ಅಂಕತ್ತಡ್ಕ ಕೋಟಿ ಚೆನ್ನಯ ನಗರ ಪೂಂಜಿರೋಟು ಶ್ರೀ ಬಹ್ಮಬೈದೆರುಗಳ ನೇತ್ರಾವತಿ ಗರಡಿಯ ಸಾನಿಧ್ಯ :  ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವದ ಸಂಭ್ರಮ ಮತ್ತು ನೂತನ ಗೋಪುರದ ಉದ್ಘಾಟನಾ ಕಾರ್ಯಕ್ರಮ 

0

ಕೆಯ್ಯೂರು: ಕೆಯ್ಯೂರು ಗ್ರಾಮದ ಅಂಕತ್ತಡ್ಕ ಕೋಟಿ ಚೆನ್ನಯ ನಗರ ಪೂಂಜಿರೋಟು ಶ್ರೀ ಬಹ್ಮಬೈದೆರುಗಳ ನೇತ್ರಾವತಿ ಗರಡಿಯ ಸಾನಿಧ್ಯದಲ್ಲಿ  ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವವು ಫೆ.1ರಿಂದ 2ರವರೆಗೆ ನಡೆಯಲಿದೆ.

ಕಾರ್ಯಕ್ರಮಗಳು
ಫೆ.1ರಂದು ಬೆಳಿಗ್ಗೆ ಗಣಪತಿ ಹೋಮ ಶುದ್ದಿ ಕಲಶ, ನಡೆದು ಬೆಳಗ್ಗೆ 10.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ನಂತರ  ಗರಡಿಯ ಪಶ್ಚಿಮ ಭಾಗದ ನೂತನ ಗೋಪುರದ ಉದ್ಘಾಟನಾ ಕಾರ್ಯಕ್ರಮದ ಸಭಾ ಕಾರ್ಯಕ್ರಮ ನಡೆಯಲಿದ್ದು, ಗೋಪುರದ ಉದ್ಘಾಟನೆಯನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟನೆ ಮಾಡಲಿದ್ದಾರೆ.

ಅಧ್ಯಕ್ಷತೆಯನ್ನು ಶ್ರೀ ಬ್ರಹ್ಮ ಬೈದೆರುಗಳ ನೇತ್ರಾವತಿ ಗರಡಿ ಅಂಕತ್ತಡ್ಕ ಅಧ್ಯಕ್ಷ ಕೆ ಎಸ್ ಪದ್ಮನಾಭ ಭಂಡಾರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ  ಬ್ರಿಜೇಶ್ ಚೌಟ , ದ.ಕ ಮತ್ತು ಉಡುಪಿ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಲೋಕಸಭಾ ಕ್ಷೇತ್ರ ಮಂಗಳೂರು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಬೆಂಗಳೂರು  ಸದಸ್ಯೆ ಮಲ್ಲಿಕಾ ಪಕ್ಕಳ, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ತು ಮಂಗಳೂರು ಸದಸ್ಯ ಶಿವನಾಥ ರೈ ಮೇಗಿನಗುತ್ತು, ಎಸ್,ಸಿ, ಡಿ ಸಿ ಸಿ ಬ್ಯಾಂಕ್ ಮಂಗಳೂರು ನಿರ್ದೇಶಕ ಎಸ್ .ಬಿ ಜಯರಾಮ ಬಳಜ್ಜ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ  ಕೆಯ್ಯೂರು , ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಉಪಸ್ಥಿತರಿರುವರು . 

ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ  ಭಂಡಾರ ತೆಗೆಯುವುದು, ಶುದ್ದಿ ಹೋಮ,ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ” ರಜತ ನಿತ್ಯಾರ್ಪಣೆ” ನೃತ್ಯ ನೀನಾದ( ಭಾರತೀಯ ಕಲೆಗಳ ತರಬೇತಿ ಕೇಂದ್ರ ಕಡಬ ಇದರ ಶಿಷ್ಯ ವೃಂದದಿಂದ) ವಿದುಷಿ ಪ್ರಮೀಳಾ ಲೋಕೇಶ್ ಇವರಿಂದ ನಡೆಯಲಿದೆ.

ರಾತ್ರಿ ಫೆಬ್ರವರಿ 2 ಬೆಳಿಗ್ಗೆ ಬೈದೆರುಗಳು ಸುರಿಯ , ಪ್ರಸಾದ ವಿತರಣೆ  ನಡೆಯಲಿದೆ. ಶ್ರೀ ಬ್ರಹ್ಮ ಬೈದೆರುಗಳ ನೇತ್ರಾವತಿ ಗರಡಿ ಪೂಂಜಿರೋಟು ಅಂಕತ್ತಡ್ಕ  ಅಧ್ಯಕ್ಷ ಕೆ.ಎಸ್ ಪದ್ಮನಾಭ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here