






ಪುತ್ತೂರು: ಆರ್ಯಾಪು ಗ್ರಾಮದ ಕಲ್ಲರ್ಪೆ ಯಲ್ಲಿ ಶಾಸಕ ಅಶೋಕ್ ರೈ ಅವರ ಅನುದಾನದಿಂದ ನೂತನ ಬಸ್ ತಂಗುದಾಣ ನಿರ್ಮಾಣವಾಗಿದ್ದು ಇದರ ಉದ್ಘಾಟನೆಯು ಫೆ.1ರಂದು ನಡೆಯಿತು. ಕಲ್ಲರ್ಪೆಯಲ್ಲಿ 5 ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾಗೂ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ರಾಜನ್ಗುಳಿಗ ಕಲ್ಲಕಟ್ಟ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.



ಈ ವೇಳೆ ಮಾತನಾಡಿದ ಶಾಸಕರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದು, ಆರ್ಯಾಪು ಗ್ರಾಮಕ್ಕೆ 5 ಕೋಟಿಗೂ ಮಿಕ್ಕಿ ಅನುದಾನವನ್ನು ಎರಡು ವರ್ಷದಲ್ಲಿ ನೀಡಲಾಗಿದೆ. ಕೊಲ್ಯದಲ್ಲಿ ಅನೇಕ ವರ್ಷಗಳ ಬೇಡಿಕೆಯಾದ ತಡೆಗೋಡೆ ಕಾಮಗಾರಿಗೂ 2 ಕೋಟಿ ಅನುದಾನವನ್ನು ನೀಡಲಾಗುವುದು ಎಂದ ಅವರು ಮುಂದಿನ ಎರಡು ವರ್ಷದಲ್ಲಿ ಕ್ಷೆತ್ರದಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳು ನಡೆಯಲಿದೆ ಎಂದು ಹೇಳಿದರು.



ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಶಾಸಕ ಅಶೋಕ್ ರೈ ಅವರ ಅಭಿವೃದ್ದಿ ಕಾರ್ಯಗಳ ಬಗ್ಗೆ ಯಾರಿಗೂ ಹೇಳಬೇಕಾದ ಅವಶ್ಯಕತೆಯಿಲ್ಲ ಕ್ಷೇತ್ರದ ಪ್ರತೀಯೊಬ್ಬರಿಗೂ ಪುತ್ತೂರಿನಲ್ಲಿ ನಡೆಯುತ್ತಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಗೊತ್ತಿದೆ. ಶಾಸಕರು ಕೇವಲ ಪುತ್ತೂರಿಗೆ ಮಾತ್ರ ಶಾಸಕರಾಗಿ ಕೆಲಸ ಮಾಡುತ್ತಿಲ್ಲ. ದಕ ಹಾಗೂ ಉಡುಪಿ ಜಿಲ್ಲೆಯ ಜನತೆಯ ಪರವಾಗಿ ವಿಧಾನಸಭಾ ಅಧಿವೇಶನದಲ್ಲಿ ದ್ವನಿ ಎತ್ತುವ ಮೂಲಕ ಉಭಯ ಜಿಲ್ಲೆಗಳ ಜನರ ಪಾಲಿಗೆ ಬಂಧುವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಒಬ್ಬ ಶಾಸಕ ಪುತ್ತೂರಿಗೆ ಇದುವರೆಗೂ ಬಂದಿಲ್ಲ ಮುಂದೆ ಬರುವುದೂ ಇಲ್ಲ. ನಾವೆಲ್ಲರೂ ಶಾಸಕ ಅಶೋಕ್ ರೈ ಅವರ ಕೈ ಬಲಪಡಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ, ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬೂತ್ ಅಧ್ಯಕ್ಷ ಶಿವಪ್ರಸಾದ್, ಕೇಶವ ಚಿವರ್ಣ ಮೇರ್ಲ, ಹಾರಿಸ್ ಸಂಥಯರ್, ಸಲಾಂ ಸಂಪ್ಯ, ಪದ್ಮನಾಭ ಕೊಲ್ಯ, ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂಈರೇಲು, ಎಂಆರ್ಪಿಎಲ್ ಇಂಜನಿಯರ್ ಸೀತಾರಾಮ ರೈ ಕೈಕಾರ, ಮೆಸ್ಕಾಂ ಜೆಇ ರಮೇಶ್, ಮೀನಾಕ್ಷಿ ನೀರ್ಕಜೆ, ಆದಂ ಕಲ್ಲರ್ಪೆ, ಇಬ್ರಾಹಿಂ ನೆಕ್ಕರೆ, ಹಮೀದ್ ಕಲ್ಲರ್ಪೆ, ಬಾಲಕೃಷ್ಣ ರೈ ಮೇರ್ಲ, ಉದಯ ರೈ ಮೇರ್ಲ, ಕಿಶೋರ್ ಮೇರ್ಲ, ಸುಜಿತ್ ಸಂಟ್ಯಾರ್, ಚಂಧ್ರಹಾಸ ರೈ ಪನಡ್ಕ, ಗಂಗಾಧರ ಶೆಟ್ಟಿ ಕೈಕಾರ, ಸತೀಶ್ ರೈ ನಿಡ್ಪಳ್ಳಿ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
5 ಟಿಸಿ ಉದ್ಘಾಟನೆ
ಕಲ್ಲರ್ಪೆ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು ಈ ಸಮಸ್ಯೆಯನ್ನು ನಿವಾರಿಸಲು ಏಕಕಾಲದಲ್ಲಿ 5 ವಿದ್ಯುತ್ ಟ್ರಾನ್ಸ್ಫಾರ್ಮರ್ ನ್ನು ಅಳವಡಿಸುವ ಕೆಲಸ ನಡೆದಿದೆ. ಇದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಶಾಸಕರಲ್ಲಿ ಮನವಿ ಮಾಡಿದ ಬಳಿಕ ಕೆಲವೇ ತಿಂಗಳಲ್ಲಿ ಈ ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದಿಲ್ಲ. ಸಾರ್ವಜನಿಕರ ಬೇಡಿಕೆ ಈಡೇರಿಸಿದ ಶಾಸಕರಿಗೆ ಕೃತಜ್ಞತೆಗಳು. ಕಲ್ಕಟ್ಟ ಗುಳಿಗ ದೈವಸ್ಥಾನಕ್ಕೆ ತೆರಳುವ ರಸ್ತೆಯನ್ನು 5 ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟ್ ಮಾಡಲಾಗಿದೆ.
ಗಿರೀಶ್ ರೈ, ವಲಯ ಅಧ್ಯಕ್ಷ










