







ಪುತ್ತೂರು: ನರಿಮೊಗರು ಗ್ರಾಮದ ಎಲಿಕಾದ ಶ್ರೀ ವರಮಹಾಲಕ್ಷ್ಮೀ ಸದನ ಮನೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಚಾವಡಿ ಎಲಿಕಾ ಶ್ರೀ ಸತ್ಯದೇವತೆ ಪಾಷಾಣಮೂರ್ತಿಯು ದೈವಸ್ಥಾನದ ವರ್ಷಾವಧಿ ನೇಮೋತ್ಸವ, ಪ್ರತಿಷ್ಠಾ ಕಾರ್ಯಕ್ರಮ ಫೆ.15 ಮತ್ತು 16 ರಂದು ಅದ್ದೂರಿಯಾಗಿ ನಡೆಯಿತು.




ಫೆ.15 ರಂದು ಬೆಳಗ್ಗೆ 10.15ಕ್ಕೆ ಪ್ರತಿಷ್ಠಾ ಕಾರ್ಯಕ್ರಮ ನಡೆದು ನವಕಲಶ ಹಾಗೂ ದೈವಗಳಿಗೆ ತಂಬಿಲ ಸೇವೆ ನಡೆಯಿತು. ವೇ.ಮೂ. ಹರಿಪ್ರಸಾದ್ ಭಟ್ ಬನಾರಿ ಪೌರೋಹಿತ್ಯದಲ್ಲಿ ಪ್ರತಿಷ್ಠಾಪನೆ ನೆರವೇರಿತು.





ಫೆ.16 ರಂದು ಸಂಜೆ 5 ಗಂಟೆಗೆ ದುರ್ಗಾನಮಸ್ಕಾರ ಪೂಜೆ ನಡೆಯಿತು. ಇದೇ ವೇಳೆ, ವಿಷ್ಣುನಗರ ಕುಂಡಡ್ಕದ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು. ಬಳಿಕ ಇರ್ದೆ ಶ್ರೀ ವಿಷ್ಣುಸಿಂಗಾರಿ ಮೇಳದಿಂದ ಚೆಂಡೆವಾದನ ನಡೆಯಿತು. ಸಂಜೆ 7 ಗಂಟೆಗೆ ದೈವಗಳ ಭಂಡಾರ ತೆಗೆದ ಬಳಿಕ ಅನ್ನಸಂತರ್ಪಣೆ ನಡೆಯಿತು.

ರಾತ್ರಿ 10 ಗಂಟೆಗೆ 17ನೇ ವರ್ಷದ ಕಲ್ಲುರ್ಟಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು. ಶಶಾಂಕ ನೆಲ್ಲಿತ್ತಾಯ ಕೊಂಬೆಟ್ಟು ಮಧ್ಯಸ್ಥರಾಗಿ ಹಾಗೂ ಭಾಸ್ಕರ ಶೆಟ್ಟಿ ಊರಮಾಲ್ ದರ್ಶನ ಪಾತ್ರಿಯಾಗಿ ಕಾರ್ಯನಿರ್ವಹಿಸಿದರು. ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್, ಮಕ್ಕಳು ಮತ್ತು ಊರ ಸಮಸ್ತರು ನೇಮೋತ್ಸವದಲ್ಲಿ ಭಾಗಿಯಾಗಿದ್ದರು.

ಅನಂತ್ ಭಟ್ ಅವರು ಗಗ್ಗರ, ಗಾಯತ್ರಿ ಅವರು ಚಿನ್ನ, ವಸುಧಾ ಅವರು ಬೆಳ್ಳಿಯ ಬಳೆ, ನಿತಿನ್ ಶೆಣೈ ಮತ್ತು ಅಶ್ವಿನಿ ಭಟ್ ಬೆಳ್ಳಿಯ ಹೂವು, ಅಕ್ಷಯ್ ಅವರು ಸೊಂಟದ ಪಟ್ಟಿಯನ್ನು ಶ್ರೀಕ್ಷೇತ್ರಕ್ಕೆ ಸೇವಾರೂಪವಾಗಿ ನೀಡಿದರು.

ಶಿವಾನಂದ ಪ್ರಭು, ಚಂದ್ರಕಾಂತ್ ಭಟ್, ರಾಧಾಕೃಷ್ಣ ಭಟ್, ರಾಘು, ರಾಜೇಶ್ ಪೂಜಾರಿ, ಜಯಶ್ರೀ, ಗಣೇಶ್ ಭಟ್, ಅಕ್ಷಯ್, ಯೋಗಿಶ್ ನಾಯ್ಕ್, ಉದಯ, ಲಕ್ಷ್ಮೀನಾರಾಯಣ ಭಟ್, ಕಿರಣ, ಶಿವಾನಿ, ಲಕ್ಷ್ಮೀಶ ಭಟ್, ಸಂಧ್ಯಾ ಸತೀಶ್ ಅವರು ಅನ್ನಸಂತರ್ಪಣೆಗೆ ದೇಣಿಗೆ ನೀಡಿದರು. ಮಧ್ಯಾಹ್ನ ಹಾಗೂ ರಾತ್ರಿ ನೂರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿತು.
ನಿರ್ದೇಶಕ ಅಕ್ಷಯ್ ನಾಯಕ್ರಿಗೆ ಸನ್ಮಾನ

17ನೇ ಅಂತಾರಾಷ್ಟ್ರೀಯ ಚಿತಯ್ರೋತ್ಸವಕ್ಕೆ ಜೇವಣ್ ಎಂಬ ಕೊಂಕಣಿ ಚಿತ್ರ ಆಯ್ಕೆಯಾದ ಹಿನ್ನೆಲೆ ಸಿನಿಮಾದ ನಿರ್ದೇಶಕರೂ ಆಗಿರುವ ಕ್ಷೇತ್ರದ ಭಕ್ತರಾಗಿರುವ ಕರೋಪಾಡಿ ಅಕ್ಷಯ್ ನಾಯಕ್ ಅವರನ್ನು ನೇಮೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.










