






ಪುತ್ತೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಮತ್ತು ಊರ ಹತ್ತು ಸಮಸ್ತರು, ಪಡುಮಲೆ ಇದರ ವತಿಯಿಂದ ಶ್ರೀ ಕಟೀಲು ದುರ್ಗಾಪರರ್ಮೇಶ್ವರಿ ಯಕ್ಷಗಾನ ಮೇಳದವರಿಂದ ಕುರುಕ್ಷೇತ್ರ ಎಂಬ ಯಕ್ಷಗಾನ ಬಯಲಾಟ ಸೇವೆಯು ಫೆ. 6 ರಂದು ಸಂಜೆ ಗಂ 6 ರಿಂದ ಶ್ರೀ ಕಟೀಲು ಕ್ಷೇತ್ರದ ಪೂಜ್ಯ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರವರ ಗೌರವಾಧ್ಯಕ್ಷತೆಯಲ್ಲಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಎದುರು ಗದ್ದೆಯಲ್ಲಿ ನಡೆಯಲಿದೆ.


ಕಲಾಭಿಮಾನಿಗಳೂ ಹಾಗೂ ಭಕ್ತಾದಿಗಳೂ ಆದ ತಾವೆಲ್ಲರೂ ಆಗಮಿಸಿ ಪಡುಮಲೆ ಸಮಸ್ತ ದೈವ ದೇವರ ಮತ್ತು ಜಗಜ್ಜನನಿ ಶ್ರೀ ಕಟೀಲು ದೇವಿಯ ಕೃಪೆಗೆ ಪಾತ್ರರಾಗುವಂತೆ ಸಮಿತಿ ಅಧ್ಯಕ್ಷ ಉದಯ ಕುಮಾರ್ ಪಡುಮಲೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



ಕಾರ್ಯಕ್ರಮಗಳು
ಫೆ. 6 ರಂದು ಸಂಜೆ ಗಂ 5.45ಕ್ಕೆ ಚೌಕಿ ಪೂಜೆ ಬಳಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.ರಾತ್ರಿ ಗಂ 8.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.










