3ನೇ ರಾಜ್ಯ ಮಟ್ಟದ ವಯೋವರ್ಗ ಹಾಗೂ ಓಪನ್ ಈಜು ಸ್ಪರ್ಧೆ : ಪುತ್ತೂರು ಅಕ್ವಾಟಿಕ್ ಕ್ಲಬ್ ಈಜುಗಾರರ ಸಾಧನೆ

0

ಪುತ್ತೂರು : ಮಂಗಳೂರಿನ ಯೆಮ್ಮೆಕೆರೆ ಅಂತರ್‌ ರಾಷ್ಟ್ರೀಯ ಈಜುಕೊಳದಲ್ಲಿ ಫೆ.8ರಂದು ನಡೆದ ಪುರುಷ ಮತ್ತು ಮಹಿಳೆಯರ 3ನೇ ರಾಜ್ಯ ಮಟ್ಟದ ವಯೋವರ್ಗ ಹಾಗೂ ಓಪನ್ ಈಜು ಸ್ಪರ್ಧೆ – 2026 ರಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಗಾರರು ಉತ್ತಮ ಸಾಧನೆಗೈದಿದ್ದಾರೆ.

ಅಕ್ವಾಟಿಕ್ ಕ್ಲಬ್‌ನ ಈಜುಗಾರ ಲಿಖಿತ್ ರಾಮಚಂದ್ರ ಅವರು 100ಮೀ ಫ್ರೀಸ್ಟೈಲ್ ,50ಮೀ ಬ್ರೆಸ್ಟ್‌ಸ್ಟ್ರೋಕ್, 50ಮೀ ಫ್ರೀಸ್ಟೈಲ್ , 4×50ಮೀ ಫ್ರೀಸ್ಟೈಲ್ ರಿಲೇ, 400ಮೀ ಫ್ರೀಸ್ಟೈಲ್ ನಲ್ಲಿ ಚಿನ್ನ,4×50ಮೀ ಮೆಡ್ಲಿ ರಿಲೇಯಲ್ಲಿ ಬೆಳ್ಳಿ ಪಡೆದು ವೈಯಕ್ತಿಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದ್ದಾರೆ.

ಚಾರಿತ್ ಅವರು 100ಮೀ ಫ್ರೀಸ್ಟೈಲ್ ನಲ್ಲಿ ಕಂಚು, 50ಮೀ ಬಟರ್‌ಫ್ಲೈನಲ್ಲಿ ಚಿನ್ನ,50ಮೀ ಫ್ರೀಸ್ಟೈಲ್ ನಲ್ಲಿ ಕಂಚು, 4×50ಮೀ ಮೆಡ್ಲಿ ರಿಲೇಯಲ್ಲಿ ಬೆಳ್ಳಿ, 4×50ಮೀ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಗಳಿಸಿದ್ದಾರೆ.

ನಮನ್‌ ಅವರು 4×50ಮೀ ಮೆಡ್ಲಿ ರಿಲೇಯಲ್ಲಿ ಬೆಳ್ಳಿ,4×50ಮೀ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಪಡೆದಿದ್ದಾರೆ. ವೈಷ್ಣವ್ ಅವರು 4×50ಮೀ ಮೆಡ್ಲಿ ರಿಲೇಯಲ್ಲಿ ಬೆಳ್ಳಿ, 4×50ಮೀ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಪಡೆದಿದ್ದಾರೆ. ಪೂರ್ವಿಕಾ ಅವರು 50ಮೀ ಬ್ರೆಸ್ಟ್‌ಸ್ಟ್ರೋಕ್ ನಲ್ಲಿ ಬೆಳ್ಳಿ, 25ಮೀ ಫ್ರೀಸ್ಟೈಲ್ ನಲ್ಲಿ ಕಂಚು ತನ್ನದಾಗಿಸಿಕೊಂಡಿದ್ದಾರೆ. ಒಟ್ಟು ಸಂಸ್ಥೆ 9 ಚಿನ್ನ, 5ಬೆಳ್ಳಿ,3ಕಂಚು ಸೇರಿ 17 ಪದಕ ಪಡೆದಿದ್ದಾರೆ.


ಈ ಎಲ್ಲಾ ಈಜುಗಾರರು ಪುತ್ತೂರು ಅಕ್ವಾಟಿಕ್ ಕ್ಲಬ್ ಅನ್ನು ಪ್ರತಿನಿಧಿಸುತ್ತಿದ್ದು, ಪುತ್ತೂರಿನ ಡಾ. ಶಿವರಾಮ ಕಾರಂತ ಈಜುಕೊಳದಲ್ಲಿ ನಿರಂತರ ತರಬೇತಿ ಪಡೆಯುತ್ತಿದ್ದಾರೆ. ಇವರ ಸಾಧನೆಯ ಹಿಂದೆ ತರಬೇತುದಾರರಾದ ಪಾರ್ಥ ವಾರಣಾಶಿ, ಕ್ರತಿ ತೇಜ, ತ್ರಿಶೂಲ್ ಗೌಡ, ವಿಕಾಸ್ ಹಾಗೂ ಶಿಶಿಲ್ ಗೌಡ ಅವರು ಮಾರ್ಗದರ್ಶನ ನೀಡಿದ್ದಾರೆ.

LEAVE A REPLY

Please enter your comment!
Please enter your name here