







ಕಡೇಶಿವಾಲಯ: ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಜ.25ರಂದು ನಡೆಯಿತು.


ಚುನಾವಣೆಯಲ್ಲಿ ಸಹಕಾರ ಭಾರತೀಯ 12 ಮಂದಿ ಅಭ್ಯರ್ಥಿಗಳು ಆಯ್ಕೆಯಾದರು.



ಸಾಮಾನ್ಯ ಕ್ಷೇತ್ರದಲ್ಲಿ ಆನಂದ ಪಿ, ತಿರುಮಲೇಶ್ವರ ಭಟ್, ಲೋಕನಾಥ ತಿಮರಾಜೆ, ಸತೀಶ, ಧರ್ನಪ್ಪ ಪೂಜಾರಿ ಆಯ್ಕೆಯಾದರು. ಪರಿಶಿಷ್ಟ ಪಂಗಡದಲ್ಲಿ ನಾರಾಯನ ನಾಯ್ಕ, ಹಿಂದುಳಿದ ವರ್ಗ ಬಿ ಯಲ್ಲಿ ವಿದ್ಯಾಧರ ರೈ, ಹಿಂದುಳಿದ ವರ್ಗ ಎ ಯಲ್ಲಿ ಶಿವಾನಂದ ಡಿ, ಮಹಿಳಾ ಕ್ಷೇತ್ರದಲ್ಲಿ ಪ್ರೇಮಾ,ಯಶೋಧ,ಪರಿಶಿಷ್ಠ ಜಾತಿಯಲ್ಲಿ ನಾರಾಯಣ ಕಲ್ಲಾಜೆ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಹರೀಶ್ ದೇವಾಡಿಗ ವಿಜೇತರಾಗುವ ಮೂಲಕ, ಆಡಳಿತ ಮಂಡಳಿ ಮತ್ತೆ ಸಹಕಾರ ಭಾರತೀ ತೆಕ್ಕೆಗೆ ಸೇರಿದೆ.ಚುನಾವನಾ ಅಧಿಕಾರಿಯಾಗಿ ಎನ್.ಜೆ. ಗೋಪಾಲ್ ಕಾರ್ಯನಿರ್ವಹಿಸಿದರು.










