






ನೆಲ್ಯಾಡಿ: ಬೆಳ್ತಂಡಿ ತಾಲೂಕಿನ ರೆಖ್ಯ ಗ್ರಾಮದ ನೇಲ್ಯಡ್ಕ ಎಂಬಲ್ಲಿ ರೆಸ್ಟೋರೆಂಟ್ವೊಂದರಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ದಾವಣಗೆರೆ ಮೂಲದ ಹನುಮಂತಪ್ಪ ಎಂಬಾತ ಆತನಿಗಿದ್ದ ಹೃದಯ ಸಂಬಂಧಿ ಖಾಯಿಲೆಯಿಂದ ಅಸ್ವಸ್ಥಗೊಂಡು ಜ.26ರಂದು ಮೃತಪಟ್ಟಿರುವುದಾಗಿ ವರದಿಯಾಗಿದೆ.


ಹನುಮಂತಪ್ಪ ಕೆಲಸ ಕೇಳಿಕೊಂಡು ಬಂದು ಸರಿಯಾದ ವಿಳಾಸವನ್ನೂ ನೀಡದೇ ಜ.18ರಂದು ನೇಲ್ಯಡ್ಕದ ರೆಸ್ಟೊರೆಂಟ್ವೊಂದರಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ. ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆತನನ್ನು ನೆಲ್ಯಾಡಿಯ ಖಾಸಗಿ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಔಷಧಿ ತೆಗೆದುಕೊಟ್ಟು, ಆ ಬಳಿಕ ಹೋಟೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಜ.26ರಂದು ಬೆಳಿಗ್ಗೆ ಹೋಟೇಲ್ನ ಮೇಲಿನ ವಿಶ್ರಾಂತಿ ರೂಮ್ನಲ್ಲಿ ವಿಶ್ರಾಂತಿಯಲ್ಲಿದ್ದ ಹನುಮಂತಪ್ಪನಿಗೆ ಹೃದಯ ಸಂಬಂಧಿ ಖಾಯಿಲೆಯು ಉಲ್ಬಣಗೊಂಡು ಅಸ್ವಸ್ಥಗೊಂಡಿದ್ದು ಹೋಟೇಲ್ನ ಕೆಲಸದಾಳುಗಳು ಚಿಕಿತ್ಸೆಗೆಂದು ವಿಶ್ರಾಂತಿ ರೂಮ್ನಿಂದ ಕೆಳಗೆ ಕರೆದುಕೊಂಡು ಬರುವ ಸಮಯ ಆತನು ಒಮ್ಮೆಲೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ.



ಈ ಬಗ್ಗೆ ಹೋಟೆಲ್ ಮಾಲಕ ಸತೀಶ್ ಬಿ.ಎನ್.ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










