ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕೂವೆ ಶಾಸ್ತಾರ ದೇವಸ್ಥಾನದ ಪವಿತ್ರಪಾಣಿ ದಂಪತಿಯಿಂದ ರೂ.7 ಲಕ್ಷ ಮೌಲ್ಯದ ಬೆಳ್ಳಿಯ ಕೊಡೆ ಸಮರ್ಪಣೆ

0

ಸಮರ್ಪಣೆ ವೇಳೆ ಕಟ್ಟೆ ನಿರ್ಮಾಣಕ್ಕೂ ರೂ.25 ಲಕ್ಷ ವಾಗ್ದಾನ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು‌ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪವಿತ್ರಪಾಣಿ ಕೇಶವ ಭಟ್ ಕೆ ಕೂವೆತೋಟ ಮತ್ತು ಕೆ ಶಾಂತಾ ಕುಮಾರಿ ದಂಪತಿ 2.640 ಕೆ.ಜಿಯ ಸುಮಾರು ರೂ.7 ಲಕ್ಷ ಮೌಲ್ಯದ ಬೆಳ್ಳಿಯ ಕೊಡೆಯನ್ನು ಸಮರ್ಪಣೆ ಮಾಡಿದ್ದಾರೆ.


ಫೆ.14ರಂದು ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಿ ಸಮರ್ಪಣೆ ಮಾಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಕೇಶವ ಭಟ್ ದಂಪತಿಗೆ ಶಾಲು ಹೊದಿಸಿ ಗೌರವಿಸಿದರು. ಪ್ರಧಾನ ಅರ್ಚಕ ವೇ ‌ಮೂ ವಸಂತ ಕೆದಿಲಾಯ ಪ್ರಸಾದ ನೀಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ‌ ಸದಸ್ಯರಾದ ಈಶ್ವರ ಭಟ್, ವಿನಯ ಸುವರ್ಣ ಮತ್ತು ನಗರಸಭಾ ನಿಕಟಪೂರ್ವ ಸದಸ್ಯ ಪಿಜಿ ಜಗನ್ನಿವಾಸ ರಾವ್, ವೇ ಮೂ ವಿನಯ ತಂತ್ರಿ, ಬೆಳ್ಳಿಯ ಕೊಡೆ ನಿರ್ಮಾಣ ಮಾಡಿದ ಜನಾರ್ದನ ಆಚಾರ್ಯ ಕಾಟುಕುಕ್ಕೆ, ಪುತ್ತೂರು ಪರ್ಲಡ್ಕ ನಿವಾಸಿ ನಿರಂಜನ ಆಚಾರ್ಯ, ಕೇಶವ ದಂಪತಿಯ ಸಂಬಂಧಿಕ ರಾಧೇಶ್ಯಾಮ್ ಅಜೇಯನಗರ, ಲೋಕೇಶ್ ಪಡ್ಡಾಯೂರು, ರೋಹನ್ ರಾಜ್, ಸುದೇಶ್ ಚಿಕ್ಕಪುತ್ತೂರು, ಗೋಪಾಲ್, ಪ್ರಶಾಂತ್ ಭಟ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಕಟ್ಟೆ ನಿರ್ಮಾಣಕ್ಕೆ ರೂ.25 ಲಕ್ಷ ವಾಗ್ದಾನ
ಕೇಶವ ಭಟ್ ಕೆ ಕೂವೆತೋಟ ಅವರು ಮೂಲತಃ ಕೂವೆಶಾಸ್ತಾರ ಮನೆತನದವರಾಗಿದ್ದು, ಪ್ರಸ್ತುತ ವಿಟ್ಲ ಧನ್ವಂತರಿ ನಿಲಯದಲ್ಲಿ ವಾಸ್ಯವ್ಯ ಹೊಂದಿದ್ದಾರೆ. ಅವರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ಕೊಡೆ ಸಮರ್ಪಣೆ ವೇಳೆ ದೇವಳದ ಅಭಿವೃದ್ದಿಯ ದೃಷ್ಟಿಯಿಂದ ಹೊರಾಂಗಣದ 4 ಕಟ್ಟೆಗಳ ಪುನರ್ ನಿರ್ಮಾಣ ಕಾರ್ಯದ ಕುರಿತು ಮಾಹಿತಿ ಪಡೆದು ಒಂದು ಕಟ್ಟೆಯ ನಿರ್ಮಾಣದ ವೆಚ್ಚ ರೂ.25 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದರು. ಫೆ.21ರಂದು ಶಿಲಾನ್ಯಾಸದ ಸಂದರ್ಭ ರೂ.5 ಲಕ್ಷ ಮೊದಲ ಕಂತು ನೀಡುವುದಾಗಿ ತಿಳಿಸಿದ್ದಾರೆ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ

LEAVE A REPLY

Please enter your comment!
Please enter your name here