ಜಿ.ಎಲ್ ಮಾಲ್ನಲ್ಲಿ ಪ್ರಾರಂಭಗೊಂಡಿದೆ ಸಿಂಧೂರ ಸಾರಿ ಮೇಳ…

0

ಪ್ರತಿದಿನವೂ ಶಾಪಿಂಗ್ ಪ್ರಿಯರಿಗೆ ಸಿಗಲಿದೆ ಉಚಿತ ಸೀರೆ ಭಾಗ್ಯ …
ಯುವತಿಯರ ,ಮಹಿಳೆಯರ ಮೆಚ್ಚಿನ ಉಡುಪುಗಳೆಲ್ಲವೂ ಅತ್ಯುತ್ತಮ ಬೆಲೆಯಲ್ಲಿ…

ಪುತ್ತೂರು : ಯಾರೂ ಊಹಿಸಿರಲಾರದ ಬೆಲೆಗೆ ವಿವಿಧ ಮಾದರಿಯ , ಅಂದವಾದ ಸೀರೆಗಳ ಬೃಹತ್ ಮೇಳ ಪುತ್ತೂರಿನ ಜಿ.ಎಲ್ ವನ್ ಮಾಲ್ ಇದರ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಫೆ.1 ರಿಂದ ಪ್ರಾರಂಭಗೊಂಡಿದೆ. ಮೇಳ ಆರಂಭದ ದಿನವೇ ನೀರೆಯರು ಮೆಚ್ಚಿನ ಉಡುಪುಗಳ ಖರೀದಿಗೆ ಮುಗಿಬೀಳುವ ಮೂಲಕ ಶಾಪಿಂಗ್ ಹಬ್ಬಕ್ಕೆ
ಅತ್ಯುತ್ತಮ ಬೆಂಬಲ , ಸಹಕಾರ ನೀಡೋ ಮೂಲಕ ಮೇಳಕ್ಕೆ ಮತ್ತಷ್ಟೂ ಮೆರಗು ತುಂಬಿದರು. ಜೊತೆಗೆ ಮೊದಲು ಬಂದ 50 ಮಹಿಳಾ ಗ್ರಾಹಕರಿಗೆ ಉಚಿತವಾಗಿ ಸೀರೆಯು ಸಿಕ್ಕಿತು.
ಮಹಿಳೆಯರ ಮತ್ತು ಯುವತಿಯರ ಅಚ್ಚುಮೆಚ್ಚಿನ ವಿನೂತನ ವಿನ್ಯಾಸವುಳ್ಳ ಸೀರೆಗಳು , ಚೂಡಿಗಳ ಸಹಿತ ಎಲ್ಲಾ ಬಗೆಯ ಉಡುಪುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸೋ ಅವಕಾಶವನ್ನು ಮೇಳದ ಆಯೋಜಕರು ಒದಗಿಸಿಕೊಟ್ಟಿರುವುದು ಸುತ್ತಮುತ್ತಲ ಶಾಪಿಂಗ್ ಪ್ರಿಯರ ಮನದಲ್ಲಿ ಹಬ್ಬ ದ ವಾತವರಣ ಸೃಷ್ಟಿಯಾಯಿತು. ಕೇವಲ 69/- ಬೆಲೆಗೆ ಪ್ರಾರಂಭಗೊಂಡಿರುವ ಸೀರೆಗಳು , ರೂಪಾಯಿ 599/- ಬೆಲೆಯಲ್ಲಿ 3 ಪೀಸ್ ಕುರ್ತೀಸ್ ಮಾತ್ರವಲ್ಲದೇ ಹಲವಾರು ಬಗೆಯ ಉಡುಪುಗಳೆಲ್ಲಾ ಅತೀ ಕಡಿಮೆ ಬೆಲೆಯಲ್ಲಿ ಅಂದರೇ , ಫ್ಯಾಕ್ಟರಿ ಬೆಲೆಯಲ್ಲೇ ಗ್ರಾಹಕರ ಕೈ ಸೇರಲಿದೆ. ಇಷ್ಟು ಮಾತ್ರವಲ್ಲದೇ ಪ್ರತಿದಿನ ಮಳಿಗೆಗೆ ಆಗಮಿಸುವ ಮೊದಲ 50 ಗ್ರಾಹಕರಿಗೆ ಉಚಿತವಾಗಿ 50 ಸೀರೆಯನ್ನು ಪಡೆಯೋ ಸುವರ್ಣವಕಾಶವನ್ನು ಕೂಡ ಕಲ್ಪಿಸಲಾಗಿದ್ದು , ಶಾಪಿಂಗ್ ಪ್ರಿಯರು ಇವೆಲ್ಲಾ ಕೊಡುಗೆಗಳ ಪ್ರಯೋಜನ ಪಡೆಯುವಂತೆ ಆಯೋಜರು ತಿಳಿಸಿದ್ದಾರೆ.

ಶೀಘ್ರವೇ ಪುತ್ತೂರಿನಲ್ಲಿ ಮಳಿಗೆ…
ಸಿಂಧೂರ ಸಾರಿ ಮೇಳ ಇದರ ಚೊಚ್ಚಲ ಮಳಿಗೆ ಶೀಘ್ರವೇ ಪುತ್ತೂರಿನ ಕೋರ್ಟು ರಸ್ತೆಯಲ್ಲಿ ಶುಭಾರಂಭಗೊಳ್ಳಲಿದೆಯೆಂದು ಆಯೋಜಕರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here