






ಪುತ್ತೂರು: ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರೆ ಗಾಯಗೊಂಡಿರುವ ಘಟನೆ ಪುತ್ತೂರು ಯಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಎದುರು ನಡೆದಿದೆ.


ಕುರಿಯ ನೈತ್ತಾಡಿ ನಿವಾಸಿ ಗೌತಮಿ(20ವ.)ಗಾಯಗೊಂಡವರು.ಅವರು ಚಲಾಯಿಸುತ್ತಿದ್ದ ಸ್ಕೂಟರ್ ಮತ್ತು ವಿರುದ್ಧ ದಿಕ್ಕಿನಿಂದ ಕೊರಗಪ್ಪ ಗೌಡ ಎಂಬವರು ಚಲಾಯಿಸುತಿದ್ದ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದೆ. ಗಾಯಾಳು ಗೌತಮಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಅಪಘಾತದಲ್ಲಿ ರಿಕ್ಷಾ ಚಾಲಕರಿಗೂ ಗಾಯವಾಗಿದೆ.ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













