ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚುನಾವಣೆ: ಸತೀಶ್ಚಂದ್ರ ಬಣದ 11 ಮಂದಿ ಕಣದಲ್ಲಿ- -ಓರ್ವ ಅವಿರೋಧ ಆಯ್ಕೆ

0

ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಒಟ್ಟು 12 ಸ್ಥಾನಗಳಲ್ಲಿ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗೆ ಜ.25 ರಂದು ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮತದಾನ ನಡೆಯಲಿದೆ.


ಹಾಲಿ ಅಧ್ಯಕ್ಷ ಸತೀಶ್ಚಂದ್ರ ನೇತೃತ್ವದ ತಂಡದ 11 ಮಂದಿ ಕಣದಲ್ಲಿದ್ದಾರೆ. ಸಂಘದ ಉಪಾಧ್ಯಕ್ಷ ಉಮೇಶ್ ಪ್ರಭು ಕುಂಟಿಹಿತ್ಲು ಅವರು ಹಿಂದುಳಿದ (೨ಎ) ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎಸ್‌ಆರ್ ಸತೀಶ್ಚಂದ್ರ ನೇತೃತ್ವದ ಸಹಕಾರಿ ಸಂಘಕ್ಕೆ ಮೊದಲ ಜಯ ದೊರಕಿದೆ.


ಸತೀಶ್ಚಂದ್ರ ನೇತೃತ್ವದ ತಂಡದ ಅಭ್ಯರ್ಥಿಗಳ ಪರಿಚಯ
ಸಾಮಾನ್ಯ ಕ್ಷೇತ್ರ-ಎಸ್.ಆರ್.ಸತೀಶ್ಚಂದ್ರ:
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಸತೀಶ್ಚಂದ್ರ ಅವರು, ಇತ್ತೀಚೆಗೆ ಕ್ಯಾಂಪ್ಕೋ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾಗಿದ್ದಲ್ಲದೆ, ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರೂ ಆಗಿದ್ದಾರೆ.
ಹರೀಶ್ ಬೋರ್ಕರ್ ಕತ್ತಲಕಾನ:
ಇವರು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು, ಪಾಣಾಜೆ ವ್ಯವಸಾಯ ಸೇವಾ ಸಂಘದ ಮಾಜಿ ಉಪಾಧ್ಯಕ್ಷರು, ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷರು, ಭಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಕೋಶಾಽಕಾರಿಯಾಗಿದ್ದಾರೆ.
ರಾಜಗೋಪಾಲ ಬಾಳೆಗುಳಿ:
ಇವರು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು, ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರು ಆಗಿದ್ದಾರೆ.
ರವೀಶ ಪೊಸವಳಿಕೆ:
ನ್ಯಾಯಾವಾಧಿ ಆಗಿರುವ ಇವರು, ದೇವಿನಗರದಲ್ಲಿರುವ ಶ್ರೀದೇವಿ ವಿದ್ಯಾಕೇಂದ್ರದ ಸಂಚಾಲಕ, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.
ಬಿ.ವಸಂತಶಂಕರ್: ನಿವೃತ್ತ ಲೆಕ್ಕಾಧಿಕಾರಿಯಾಗಿರುವ ಇವರು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.
ವೇದವ್ಯಾಸ ಕಟ್ಟೆ, ಬೆಂಗಳೂರು: ಇಂಜಿನಿಯರ್ ಆಗಿರುವ ಇವರು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.
ಸಂಜೀವ ನಾಯಕ್ ಸುಳ್ಯ: ಶ್ರೀ ಮಹಾಲಕ್ಷ್ಮೀ ಇಲೆಕ್ಟ್ರಿಕಲ್ಸ್ ಮಾಲಕರೂ ಆಗಿರುವ ಇವರು, ಸರಕಾರದ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾಗಿದ್ದಾರೆ. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರು ಆಗಿದ್ದಾರೆ.
ಚಂದ್ರಶೇಖರ್ ಭಟ್ ಮುಂಡುಗಾರು: ಇವರು ಪುರೋಹಿತರು.
ದಯಾನಂದ ನಾಯಕ್ ಕುಂಟಿಕಾನ: ನಿವೃತ್ತ ಎಎಸ್‌ಐ ಆಗಿದ್ದು, ಬ್ರಹ್ಮ ವೃಂದ ವೈದಿಕ ಪ್ರತಿಷ್ಠಾನದ ಟ್ರಸ್ಟಿಯಾಗಿದ್ದಾರೆ.


ಮಹಿಳಾ ಮೀಸಲು ಕ್ಷೇತ್ರ:
ದೇವಕಿ ಎಚ್. ನಾಯಕ್ ವಾಗ್ಲೆ ಸಂಟ್ಯಾರ:
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರೂ ಆಗಿರುವ ಇವರು, ಭಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ನಿರ್ದೇಶಕರು, ಶ್ರೀ ಸರಸ್ವತಿ ಮಹಿಳಾ ಮಂಡಳಿ ಪುತ್ತೂರು ಇದರ ನಿರ್ದೇಶಕರಾಗಿದ್ದಾರೆ.
ರಂಜಿತಾ ಆರ್ ಪ್ರಭು ಗೋಳಿತ್ತಡಿ: ಶ್ರೀ ಸರಸ್ವತಿ ಮಹಿಳಾ ಮಂಡಳಿ ಪುತ್ತೂರು ಇದರ ಮಾಜಿ ಅಧ್ಯಕ್ಷರಾಗಿದ್ದಾರೆ.


ಈ ಮೇಲಿನ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತಗಳನ್ನು ನೀಡಿಸುವಂತೆ ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು ಭಾಗದ ಭಾಲಾವಲೀಕಾರ್ ರಾಜಪುರ ಸಾರಸ್ವತ ಸಂಘ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿದೆ.


ಹಾಲಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರ ತಂಡದ 11 ಮಂದಿ ಹಾಗೂ ಇತರ 7ಮಂದಿ ಚುನಾವಣಾ ಕಣದಲ್ಲಿದ್ದಾರೆ. ಹಿರಿಯರು 2001 ರಲ್ಲಿ ಕಟ್ಟಿ ಬೆಳೆಸಿದ ಸಹಕಾರಿ ಸಂಘವು ಇಂದು ಯಶಸ್ವಿ 25 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಎಸ್‌ಆರ್ ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ಸಹಕಾರಿ ಸಂಘವು ನಿರಂತರ ಲಾಭ ಗಳಿಸಿ ಅದ್ಭುತ ಪ್ರಗತಿ ಸಾಽಸುತ್ತಿದೆ. ಪ್ರಸ್ತುತ ಸುಮಾರು ರೂ.800 ಕೋಟಿಗೂ ಅಽಕ ವ್ಯವಹಾರ ದಾಖಲಿಸಿದ್ದು, 52 ಸಾವಿರ ಸದಸ್ಯರನ್ನು ಹೊಂದಿದೆ. ಅಲ್ಲದೆ, ರೂ.405 ಕೋಟಿ ಠೇವಣಿ ಸಂಗ್ರಹಿಸಿ ಸದಸ್ಯರ ವಿಶ್ವಾಸಾರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.


ಸಹಕಾರಿ ಸಂಘವು ತನ್ನ ಅಧಿನ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮೂಲಕ ಆರ್ಥಿಕ ನೆರವು ನೀಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಕೆಲಸ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here