






ಪುತ್ತೂರು: ಪೇಪರ್ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆಯನ್ನು ಜಾರಿಗೊಳಿಸುವ ಸಂಬಂಧ ಫೆ.1ರಂದು ಮಧ್ಯಾಹ್ನ ಗಂಟೆ 2.30ಕ್ಕೆ ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ತರಬೇತಿ ನಡೆಯಲಿದೆ.


ಸಾರ್ವಜನಿಕರು, ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಇ -ಸ್ಟಾಂಪ್ ಮಾರಾಟಗಾರರು, ಬಾಪೂಜಿ ಸೇವಾ ಕೇಂದ್ರ, ಕಂಪ್ಯೂಟರ್ ಸೆಂಟರ್ಸ್ಗಳ ಮುಖ್ಯಸ್ಥರು, ಸಹಕಾರಿ ಸಂಘಗಳು, ಗರಾಮ ಒನ್ ಸೆಂಟರ್ನವರು ತರಬೇತಿಯಲ್ಲಿ ಭಾಗವಹಿಸುವಂತೆ ಪುತ್ತೂರು ಉಪನೋಂದಾಣಾಧಿಕಾರಿ ತಿಳಿಸಿದ್ದಾರೆ.












