಂದಿಗೆ ತನ್ನ PhD ಪದವಿಯನ್ನು ಪೂರೈಸಿದ ಪ್ರತಿಭಾವಂತ.ಕೃಷಿ ಕ್ಷೇತ್ರದ ಸಂಶೋಧನೆಗಾಗಿ 1987 ರಲ್ಲಿ ಜವಹರ್‌ಲಾಲ್ ನೆಹರೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತರಾಗಿದ್ದಾರೆ.ಕೃಷಿ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಅಪ್ರತಿಮ ಸಾಧಕ. ನಿವೃತ್ತಿಯ ಬಳಿಕವೂ ತನ್ನ ಕಾರ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರೊಂದಿಗೂ ಉತ್ತಮ ಬಾಂದವ್ಯದಿಂದ ಬದುಕಿದವರು ಎಂದು ಅವರ ವೃತ್ತಿ ಜೀವನವನ್ನು ಪರಿಚಯಿಸಿದರು.

ಸುರೇಶ್ ಸಾಲಿಯಾನ್ ಮಾತನಾಡಿ, SSLC, PUC ಪುಚ ಹಾಗೂ ಉನ್ನತ ವ್ಯಾಸಂಗವನ್ನು ಕೂಡ ಉನ್ನತ ರ್‍ಯಾಂಕ್‌ನೊಂದಿಗೆ ಪೂರ್ಣಗೊಳಿಸಿ ನಮ್ಮ ಮನೆಗೆ ಮಾತ್ರವಲ್ಲ ಹಿರೆಬಂಡಾಡಿ ಗ್ರಾಮಕ್ಕೆ ಹೆಸರು ತಂದ ಪ್ರತಿಭಾವಂತ.ನಮಗೆಲ್ಲ ಮಾರ್ಗದರ್ಶಕರಾಗಿದ್ದ ಇವರು ನಮ್ಮ ಬದುಕಿನ ಆದರ್ಶ ವ್ಯಕ್ತಿ. ಎಷ್ಟೆ ಉನ್ನತ ಸ್ಥಾನಕ್ಕೆರಿದರು ಅವರ ಸರಳತೆ, ಆತ್ಮೀಯತೆ,ಸಂಸ್ಕಾರಯುತ ಬದುಕು ನಮಗೆಲ್ಲರಿಗೂ ಅದರ್ಶಯುತವಾಗಿತ್ತು ಎಂದರು.

ಪಿಡ್ಬ್ಯೂಡಿ ಕಾಂಟ್ರಾಕ್ಟರ್ ಸತೀಶ್ ಕುಮಾರ್ ಬಿ.ಎಸ್.ಮಾತನಾಡಿ, ಉನ್ನತ ಜ್ಞಾನವನ್ನು ಹೊಂದಿದ ಅಪಾರ ಮೇದಾವಿ,ಮಿತಭಾಷಿ,ಇವರದು ಎಲ್ಲರೂ ಅನುಸರಿಸ ಬಹುದಾದ ವ್ಯಕ್ತಿತ್ವ.ಇವರು ನಮ್ಮನ್ನಗಲಿದರೂ ನೆನಪು ಶಾಶ್ವತ. ಅವರ ಆತ್ಮಕ್ಕೆ ಪರಮಾತ್ಮನ ಸನ್ನಿದಿಯಲ್ಲಿ ಸದ್ಗತಿ ದೊರೆಯಲಿ ಎಂದರು.

ಮೃತರ ಪುತ್ರ ಹರ್ಷವರ್ಧನ್ ಮಾತನಾಡಿ, ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಿ ನಮ್ಮ ಸಂತೋಷವೇ ಅವರ ಸಂತೋಷವೆಂದು ಬದುಕಿದ ನನ್ನ ತಂದೆ ನನ್ನ ಬದುಕಿನ ಹೀರೊ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು. ಸುರೇಶ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಮೃತರ ಪತ್ನಿ ಅರುಣಾ ಸುಂದರ್,ಪುತ್ರಿ ಡಾ.ಜೋತ್ಸ್ನಾ,ಅಳಿಯ ಶಶಿ,ಪುತ್ರ ಹರ್ಷವರ್ಧನ್, ಸೊಸೆ ಮನಿಷಾ, ಮೊಮ್ಮಕ್ಕಳಾದ ಯಶ್ ಮತ್ತು ಕೃಷ್ ರವಿ ಸಾಲ್ಯಾನ್, ರಮೇಶ್ ಸಾಲ್ಯಾನ್ ,ಸುಧಾಕರ್ ಸಾಲ್ಯಾನ್, ಅಶೋಕ್ ಸಾಲ್ಯಾನ್, ಶಾಂತಿ ಸತೀಶ್ ಕುಮಾರ್,ವಸಂತಿ ಮಹಾಬಲ, ವನಿತಾ ಧರ್ಮೆಂದ್ರ, ರಾಜ್ ಸಾಲ್ಯಾನ್ ಸೇರಿದಂತೆ ಮೃತರ ಕುಟುಂಸ್ಥರು ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here