







ಪುತ್ತೂರು: ಅಂತರರಾಷ್ಟ್ರೀಯ ಲಯನ್ಸ್ ಇದರ ಲಯನ್ಸ್ ಜಿಲ್ಲೆ 317ಡಿ, ರೀಜ್ಹನ್ 7, ವಲಯ ಎರಡರ ಲಯನ್ಸ್ ಕ್ಲಬ್ ಪುತ್ತೂರು ಕಾವು ಹಾಗೂ ಲಿಯೋ ಕ್ಲಬ್ ರಾಮಕೃಷ್ಣಗೆ ಫೆ.10 ರಂದು ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ನೀಡಿ ಕ್ಲಬ್ ನ ವಿವಿಧ ಸಮಾಜಮುಖಿ ಕಾರ್ಯಗಳನ್ನು ಅನಾವರಣಗೊಳಿಸಲಿದ್ದಾರೆ.


ಕಾವು ಮುಖ್ಯ ರಸ್ತೆಯ ಸಮುದಾಯ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಹಾಗೂ ಅವರ ಪತ್ನಿ ಜಿಲ್ಲೆಯ ಪ್ರಥಮ ಮಹಿಳೆ ಮಮತಾ ಶೆಣೈರವರು ಭಾಗವಹಿಸಲಿದ್ದು ಲಯನ್ಸ್ ಬಂಧುಗಳು ಕಾರ್ಯಕ್ರಮದಲ್ಲಿ ಹಾಜರಿರಬೇಕಾಗಿ ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಇಬ್ರಾಹಿಂ ಹಾಜಿ ಕೆ, ಕಾರ್ಯದರ್ಶಿ ದೇವಣ್ಣ ರೈ, ಕೋಶಾಧಿಕಾರಿ ರಮೇಶ್ ಆಳ್ವ ಎ, ಲಿಯೋ ಕ್ಲಬ್ ರಾಮಕೃಷ್ಣ ಅಧ್ಯಕ್ಷ ಶ್ರೀವತ್ಸ ಕೆ.ಎಸ್, ಕಾರ್ಯದರ್ಶಿ ಲಾವಣ್ಯ ನಾಯಕ್, ಕೋಶಾಧಿಕಾರಿ ಸಾನ್ವಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













