






ಕಾಣಿಯೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಎರ್ಮೆತ್ತಿಮಾರ್ ಎಂಬಲ್ಲಿ ಕೃಷಿಕರೊಬ್ಬರು ಮನೆಯ ಮಹಡಿಯ ಮೇಲಿನಲ್ಲಿದ್ದ ನೀರಿನ ಟ್ಯಾಂಕ್ ತೊಳೆಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ತಾರಸಿ ಮೇಲೆ ಬಿದ್ದು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.


ಮೃತಪಟ್ಟವರನ್ನು ಎರ್ಮೆತ್ತಿಮಾರ್ ನಿವಾಸಿ ಪದ್ಮನಾಭ ಗೌಡ(55 ವ.) ಎಂದು ಗುರುತಿಸಲಾಗಿದೆ. ಇವರು ಮನೆಯ ಮಹಡಿಯ ಮೇಲಿರುವ ಕುಡಿಯುವ ನೀರಿನ ಟ್ಯಾಂಕ್ ನ್ನು ತೊಳೆಯುವುದಕ್ಕಾಗಿ ರಾತ್ರಿ ಮೇಲೇರಿದ್ದರು. ಅಲ್ಲಿ ಆಯ ತಪ್ಪಿ ಆಕಸ್ಮಿಕವಾಗಿ ತಾರಸಿ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೃತರು ಮೂಲತಃ ಕೃಷಿಕರಾಗಿದ್ದು ಇತ್ತೀಚೆಗೆ ಅಟೋ ಚಾಲನೆ ಮಾಡುತ್ತಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.













