







ಪುತ್ತೂರು: ಪುತ್ತೂರಿನ ಪಡೀಲ್ನಲ್ಲಿ ಸಮೀರ್ ಪಡೀಲ್ ಮತ್ತು ಫ್ರೆಂಡ್ಸ್ ಪಡೀಲ್ ವತಿಯಿಂದ ಪಿಲಿರಾಧಣ್ಣ ಮತ್ತು ಬಳಗದ ಶಾರದಾ ಹುಲಿ ಪಡೀಲ್ನಲ್ಲಿ ಅ.21ರಂದು ವಿಶೇಷ ಪ್ರದರ್ಶನ ನೀಡಿತು.



ಪುತ್ತೂರಿನ ಮಣ್ಣಿನಲ್ಲಿ ಹುಲಿಕುಣಿತದ ಅಬ್ಬರಕ್ಕೆ ಹೊಸ ಭಾಷ್ಯ ಬರೆದವರು ಪಿಲಿರಾಧಣ್ಣ..
ಹುಲಿಕುಣಿತಕ್ಕೆ ಪುತ್ತೂರಿನ ಮಣ್ಣಿನಲ್ಲಿ ಹೊಸ ರೂಪ ಕೊಟ್ಟ ಪಿಲಿ ರಾಧಣ್ಣ ಅವರ `ಟೀಮ್ ಪಿಲಿ ರಾಧಣ್ಣ’ ತಂಡಕ್ಕೆ 50 ವರ್ಷದ ಸಂಭ್ರಮ. ಆದರೆ ಪಿಲಿರಾಧಣ್ಣ ಖ್ಯಾತಿಯ ರಾಧಾಕೃಷ್ಣ ಶೆಟ್ಟಿ ಅವರು 2025ರ ಸೆ.5ರಂದು ಅನಾರೋಗ್ಯದಿಂದ ಸ್ವರ್ಗಸ್ಧರಾಗಿದ್ದಾರೆ. ಪಿಲಿ ರಾಧಣ್ಣ ಅವರ ನೆನಪನ್ನ ಶಾಶ್ವತವಾಗಿಸುವ ಕೆಲಸವನ್ನ ಅನೇಕರು ಮಾಡುತ್ತಿದ್ದಾರೆ. ಆದ್ರೆ ಮುಸ್ಲಿಂ ಸಮುದಾಯದ ಆತ್ಮೀಯ ಗೆಳೆಯ ಸಮೀರ್ ಅವರು ಕಳೆದ ವರ್ಷ ಪಿಲಿರಾಧಣ್ಣ ಅವರ ನೆನಪಿಗಾಗಿ ಪಡೀಲ್ ಬಸ್ ನಿಲ್ಧಾಣದ ಹತ್ತಿರ ಸಾರ್ವಜನಿಕರಿಗೆ ಆನುಕೂಲವಾಗುವಂತೆ ಕುಡಿಯುವ ನೀರಿನ ಸೆಂಟರ್ನ್ನ ನಿರ್ಮಿಸಿದ್ದರು. ಈ ವರ್ಷ ಹುಲಿ ಹೆಜ್ಜೆಯ ಗತ್ತಿಗೆ ಬೆಳ್ಳಿಯ ನೋಟಿನ ಹಾರದ ಉಡುಗೊರೆಯನ್ನ ಸಮರ್ಪಿಸಿ ಹುಲಿ ಕುಣಿತದ ಜೋಶ್ ಹೆಚ್ಚಿಸಿದ್ದಾರೆ.




ಮುಂಬೈನಲ್ಲಿ ಸಿದ್ದವಾದ ಬೆಳ್ಳಿನೋಟಿನ ಹಾರ..
ಮುಂಬೈನಲ್ಲಿ ಉದ್ಯಮವನ್ನ ನಡೆಸುತ್ತಿರುವ ಸಮೀರ್ ಪಡೀಲ್ ಅವರು ಪ್ರತಿ ವರ್ಷ ನವರಾತ್ರಿಯ ಸಂದರ್ಭ ಊರಿಗೆ ಆಗಮಿಸುತ್ತಾರೆ. ಪಡೀಲ್ ಪ್ರೆಂಡ್ಸ್ಗಳನ್ನ ಒಟ್ಟು ಸೇರಿಸಿಕೊಂಡು ಪಿಲಿರಾಧಣ್ಣನ ತಂಡದ ಪ್ರದರ್ಶನಕ್ಕಾಗಿ ವಿಶೇಷ ಹುಲಿ ಕುಣಿತದ ವೇದಿಕೆಯನ್ನು ಸಜ್ಜುಗೊಳಿಸುತ್ತಾರೆ. ಪಿಲಿ ರಾಧಣ್ಣನ ತಂಡಕ್ಕೆ 50 ವರ್ಷವಾದ ಹಿನ್ನಲೆಯಲ್ಲಿ ವಿಶೇಷವಾದ ಬೆಳ್ಳಿ ನೋಟಿನ ಹಾರವನ್ನ ಮುಂಬೈನಲ್ಲಿ ಮಾಡಿಸಿ ತಂದಿದ್ದು., ಇದು 1ಲಕ್ಷ ರೂಪಾಯಿಗಿಂದಲೂ ಹೆಚ್ಚಿನ ಬೆಲೆಯ ಹಾರ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಮೀರ್ ಅವರು ಹಣ ಮುಖ್ಯವಲ್ಲ ನಮ್ಮ ಸ್ನೇಹ ಸಂಬಂಧ ಮುಖ್ಯ ಎಂದು ನಗುತ್ತಾ ಉತ್ತರಿಸಿದ್ದಾರೆ.
ಸಮಿರ್ ಸ್ವಂತ ಅಣ್ಣನಿಗಿಂತ ಜಾಸ್ತಿ
ಕಲೆಯನ್ನೂ ಪ್ರೀತಿಸುವ, ಸ್ನೇಹಿತರನ್ನೂ ಗೌರವಿಸುವ ಸಮೀರ್ನಂತಹ ಮಿತ್ರ ಸಿಕ್ಕಿರುವುದು ನನ್ನ ಸೌಭಾಗ್ಯ. ಇಂತಹ ಪ್ರೋತ್ಸಾಹಕರು ಇರುವಾಗ ಹೆಚ್ಚಿನ ಗೌಜಿ ಇರುತ್ತದೆ. ನಮ್ಮ ಸ್ವಂತ ಅಣ್ಣನಿಗಿಂತ ಜಾಸ್ತಿ ಸಹಕಾರ ನೀಡುತ್ತಾರೆ. ಈ ಸಂಭ್ರಮ ನಮ್ಮ ಪ್ರೀತಿಯ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿದೆ ಎನ್ನುತ್ತಾರೆ ಪಿಲಿ ರಾಧಣ್ಣನ ಪುತ್ರ ಅಭಿಷೇಕ್.










