






ಪುತ್ತೂರು :ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ 2025/26ರ ಸಾಲಿನ ವಿಶೇಷ ಚೇತನರ ಗ್ರಾಮ ಸಭೆ ಜ.31ರಂದು ಅರಿಯಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಸಂತೋಷ್ ಮಣಿಯಾಣಿ. ಕೆ ಯವರ ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮೀನಾಕ್ಷಿ ಹಾಗೂ ಪಂಚಾಯತ್ ಕಾರ್ಯದರ್ಶಿ ವಿದ್ಯಾದರ ಕೆ. ಎಮ್ ಹಾಗೂ ಅರಿಯಡ್ಕ ಗ್ರಾಮ ಪಂಚಾಯತ್ ಸರ್ವ ಸದಸ್ಯರ ಉಪಸ್ಥಿತರಿದ್ದರು.




ಪುತ್ತೂರು ತಾಲ್ಲೂಕು ಪಂಚಾಯತ್ ವಿಶೇಷ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಶೇಷ ಗ್ರಾಮ ಸಭೆಯ ಉದ್ದೇಶ ಮತ್ತು ವಿಶಿಷ್ಟ ಗುರುತಿನ ಚೀಟಿ ಭಾರತ ಸರಕಾರದ ವಿಕಲ ಚೇತನರ ಆದಿನಿಯಮ ಪ್ರಕಾರ 21ವಿಕಲತೆ ವಿಧಗಳ ಬಗ್ಗೆ ವಿಕಲ ಚೇತನರ ವಿವಿಧ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅರಿಯಡ್ಕ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ಲಾವಣ್ಯ ರವರು ಗ್ರಂಥಾಲಯದಲ್ಲಿ ವಿಕಲ ಚೇತನರಿಗೆ ಇರುವ ಬ್ರೈಲ್ ಲಿಪಿ ಅಬ್ಬಾ ಕಾಸ್ ಹಾವು ಏಣಿ ಅಟ್ಟ ಅಂದರ ಕ್ರಿಕೆಟ್ ಬಾಲ್ ಪಸಲ್ ಗಳ ಬಗ್ಗೆ ಮಾಹಿತಿ ನೀಡಿದ್ದರು. ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಅಮೂಲ್ಯ ಆಪ್ತ ಸಮಾಲೋಚಕಿ ಗೀತಾ ವಿಜಯ್ ಯವರು ಬ್ಯಾಂಕ್ ಖಾತೆ ನಿರ್ವಹಣೆ ಪ್ರದಾನ ಮಂತ್ರಿ ಅರೋಗ್ಯ ವಿಮಾ ಸೌಲಭ್ಯ ಆಧಾರ್ ಕೆ. ವೈ. ಸಿ ಯ ಬಗ್ಗೆ ಮಾಹಿತಿ ನೀಡಿದ್ದರು. 10 ಮಂದಿ ವಿಶೇಷ ಚೇತನರ ಸಂಜೀವಿನಿ ಸ್ವಸಹಾಯ ಗುಂಪು ರಚನೆ ಮಾಡಲಾಯಿತು.
ಅರಿಯಡ್ಕ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿದ್ಯಾದರ ಕೆ. ಎಮ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಅಧ್ಯಕ್ಷ ಸಂತೋಷ್ ಮಣಿಯಾಣಿ. ಕೆ ಧನ್ಯವಾದಗಳು ವಂದಿಸಿದರು.ಅರಿಯಡ್ಕ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಅರಿಯಡ್ಕ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತಮಲ್ಲ. ಎಂ ಸಹಕಾರ ನೀಡಿದ್ದರು.
ಈ ಸಭೆಯಲ್ಲಿ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತ,ರು ವಿಶೇಷ ಚೇತನರು, ವಿಶೇಷ ಚೇತನರ ಆರೈಕೆದಾರರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಜರಿದ್ದರು.










