






ಕಾಣಿಯೂರಿನಲ್ಲಿ ಕಬಡ್ಡಿ ಅಕಾಡೆಮಿ ಆಗಬೇಕು – ಚಕ್ರಪಾಣಿ ಎ.ವಿ


ಕಾಣಿಯೂರು: ಗ್ರಾಮೀಣ ಸೊಗಡಿನಲ್ಲಿ ಹುಟ್ಟಿಕೊಂಡ ಕಬಡ್ಡಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡು ಬೆಳಗುತ್ತಿದೆ. ಉತ್ತಮ ಉದ್ಯೋಗ ಪಡೆಯುವಲ್ಲಿ ಕಬಡ್ಡಿ ಕೂಡಾ ಪೂರಕವಾಗಿದೆ.
ಕ್ರೀಡೆಯನ್ನು ವೃತ್ತಿಯನ್ನಾಗಿ ಮಾಡುವ ಮೂಲಕ ನಮ್ಮ ಜೀವನವನ್ನು ನಡೆಸುವಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು.




ಗ್ರಾಮೀಣ ಪ್ರದೇಶ ಕಾಣಿಯೂರಿನಲ್ಲಿ ಕಬಡ್ಡಿ ಅಕಾಡೆಮಿ ಆಗಬೇಕು, ಆ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಿದೆ. ಕ್ರೀಡಾಪಟುಗಳು ಜೀವನವನ್ನು ನಡೆಸುವಂತಹ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯನ್ನು ವೃತ್ತಿಯನ್ನಾಗಿ ಮಾಡಬೇಕು ಎಂದು ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ ಎ.ವಿ ಹೇಳಿದರು. ಅವರು ಕಲ್ಪಡ ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಕಡಬ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ಕಾಣಿಯೂರಿನ ಜಾತ್ರಾ ಮೈದಾನದಲ್ಲಿ ಜ.31ರಂದು ನಡೆದ 5ನೇ ವರ್ಷದ ಅಂತರ್ ಜಿಲ್ಲಾ ಮಟ್ಟದ ಯು-21 ವಯೋಮಿತಿಯ ಪುರುಷರ ಮತ್ತು ಮಹಿಳೆಯರ ಮ್ಯಾಟ್ ಕಬಡ್ಡಿ ಪಂದ್ಯಾಟ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕೋರೊನಾ ಸಂದರ್ಭದ ಕಠಿಣ ಸಮಯದಲ್ಲಿ ಹುಟ್ಟಿಕೊಂಡ ಸಂಸ್ಥೆ. ಕಠಿಣ ಸಮಯದಲ್ಲಿ ಹುಟ್ಟಿಕೊಂಡ ಸಂಸ್ಥೆಗೆ ಉತ್ತಮ ಭವಿಷ್ಯ ಇದೆ. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ನಮ್ಮೂರ ನಮ್ಮ ಕನಸು ಜನ ಸೇವಾ ಟ್ರಸ್ಟ್ ವಿನೂತನ ಕ್ರೀಡಾ ಕೂಟ ಆಯೋಜನೆ ಮಾಡುವ ಮೂಲಕ ಮಾದರಿ ಸಂಘಟನೆಯಾಗಿ ಹೊರಹೊಮ್ಮಿದೆ ಎಂದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ಮಕ್ಕಳಿಗೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವಂತಹ ಮಣ್ಣಿನ ಕ್ರೀಡೆ ಕಬಡ್ಡಿಯನ್ನು ನಿರಂತರವಾಗಿ ಬೆಳೆಸುಕೊಂಡು ಬರಬೇಕೆಂಬುದು ಧ್ಯೇಯವಾಗಿದೆ. ಹಲವಾರು ವಿದ್ಯಾರ್ಥಿಗಳನ್ನು ಕಬಡ್ಡಿಯಲ್ಲಿ ರಾಷ್ಟç ಮಟ್ಟದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಪ್ರಗತಿ ವಿದ್ಯಾಸಂಸ್ಥೆಗೆ ಇದೆ. ಕಬಡ್ಡಿಯಂತಹ ಕ್ರೀಡೆ ನಮ್ಮ ಮನೋಸ್ಥೆರ್ಯ ಬೆಳೆಸುವುದರಲ್ಲದೆ ದೈಹಿಕವಾಗಿ ಆರೋಗ್ಯವಂತ ಸಮಾಜ ನಿಮಾರ್ಣವಾಗಲು ಸಾಧ್ಯವಾಗುತ್ತದೆ ಎಂದರು. ಭಾರತೀಯ ಸೇನೆ ನಿವೃತ್ತ ಯೋಧ ರವೀಂದ್ರ ಗೌಡ ಮರಕ್ಕಡ ಮಾತನಾಡಿ, ಕಾಣಿಯೂರು ಪರಿಸರದಲ್ಲಿ ಅದ್ಧೂರಿಯಾಗಿ, ಯಶಸ್ವಿಯಾಗಿ ಕಬಡ್ಡಿ ಪಂದ್ಯಾಟವನ್ನು ಆಯೋಜನೆ ಮಾಡುವ ಮೂಲಕ ನಮ್ಮೂರ ನಮ್ಮ ಕನಸು ಜನಾ ಸೇವಾ ಟ್ರಸ್ಟ್ ತಂಡ ಮಾದರಿ ತಂಡವಾಗಿ ರೂಪುಗೊಂಡಿದೆ ಎಂದರು. ಕಲ್ಪಡ ಕೊಡಿಯಾಲ ಶ್ರಿ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಶಿವರಾಮ ಉಪಾಧ್ಯಾಯ ಮಾಲೆತ್ತಾರು ಮಾತನಾಡಿ, ಕಲ್ಪಡ ಎಂಬ ಕುಗ್ರಾಮದ ಯುವಕರ ತಂಡ ಅತ್ಯಂತ ವೈಭವೀಕರಣದಲ್ಲಿ ಕಬಡ್ಡಿ ಪಂದ್ಯಾಟವನ್ನು ಆಯೋಜನೆ ಮಾಡುವ ಮೂಲಕ ಕಲ್ಪಡವನ್ನು ಒಳ್ಳೆಯ ಸ್ಥಾನಕ್ಕೇರಿಸಿದ್ದಾರೆ. ಇಂತಹ ಕ್ರೀಡಾಕೂಟದ ಮೂಲಕ ಎಷ್ಟೊ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟ ಕೀರ್ತಿ ಸುಬ್ರಹ್ಮಣ್ಯ ಕಲ್ಪಡ ಇವರ ತಂಡಕ್ಕೆ ಲಭಿಸುತ್ತದೆ ಎಂದರು. ಬೆಳ್ಳಾರೆ ಶ್ರೀ ಜಲದುರ್ಗಾ ದೇವಿ ಪ್ರಸನ್ನ ಅರ್ಥ್ ಮೂವರ್ಸ್ ಟ್ರಾನ್ಸ್ ಪೋರ್ಟ್, ಬೋರ್ ವೆಲ್ಸ್ ಮಾಲಕ ಪದ್ಮನಾಭ ಬೀಡು ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ನಮ್ಮೂರ ನಮ್ಮ ಕನಸು ಜನಾ ಸೇವಾ ಟ್ರಸ್ಟ್ ಯಶಸ್ವಿ ತಂಡವಾಗಿದೆ ಎಂದರು. ಪೈಕ ಕರಿಮಜಲು ಶ್ರೀ ಉಳ್ಳಾಕುಲು ದೈವಸ್ಥಾನದ ಅನುವಂಸೀಯ ಮೊಕ್ತೇಸರ ಪುಟ್ಟಣ್ಣ ಗೌಡ ಪೈಕ ನಮ್ಮ ಮಣ್ಣಿನ ಆಟವಾದ ಕಬಡ್ಡಿಗೆ ಇಂದು ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೆಚ್ಚಾಗುತ್ತಿದೆ, ಇದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪುಟ್ಣಣ್ಣ ಗೌಡ ಮುಗರಂಜ, ಕಲ್ಲಮಾಡ ಶ್ರೀ ಉಳ್ಳಾಕುಲು ಉತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪರಮೇಶ್ವರ ಅನಿಲ, ಕೊಡಿಯಾಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಿತ್ರಾ ದಿನೇಶ್, ಕಡಬ ತಾಲೂಕು ಪಂಚ ಗ್ಯಾರಂಟಿ ಸಮಿತಿ ಸದಸ್ಯೆ ಹರೀಣಾಕ್ಷಿ ಶ್ರೀಧರ ಬನಾರಿ, ಇಡ್ಯಡ್ಕ ಬ್ರದರ್ಸ್ ಅಧ್ಯಕ್ಷ ಷಣ್ಮುಖ ಐ,ಕೆ, ನಮ್ಮೂರ ನಮ್ಮ ಕನಸು ಜನಾಸೇವಾ ಟ್ರಸ್ಟ್ ನ ಉಪಾಧ್ಯಕ್ಷ ಅಶ್ವನಿ ಕುಮಾರ್ ನಟ್ಟಿಹಿತ್ಲು ಉಪಸ್ಥಿತರಿದ್ದರು. ಟ್ರಸ್ಟ್ ನ ಸದಸ್ಯರಾದ ಪುನೀತ್ ಅಂಗಾರಡ್ಕ, ದಿನೇಶ್ ಬಾಚೋಡಿ, ಪದ್ಮನಾಭ ಕಲ್ಪಡಗುತ್ತು, ಕೇಶವ ಕೆ. ಪಿ, ಮೋಹನ್ ಕೆ. ಟಿ, ಗಣೇಶ್ ಪೆರ್ಲೋಡಿ, ಹರ್ಷನ್ ಕೆ. ಟಿ, ಆನಂದ ಗೌಡ ಕಲ್ಪಡ, ಕಾರ್ತಿಕ್ ಕಲ್ಪಡ, ನಮಿತಾ ಕಲ್ಪಡ ತೋಟ, ಶೃತಿ ಸುಬ್ರಹ್ಮಣ್ಯ ಕಲ್ಪಡ, ಧನುಷ್ ಬೇರ್ತ, ದೀಕ್ಷಿತ್ ಅವರು ಅತಿಥಿಗಳನ್ನು ಹೂ ನೀಡಿ ಗೌರವಿಸಿದರು. ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ. ಎಂ ಕಲ್ಪಡ ಅತಿಥಿಗಳಿಗೆ ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಿದರು.
ಜನನಿ, ಪ್ರಣವಿ, ಶರಣ್ಯ, ಜನ್ಯಶ್ರೀ, ಭವಿಷ್ಯ ಪ್ರಾರ್ಥಿಸಿದರು. ಕಲ್ಪಡ ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಹರ್ಷನ್ ಕೆ.ಟಿ ವಂದಿಸಿದರು. ಸುಶ್ಮಿತಾ ಆದಿತ್ಯ ಚಿದ್ಗಲ್ಲು ಕಾರ್ಯಕ್ರಮ ನಿರೂಪಿಸಿದರು. ಕಾಣಿಯೂರು ಶ್ರೀ ಅಮ್ಮನವರ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ, ಚೆಂಡೆ ವಾದನದೊಂದಿಗೆ ಅತಿಥಿ ಗಣ್ಯರನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಸನ್ಮಾನ:
ಕಲ್ಪಡ ಕೊಡಿಯಾಲ ನಮ್ಮೂರ ನಮ್ಮ ಕನಸು ಜನಾಸೇವಾ ಟ್ರಸ್ಟ್ ನ ವತಿಯಿಂದ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ ಎ.ವಿ ಅವರನ್ನು ಸನ್ಮಾನಿಸಲಾಯಿತು.
ಕಲ್ಪಡ ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ವತಿಯಿಂದ ಕಳೆದ 5 ವರ್ಷದಿಂದ ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬರುತ್ತಿದ್ದು, ಟ್ರಸ್ಟ್ ನ ಸದಸ್ಯರ ಮತ್ತು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಉನ್ನತ ಮಟ್ಟದ ವೇದಿಕೆ ಒದಗಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಇಂತಹ ಕ್ರೀಡಾ ಕೂಟವನ್ನು ಆಯೋಜಿಸಲಾಗುತ್ತಿದೆ. ಜೊತೆಯಲ್ಲಿ ವಿಶೇಷ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನಡೆಯಲಿದ್ದು, ವಿಶೇಷವಾಗಿ ಓರ್ವ ಅಗ್ರಸ್ಥಾನ ಸಾಧಕರಿಗೆ ನಮ್ಮೂರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸುಬ್ರಹ್ಮಣ್ಯ ಕೆ.ಎಂ.ಕಲ್ಪಡ
ಅಧ್ಯಕ್ಷರು, ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕಲ್ಪಡ, ಕೊಡಿಯಾಲ










