






ಪುತ್ತೂರು: ಪಾಲ್ತಾಡಿ ಗ್ರಾಮದ ಇಲ್ಲಾರೆಗುಡ್ಡೆ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಗರಡಿ ಇಲ್ಲಾರೆಗುಡ್ಡೆ ಇಲ್ಲಿ ಗರಡಿ ಜೀರ್ಣೋದ್ಧಾರಗೊಂಡು ಪ್ರಥಮ ವರ್ಷದ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಪರಿವಾರ ದೈವಗಳ ನೇಮೋತ್ಸವವು ಫೆ.08 ಮತ್ತು 9 ರಂದು ವಿಜೃಂಭಣೆಯಿಂದ ಜರಗಲಿದೆ.


ಫೆ.08 ರಂದು ಬೆಳಿಗ್ಗೆ ಶುದ್ಧ ಕಲಶ, ಗಣಪತಿ ಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ ದೈವಗಳ ಭಂಡಾರ ತೆಗೆಯುವುದು, ಶ್ರೀ ಧರ್ಮರಸು ಭಜನಾ ತಂಡ ಪಾಲ್ತಾಡಿ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಕ್ಷೇತ್ರಪಾಲ ಶ್ರೀ ಗುಳಿಗ ದೈವದ ನೇಮ ನಡೆದು ಪ್ರಸಾದ ವಿತರಣೆ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಬಳಿಕ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ತನ್ನಿಮಾನಿಗ ದೈವ ಗರಡಿ ಇಳಿಯುವುದು, ಮುಂಜಾವು ಶ್ರೀ ಮೊಗೇರ್ಕಳ ದೈವದ ಗಂಧ ಪ್ರಸಾದ ವಿತರಣೆ ನಡೆಯಲಿದೆ.



ಫೆ. ೦9 ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಊರಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಿ ಶ್ರೀ ಗಂಧ ಪ್ರಸಾದ ಸ್ವೀಕರಿಸುವಂತೆ ಮಂಜಕೊಟ್ಯ ಗರಡಿಯ ಕಾಪಾಡ ಚೋಮ ಬೇರಿಕೆ, ಸಮಿತಿಯ ಗೌರವ ಅಧ್ಯಕ್ಷರುಗಳಾದ ಪ್ರವೀಣ್ ರೈ ನಡುಕೂಟೇಲು, ಜಯರಾಮ ಗೌಡ ದೊಡ್ಡಮನೆ, ಅಧ್ಯಕ್ಷ ಬಾಬು ಬಿ.ಕೆ ಬೇರಿಕೆ ಪಾಲ್ತಾಡಿ, ಉಪಾಧ್ಯಕ್ಷರುಗಳಾದ ಚಂದ್ರಶೇಖರ ಉಪ್ಪಳಿಗೆ, ಗಿರೀಶ್ ಹಸಂತ್ತಡ್ಕ, ಮಾಧವ ಕಾಯರ್ಗುರಿ, ಪ್ರಧಾನ ಕಾರ್ಯದರ್ಶಿ ಆನಂದ ನಿಲಾವು, ಜೊತೆ ಕಾರ್ಯದರ್ಶಿ ಸುಂದರ ಪಿ.ಎಂ, ಕಾರ್ಯದರ್ಶಿ ಪೂವಪ್ಪ ಬೇರಿಕೆ, ಕೋಶಾಧಿಕಾರಿ ರಮೇಶ ನಿಲಾವು, ದಿನೇಶ್ ಬೇರಿಕೆ ಹಾಗೂ ಸರ್ವ ಸದಸ್ಯರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










