







ಪುತ್ತೂರು: ಯುವ ಸಾಹಿತಿಯಾಗಿರುವ ಅನನ್ಯ ಎಚ್ ಸುಬ್ರಹ್ಮಣ್ಯ ರವರ ಎರಡನೇಯ ಪುಸ್ತಕ ಪ್ರಗೀತ ನಾಳೆ ಫೆ.15ರಂದು ಬಿಡುಗಡೆಯಾಗಲಿದ್ದು, ಮುಕ್ಕೂರು ಶಾಲಾ ವಠಾರದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ನೇಸರ ಯುವಕ ಮಂಡಲ ನೇಸರ ಯುವತಿ ಮಂಡಲ ಮುಕ್ಕೂರು ನೇತೃತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಹಕಾರದೊಂದಿಗೆ ನೇಸರ ದಶಪ್ರಣತಿ ಪ್ರಯುಕ್ತ ಅಂತರ್ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ 52 ಕವಿಗಳಿಂದ ಕವಿಗೋಷ್ಠಿ ಕೂಡ ನಡೆಯಲಿದೆ.



ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಎಚ್ ಸುಬ್ರಹ್ಮಣ್ಯರವರ ಹಾದಿ
ನಿರಂತರವಾಗಿ ಕವನ, ಲೇಖನ , ಕಥೆ, ನುಡಿಮುತ್ತು, ಪ್ರಬಂಧಗಳನ್ನು ಬರೆಯುತ್ತಾ ಸಮಾಜಕ್ಕೆ ಪರಿಚಯವಾಗಿರುವ ಅನನ್ಯ ಎಚ್ ಸುಬ್ರಹ್ಮಣ್ಯ ಈಗಾಗಲೇ ಹಲವಾರು ಬರಹಗಳನ್ನು ನೀಡಿದ್ದು, ಇವರ ನೂರು ಕವನಗಳ “ಅಭಿಶಸ್ತಿ” ಎನ್ನುವ ಕವನ ಸಂಕಲನ ಬಿಡುಗಡೆಯಾಗಿ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಗುತ್ತಿರುವುದು ಇವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ನೂರಕ್ಕೂ ಹೆಚ್ಚು ಲೇಖನಗಳು ಜಿಲ್ಲಾ, ರಾಜ್ಯ ಮಟ್ಟದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.



ಜಿಲ್ಲಾ,ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಅನುಭವ ಇವರಿಗಿದ್ದು. ಅನೇಕ ಕವನಗಳಲ್ಲಿ ಬಹುಮಾನಗಳು ಬಂದಿರುತ್ತದೆ. ಇವುಗಳೊಂದಿಗೆ ಜಿಲ್ಲಾ, ರಾಜ್ಯ ಮಟ್ಟದ ಸಂಶೋಧನೆ ಪ್ರಬಂಧ ಮಂಡನೆಗಳು ಹಾಗೂ ಕಾದಂಬರಿ, ಕಥೆಗಳ ವಿಮರ್ಶೆ ಮಾಡಿ ವಾಚಿಸಿರುವ ಅನುಭವಿ ಪ್ರತಿಭೆಯಾಗಿರುತ್ತಾರೆ. ಹಿನ್ನಲೆ ಧ್ವನಿ ಕೊಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಧ್ವನಿ ಕೊಡುವ ಹುಡುಗಿ ಎಂದು ಖ್ಯಾತಿ ಪಡೆದ ಇವರು ತನ್ನದೇ ಕವನ ಲೇಖನಗಳಿಗೆ ಧ್ವನಿ ನೀಡುತ್ತಾ ಬರುತ್ತಿದ್ದಾರೆ. ಅಲ್ಲದೇ ಮಂಗಳೂರಿನ ಆಕಾಶವಾಣಿಯಲ್ಲಿ ಲೇಖನ ಕವನಗಳನ್ನು ವಾಚಿಸಿರುತ್ತಾರೆ. ಇವರು ಕುಕ್ಕೇ ಸುಬ್ರಹ್ಮಣ್ಯ ನಿವಾಸಿಗಳಾದ ಗಂಗಾಧರ ಮತ್ತು ಜಯಶ್ರೀ ದಂಪತಿಗಳ ಪುತ್ರಿ.










