‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನದ ಕವಿಕೂಟ

0

ಕವಿಗಳು ಬರೆಯುವುದು ಮಾತ್ರವಲ್ಲ ಧ್ವನಿಯಾಗಬೇಕು: ರಾಧಾಕೃಷ್ಣ ಕೆ. ಉಳಿಯತ್ತಡ್ಕ


ವಿಟ್ಲ: ಕವಿತೆಯ ಆತ್ಮ ಧ್ವನಿ. ಕವಿಗಳು ಬರೆಯುವುದು ಮಾತ್ರವಲ್ಲ ಧ್ವನಿಯಾಗಬೇಕು. ನಿಮ್ಮ ಕವಿತೆಗಳು ಸಮಾಜದ ಒಂದು ಸೊತ್ತಾಗಿ ಬರಬೇಕು. ಕವಿ ಹಾಗೂ ಓದುಗನ ಅನುಭವ ಭಿನ್ನವಾಗಿರುತ್ತದೆ. ಕವಿತೆ ಬರೆಯುವವರಿಗೆ ಅನುಭವ ಅಗತ್ಯ. ಇಂದಿನ ಕವಿಕೂಟ ಯಶಸ್ವಿಯಾಗಿದೆ. ವಸ್ತು ವಿಷಯದಲ್ಲಿ ಹೊಸತನ ಬೇಕು ಎಂದು ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕರವರು ಹೇಳಿದರು.


ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆದ ’ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಕವಿಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಸಮ್ಮೇಳನಾಧ್ಯಕ್ಷ ಕದ್ರಿ ನವನೀತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕವಿಗಳಾದ ಸದಾನಂದ ನಾರಾವಿ, ಪದ್ಮಾವತಿ ಏದಾರು, ಸುಂದರ ಬಾರಡ್ಕ, ವಿಶ್ವನಾಥ ಕುಲಾಲ್ ಮಿತ್ತೂರು, ಶ್ರೀಶಾವಾಸವಿ ತುಳುನಾಡ್, ವಿಷ್ಣುಗುಪ್ತ ಪುಣಚ, ಚೆನ್ನಪ್ಪ ಅಳಿಕೆ, ದಿವಾಕರ ಬಲ್ಲಾಳ್ ಎ.ಬಿ., ಅನಿತಾ ಶೆಟ್ಟಿ ಮೂಡಬಿದಿರೆ, ಬದ್ರುದ್ದೀನ್ ಕೂಳೂರು, ಅಶೋಕ ಎನ್.ಕಡೇಶಿವಾಲಯ, ಉಮೇಶ್ ಶಿರಿಯ, ಪದ್ಮನಾಭ ಪೂಜಾರಿ ಬಂಟ್ವಾಳ, ಪದ್ಮನಾಭ ಸುವರ್ಣ ಮಿಜಾರ್, ಸವಿತಾ ಕರ್ಕೇರ ಕಾವೂರು, ಶಂಕರ ಕುಂಜತ್ತೂರು, ಚೇತನ್ ವರ್ಕಾಡಿ, ಗಣೇಶ್‌ಪ್ರಸಾದ ಪಾಂಡೇಲು, ರವೀಂದ್ರ ಕುಲಾಲ್ ವರ್ಕಾಡಿ, ಅಕ್ಷತಾ ಶೆಟ್ಟಿ ಪಣಿಮಜಲು, ಡಾ. ಸುರೇಶ ನೆಗಳಗುಳಿ, ಪ್ರಶಾಂತ್ ಆಚಾರ್ಯ, ಎಚ್.ಕೆ. ನಯನಾಡು, ಭಾಸ್ಕರ್ ವರ್ಕಾಡಿ, ಶೇಖರ್ ಶೆಟ್ಟಿ ಬಾಯಾರು, ರೇಮಂಡ್ ಡಿಕುನ್ಹಾ ತಾಕೊಡೆ ಕವಿತೆ ವಾಚಿಸಿದರು. ಗೀತಾ ಲಕ್ಷ್ಮೀಶ್ ಕಾರ್ಯಕ್ರಮ ನಿರೂಪಿಸಿ,ಸ್ಚಾಗತಿಸಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಮೇಲ್ವಿಚಾರಕಿ ಲೀಲ ವಂದಿಸಿದರು.

LEAVE A REPLY

Please enter your comment!
Please enter your name here