






ಪುತ್ತೂರು: ಹಿಂದೂ ಸಂಗಮ ಆಯೋಜನ ಸಮಿತಿ ಪುತ್ತೂರು ನಗರ, ವಿನಾಯಕ ವಸತಿಯ ಹಿಂದೂ ಸಂಗಮ ಕಾರ್ಯಕ್ರಮವು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಮಣ್ಯ ಮಹಾವಿಷ್ಣು ಸಭಾಭವನದಲ್ಲಿ ನಡೆಯಿತು.


ನಿವೃತ್ತ ಅಧ್ಯಾಪಕ ಯಶವಂತ ಬೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಮಣ್ಯ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಕೇಶವ ಬೆದ್ರಾಳ ಅವರು ಶುಭ ಹಾರೈಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಉದ್ಯೋಗಿ ಕಾರ್ಯ ಮನೋಹರ ಮುಖ್ಯ ಭಾಷಣ ಮಾಡಿದರು. ನಿವೃತ್ತ ಸಹಾಯಕ ಪೋಲಿಸ್ ಉಪನಿರೀಕ್ಷಕ ಮತ್ತು ಹಿಂದೂ ಸಂಗಮ ಆಯೋಜನಾ ಸಮಿತಿ ಸದಸ್ಯರಾಗಿರುವ ರವೀಂದ್ರನಾಥ ರೈ ಮತ್ತು ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಡಿಜಿಎಂ ಮತ್ತು ಹಿಂದು ಸಂಗಮ ಆಯೋಜನಾ ಸಮಿತಿ ಸದಸ್ಯೆ ಭವಾನಿ ಪ್ರಭು ಉಪಸ್ಥಿತರಿದ್ದರು.



ಸನ್ಮಾನ
ಎಳೆಮೆರೆಯ ಸಾಧಕರಾಗಿದರುವ ದೇವಪ್ಪ ಗೌಡ, ದಯಾನಂದ, ಮಾಧವ ಪ್ರಭು, ವಸಂತ ಕುಮಾರ್ ನೆಕ್ಕರೆ, ಸಮೃದ್ಧಿ ಶೆಣೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಸುಶಾಂತ್ ಆಚಾರ್ಯ ಮತ್ತು ಬಳಗದವರಿಂದ ದೇಶಭಕ್ತಿ ಗೀತಾ ಗಾಯನ, ಕೆಮ್ಮಿಂಜೆ ಹಿಂದೂ ಧಾರ್ಮಿಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿದ್ಯಮಯ ಧಾರ್ಮಿಕ ಕಾರ್ಯಕ್ರಮ, ನಂದಿಕೇಶ್ವರ ಕುಣಿತ ಭಜನಾ ತಂಡ, ಬೆದ್ರಾಳ,ಸಂಜಯನಗರ ಕುಣಿತ ಭಜನಾ ತಂಡ, ಸಂಜಯನಗರ ಇವರ ಕುಣಿತ ಭಜನೆ ನಡೆಯಿತು.










