






ಪುತ್ತೂರು: ಮಹಿಳಾ ಬಂಟರ ಸಂಘ ಪುತ್ತೂರು ಇದರ ಮಹಿಳಾ ಬಂಟರ ಸಂಘ ಕೈಕಾರ ವಲಯದ ದಶಮಾನೋತ್ಸವ ಸಮಾರಂಭ ಜ.25ರಂದು ಕೈಕಾರ ಸೌಮ್ಯ ವೀರೇಂದ್ರ ಗಾಂಭೀರ ಅವರ ನಿವಾಸದಲ್ಲಿ ನಡೆಯಿತು.



ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್ ಇಲಾಖೆಯ ನಿವೃತ್ತ ಸಹಾಯಕ ಕಮೀಷನರ್ ಹೆಚ್.ಎಮ್. ಭಂಡಾರಿ ಮತ್ತು ಲತಾ ಎಮ್. ಭಂಡಾರಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ ರೈ ಅಧ್ಯಕ್ಷತೆ ವಹಿಸಿದ್ದರು.




ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ರೈ ಬೂಡಿಯಾರ್, ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಬಂಟರ ಸಂಘದ ನಿರ್ದೇಶಕ ಕೃಷ್ಣಪ್ರಸಾದ್ ಆಳ್ವ, ಮಂಗಳೂರು ಎಂ.ಆರ್.ಪಿ.ಎಲ್.ನ ಸೀತಾರಾಮ ರೈ ಕೈಕಾರ, ಉದ್ಯಮಿ ದಿನೇಶ್ ರೈ ಮೂಲೆ ಮತ್ತು ಡಾ. ವಿನಂತಿ ರಂಜನ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆಗೈದ ಕೈಕಾರ ವಲಯದ ಪ್ರತಿಭೆಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಂಟ ಮಹಿಳೆಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಗೌರವಾಧ್ಯಕ್ಷೆ ಸೌಮ್ಯ ವೀರೇಂದ್ರ ಗಾಂಭೀರ, ಅಧ್ಯಕ್ಷೆ ವಿದ್ಯಾ ರಮಾನಂದ ರೈ, ಕಾರ್ಯದರ್ಶಿ ಸುನೀತಾ ನಾರಾಯಣ ರೈ, ಕೋಶಾಧಿಕಾರಿ ಅಶ್ವಿನಿ ಪವಿತ್ರ ಆಳ್ವ ಸಹಿತ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.












