






ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಪುತ್ತೂರು ರೋಟರಿ ಮ್ಯಾಮೋಗ್ರಾಫಿ ಸೆಂಟರ್, ಜ್ಞಾನ ವಿಕಾಸ ಕೇಂದ್ರ ಮತ್ತು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದೊಂದಿಗೆ ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ.1 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೊಳ್ವಾರು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜರಗಿತು.


ರಕ್ತದೊತ್ತಡ, ಬಿ.ಪಿ ಪರೀಕ್ಷೆ, ಮಧುಮೇಹ, ಸಕ್ಕರೆ ಕಾಯಿಲೆ ತಪಾಸಣೆ, ಥೈರಾಯಿಡ್, ಮಕ್ಕಳ ಆರೋಗ್ಯ ತಪಾಸಣೆ, ಹೃದಯದ ತಪಾಸಣೆಗಾಗಿ ಇಸಿಜಿ, ಸೇವ್ ಹಾರ್ಟ್ ಪರೀಕ್ಷೆ, ಪುತ್ತೂರು ರೋಟರಿ ಮ್ಯಾಮೋಗ್ರಫಿ ಸೆಂಟರ್ ನ ಅಡಿಯಲ್ಲಿ ಸ್ತನ ಕಾಯಿಲೆ ತಪಾಸಣೆ ಮ್ಯಾಮೋಗ್ರಫಿ ಪರೀಕ್ಷೆ, ಲಿಪಿಡ್ ಪ್ರೊಫೈಲ್ ಪರೀಕ್ಷೆಗಳಿಗೆ ಹಲವಾರು ಫಲಾನುಭವಿಗಳು ಹಾಜರಾಗಿ ತಜ್ಞ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆದುಕೊಂಡರು.



ಈ ಸಂದರ್ಭದಲ್ಲಿ ಪ್ರಗತಿ ಸ್ಷೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರು, ರೋಟರಿ ಕ್ಲಬ್ ಪುತ್ತೂರು ನಿಕಟಪೂರ್ವ ಅಧ್ಯಕ್ಷರಾಗಿರುವ ಡಾ. ಶ್ರೀಪತಿ ರಾವ್ ಹಾಗೂ ರೋಟೆರಿಯನ್ ಜಯರಾಜ್ ಭಂಡಾರಿಯವರು ಉಪಸ್ಥಿತರಿದ್ದರು.










