







ಪ್ರಕೃತಿ – ಸಂಸ್ಕೃತಿಯನ್ನು ತಿಳಿಸುವುದು ಕಾರ್ಯಕ್ರಮದ ಉದ್ದೇಶ: ಒಡಿಯೂರು ಶ್ರೀ


ವಿಟ್ಲ: ತುಳು ಬಾಷೆ ಬಹಳಷ್ಟು ಶ್ರೇಷ್ಠವಾದುದು. ಒಡೆದ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ’ವಂದೇ ಮಾತರಂ’ ಗೀತೆಗೆ ಇದೆ. ಭಾರತದ ಮೌಲ್ಯ ಶ್ರೇಷ್ಠವಾದುದು. ಭಾರತೀಯತೆ ನಮ್ಮಲ್ಲಿ ತುಂಬಿಕೊಂಡಿದೆ. ದೇಶ ಕಟ್ಟುವ ಕೆಲಸ ನಮ್ಮಿಂದಲೇ ಆಗಲಿ. ಭಾರತೀಯ ಪರಂಪರೆ ಸಂಸ್ಕೃತಿಯ ಉಳಿವಿಗೆ ನಾವು ಒಗ್ಗಟ್ಟಾಗಬೇಕು. ಒಟ್ಟು ಕಾರ್ಯಕ್ರಮ ’ವಂದೇ ಮಾತರಂ’ ವಿಚಾರದಲ್ಲಿ ನಡೆಯಲಿದೆ. ಪ್ರಕೃತಿ – ಸಂಸ್ಕೃತಿಯನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮದ ಆಯೋಜನೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯಾದರೆ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.




ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜ.27ರಂದು ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಇಪ್ಪತ್ತಾರನೇ ವರುಷದ ’ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವನ್ನು ಅವರು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ವ್ಯಕ್ತಿಯಲ್ಲಿ ವ್ಯಕ್ತಿತ್ವ ನಿರ್ಮಾಣವಾದಾಗ ಬದುಕು ಹಸನಾಗಲು ಸಾಧ್ಯ. ಭಾರತ ದೇಶದ ಶಕ್ತಿ ಅಪಾರ. ದೇಶದ ಒಳಿತಿಗೆ ನಮ್ಮನ್ನು ನಾವು ಅರಿಯುವ ಕೆಲಸವಾಗಬೇಕು. ತುಳುವರಿಗೆ ಅವರದ್ದೇ ಆದ ಸ್ಥಾನಮಾನವಿದೆ. ಬಾಷೆಯ ಒಡಲು ಸಂಸ್ಕೃತಿ.ಗ್ರಾಮ ರಾಜ್ಯವಾಗದೆ ರಾಮ ರಾಜ್ಯವಾಗದು. ಸಂಸ್ಕೃತಿಯ ಅರಿವು ಮಕ್ಕಳಿಗಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ ಸ್ವಾಮೀಜಿ ಯುನಿವರ್ಸಿಟಿಗಳಲ್ಲಿ ತುಳು ಕಲಿಯುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಕೃಷಿ ಮತ್ತು ಋಷಿ ಪರಂಪರೆ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಎಂದರು.
ರಾಷ್ಟ್ರೀಯತೆ ಉಳಿದರೆ ಧರ್ಮ ಉಳಿದೀತು:
ಕದ್ರಿ ನವನೀತ ಶೆಟ್ಟಿರವರು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ’ವಂದೇ ಮಾತರಂ’ನ ಬೆಲೆಯನ್ನು ತಿಳಿಸುವ ಕೆಲಸ ಕೇಂದ್ರ ಸರಕಾರದಿಂದ ಆಗುತ್ತಿರುವುದು ಸಂತಸದ ವಿಚಾರ. ಯುವ ಶಕ್ತಿ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ರಾಷ್ಟ್ರೀಯತೆ ಉಳಿದರೆ ಧರ್ಮ ಉಳಿಯುವುದು. ಹೊಸ ಸಾಹಿತ್ಯಗಳು ಸೃಷ್ಟಿಯಾಗಲಿ ರಾಷ್ಟ್ರೀಯತೆ ಬೆಳೆಯಲಿ ಎಂದರು.

ಒಡಿಯೂರು ಶ್ರೀಗಳ ಪ್ರಯತ್ನ ಅಭಿನಂದನಾರ್ಹ:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕ್ಕಾಡುರವರು ಮಾತನಾಡಿ ತುಳು ಸಮ್ಮೇಳನ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಅಷ್ಟೊಂದು ಸುಲಭದ ಕೆಲಸವಲ್ಲ. ತುಳುವಿನ ಉಳಿವಿಗೆ ಒಡಿಯೂರು ಶ್ರೀಗಳ ಪ್ರಯತ್ನ ಅಭಿನಂದನೀಯ. ಚರಿತ್ರೆಯನ್ನು ಅರಿಯುವ ಕೆಲಸವಾಗಬೇಕು. ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕು. ನಮ್ಮ ಮಕ್ಕಳಿಗೆ ಸಂಸ್ಕೃತಿಯ ಅರಿವು ಮೂಡಿಸುವ ಕೆಲಸವಾಗಬೇಕು. ತುಳು ಭಾಷೆಯನ್ನು ರಾಜ್ಯದ ಎರಡನೇ ಅಽಕೃತ ಭಾಷೆಯನ್ನಾಗಿ ಮಾಡುವ ಪ್ರಯತ್ನ ವಿಧಾನಸಭೆಯಲ್ಲೂ ನಡೆಯುತ್ತಿದೆ. ನಾವೆಲ್ಲರೂ ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡಬೇಕು. ತುಳು ಭಾಷೆ ಕೇವಲ ಹಿಂದುಗಳ ಬಾಷೆಯಲ್ಲ. ವಿವಿಧ ಧರ್ಮೀಯರೂ ಮಾತನಾಡುತ್ತಾರೆ. ಇಂದು ತುಳು ಭಾಷೆ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಜನಪ್ರತಿನಿಽಗಳು ಮನಸ್ಸು ಮಾಡಿದಲ್ಲಿ ತುಳುವಿಗೆ ಸ್ಥಾನ ಮಾನ ಸಿಗಲು ಸಾಧ್ಯ. ಇಂತಹ ಸಮ್ಮೇಳನ ಇತರರಿಗೆ ಪ್ರೇರಣೆಯಾಗಲಿ ಎಂದರು.
ಶ್ರೀಗಳ ಪ್ರಯತ್ನ ತುಳುವಿಗೆ ಪೂರಕ:
ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡರವರು ಮಾತನಾಡಿ ಇದೊಂದು ಮನಸ್ಸಿಗೆ ಮುಟ್ಟುವ ಕಾರ್ಯಕ್ರಮವಾಗಿದೆ. ತುಳುವಿಗೆ ಸ್ಥಾನಮಾನ ಸಿಕ್ಕಿದಲ್ಲಿ ಅದು ಇನ್ನಷ್ಟು ಬೆಳೆಯಲು ಸಾಧ್ಯ. ಶ್ರೀಗಳ ಇಂತಹ ಪ್ರಯತ್ನ ತುಳು ಉಳಿವಿಗೆ ಪೂರಕ. ನಾವು ಗಟ್ಟಿಯಾಗಬೇಕು. ತುಳುವಿನ ಬಗ್ಗೆ ಗಟ್ಟಿಧ್ವನಿ ಎತ್ತುವ ಕೆಲಸ ಎಲ್ಲರಿಂದಲೂ ಆಗಲಿ ಎಂದರು.
ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಅಲ್ಟ್ರಾಟೆಕ್ ಸಿಮೆಂಟ್ ಪ್ರೈ ಲಿ.ನ ಹಿರಿಯ ಪ್ರಬಂಧಕ ಸದಾನಂದ ಸುಳಾಯ ಬೆಂಗಳೂರು, ಶ್ರೀ ಒಡಿಯೂರು ರಥೋತ್ಸವ ಸಮಿತಿ ಉಪಾಧ್ಯಕ್ಷ ವಾಮಯ್ಯ ಬಿ. ಶೆಟ್ಟಿ ಮುಂಬೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಗಳು ತುಳು ಲಿಪಿಯಲ್ಲಿ ಬರೆದ ’ವಂದೇ ಮಾತರಂ’ ಅನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಠರಾವು ಮಂಡನೆ ಮಾಡಲಾಯಿತು.
ನಿತ್ಯಶ್ರೀ ಎಸ್. ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕರಾದ ವಸಂತಕುಮಾರ್ ಪೆರ್ಲ ಸ್ವಾಗತಿಸಿದರು. ಶ್ರೀ ಒಡಿಯೂರು ರಥೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಮಾತೇಷ್ ಭಂಡಾರಿ ವಂದಿಸಿದರು. ಲೋಕೇಶ್ ಶೆಟ್ಟಿ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.
ಇಂದು ಬ್ರಹ್ಮಕಲಶಾಭಿಷೇಕ – ಶ್ರೀ ಒಡಿಯೂರು ರಥೋತ್ಸವ
ಜ. 28ರಂದು ಪ್ರಾತಃಕಾಲ ಶ್ರೀ ದತ್ತಾಂಜನೇಯ ದೇವರಿಗೆ ಬ್ರಹ್ಮಕಲಶಾಭಿಷೇಕ. ಮಹಾಪೂಜೆಯ ಬಳಿಕ ಸ್ವಯಂಭೂ ನಾಗರಾಜ ಸನ್ನಿಽಯಲ್ಲಿ ನಾಗತಂಬಿಲ. ಬೆಳಿಗ್ಗೆ ಗಂಟೆ 9ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ. 11 ಗಂಟೆಗೆ ಪೂಜೆಯ ಮಹಾಮಂಗಳಾರತಿ. ಗಂಟೆ 11.30ರಿಂದ ಶ್ರೀ ಗುರುದೇವಾನಂದ ಸ್ವಾಮೀಜಿರವರ ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಿತು.
ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿದರು. ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ , ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಪಯ್ಯಡೆ ಇಂಟರ್ನ್ಯಾಷನಲ್ ಹೋಟೆಲ್ಸ್ ಪ್ರೈ. ಲಿ., ಮುಂಬೈ ಇದರ ನಿರ್ದೇಶಕ ಡಾ. ಪಿ.ವಿ. ಶೆಟ್ಟಿ, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡ, ವೈದ್ಯ ಸಾಹಿತಿ ಡಾ. ಮುರಲೀಮೋಹನ್ ಚೂಂತಾರು ಮಂಗಳೂರು, ಶಂಕರ್ ಇಲೆಕ್ಟ್ರಿಕಲ್ಸ್ ಸರ್ವಿಸಸ್ ಪ್ರೈ.ಲಿ.ನ ಎಂ.ಡಿ. ರಾಜೇಶ್ ಶೆಟ್ಟಿ, ವಿದ್ಯಾಪ್ರಬೋಧಿನಿ ಪ್ರೌಢಶಾಲೆ ಮತ್ತು ಜ್ಯೂನಿಯರ್ ಕಾಲೇಜು, ಎರ್ಮಾಳ್ ಬಡ, ಉಡುಪಿ ಇದರ ಅಧ್ಯಕ್ಷ, ನವಿಮುಂಬೈ ಮಹಾನಗರ ಪಾಲಿಕೆ ಸದಸ್ಯ ಸುರೇಶ್ ಜಿ. ಶೆಟ್ಟಿ, ಎಸ್.ಎಸ್.ಡಿ.ಸಿ.ಸಿ.ಬ್ಯಾಂಕ್ನ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ತುಳುವರ್ಲ್ಡ್ ಫೌಂಡೇಶನ್, ಅಂತರ್ರಾಷ್ಟ್ರೀಯ ತುಳುವ ಮಹಾಸಭೆ, ಮುಂಬೈನ ಪ್ರಧಾನ ಸಂಚಾಲಕ ಮೋರ್ಲ ರತ್ನಾಕರ ಶೆಟ್ಟಿ, ಹೈಟೆಕ್ ಇಲೆಕ್ಟ್ರಿಫಿಕೇಶನ್ ಇಂಜಿನಿಯರಿಂಗ್ ಪ್ರೈ.ಲಿ., ಮುಂಬೈ ಇದರ ಆಡಳಿತ ನಿರ್ದೇಶಕ ರವಿನಾಥ್ ವಿ.ಶೆಟ್ಟಿ ಅಂಕಲೇಶ್ವರ, ಕೇರಳ ಸರಕಾರ ಕೊಲ್ಲಂನ ಪ್ರಾದೇಶಿಕ ಸಾರಿಗೆ ಅಽಕಾರಿ ಅಜಿತ್ಕುಮಾರ್ ಪಂದಳಮ್ ಇವರು ವಿಶೇಷ ಆಹ್ವಾನಿತರಾಗಿ ಆಗಮಿಸಿದರು.
ಅಪರಾಹ್ನ ಘಂಟೆ 2.೦೦ರಿಂದ ಶ್ರೀ ಆಗಮ ಪೆರ್ಲ ಮತ್ತು ಬಳಗದವರಿಂದ ’ಶಾಸ್ತ್ರೀಯ ಸಂಗೀತ’
ರಾತ್ರಿ ಘಂಟೆ 7.೦೦ರಿಂದ: ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ – ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ (ಮಿತ್ತನಡ್ಕ) ಭೇಟಿ, ಕನ್ಯಾನ ಪೇಟೆ ಸವಾರಿ, ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ರಥವು ಹಿಂತಿರುಗಲಿದೆ.
ವಿಶೇಷ ಆಕರ್ಷಣೆ : ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧ ಭಜನ ಮಂಡಳಿಗಳಿಂದ ಕುಣಿತ ಭಜನೆ, ಚೆಂಡೆಮೇಳ, ಸಿಡಿಮದ್ದು ಪ್ರದರ್ಶನ, ಕೀಲುಗೊಂಬೆ ಕುಣಿತ, ತಾಲೀಮು ಪ್ರದರ್ಶನ, ವಿವಿಧ ಆಕರ್ಷಣೀಯ ಟ್ಯಾಬ್ಲೋಗಳು.
ಸಂಜೆ ಘಂಟೆ 6.೦೦ರಿಂದ: ಕನ್ಯಾನ ಸದ್ಗುರು ನಿತ್ಯಾನಂದ ಸ್ವಾಮಿ ಮಂದಿರದ ಬಳಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಮೇಳದವರಿಂದ ಶ್ರೀಧರ ಕೆ. ಶೆಟ್ಟಿ ಗುಬ್ಯ ಮೇಗಿನಗುತ್ತು ಪ್ರಾಯೋಜಕತ್ವದಲ್ಲಿ ಯಕ್ಷಗಾನ ಬಯಲಾಟ, ರಾತ್ರಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಬಳಿ ಸಾಂಸ್ಕೃತಿಕ ವೈವಿಧ್ಯ, ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ನ ವತಿಯಿಂದ ’ಆಂಟಿ ಅಂಕಲ್’ ತುಳು ಹಾಸ್ಯಮಯ ನಾಟಕ ನಡೆಯಲಿದೆ.










