ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಸ್ಕೌಟ್ ಗೈಡ್, ಕಬ್-ಬುಲ್ ಬುಲ್ ಶಿಬಿರ

0

ಪುತ್ತೂರು: ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೇ ಸಾಲಿನ ಸ್ಕೌಟ್-ಗೈಡ್, ಕಬ್-ಬುಲ್ ಬುಲ್ ಶಿಬಿರವು ಫೆಬ್ರವರಿ 13 ಮತ್ತು 14 ರಂದು ಸಂಭ್ರಮದಿಂದ ನೆರವೇರಿತು.


ಶಿಬಿರದ ಪ್ರಥಮ ದಿನವಾದ ಫೆ.13ರಂದು ಮಧ್ಯಾಹ್ನ ಶಿಬಿರಾರ್ಥಿಗಳ ಆಗಮನ ಹಾಗೂ ನೋಂದಣಿ ಪ್ರಕ್ರಿಯೆ, ಬಳಿಕ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಮನೋಜ್ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಉತ್ತೇಜನಕಾರಿ ಮಾತುಗಳೊಂದಿಗೆ ಶುಭ ಹಾರೈಸಿದರು. ಸಂಜೆ ನಡೆದ ಬೃಹತ್ ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಶಾಲಾ ವಾದ್ಯ ವೃಂದದೊಂದಿಗೆ ಶಿಬಿರಾಗ್ನಿ ಕಾರ್ಯಕ್ರಮಕ್ಕೆ ಕರೆತರಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್, ಬೆಥನಿ ಕಾನ್ವೆಂಟ್ ಬೆಂದೂರು,ಮಂಗಳೂರು ಇದರ ಮುಖ್ಯಸ್ಥೆ ಭಗಿನಿ ಶುಭ ಬಿ.ಎಸ್, ಶಾಲೆಯ ಪ್ರಾಂಶುಪಾಲೆ ಭಗಿನಿ ಅನಿತಾ, ಭಾರತ್ ಸ್ಕೌಟ್-ಗೈಡ್‌ನ ಸಹ ರಾಜ್ಯ ಸಂಘಟನಾ ಆಯುಕ್ತ ಭರತ್ ರಾಜ್.ಕೆ, ಸ್ಕೌಟ್- ಗೈಡ್ ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಶಾಫಿ ಹಾಗೂ ಉಪಾಧ್ಯಕ್ಷೆ ತೆರೇಸಾ ಸಿಕ್ವೇರಾ, ಶಾಲಾ ರಕ್ಷಕ- ಶಿಕ್ಷಕ ಸಂಘದ ಸದಸ್ಯರು, ಕಾರ್ಯಕ್ರಮದ ಪ್ರಾಯೋಜಕರು ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳ ನಾಟಕ ಹಾಗೂ ಪಿರಮಿಡ್ ಪ್ರೇಕ್ಷಕರ ಮನಸೂರೆಗೊಳಿಸಿತು. ನಂತರ ಸಹಭೋಝನ ನೆರವೇರಿತು.


ಶಿಬಿರದ ಎರಡನೇ ದಿನವಾದ ಫೆ.14ರಂದು ಬೆಳಿಗ್ಗೆ ಬಿ.ಪಿ. ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ಹಾಗೂ ಧ್ವಜಾರೋಹಣ ನಡೆಯಿತು. ಉಪಹಾರದ ಬಳಿಕ ಶಿಬಿರಾರ್ಥಿಗಳಿಗೆ ಕಿಮ್ಸ್ ಗೇಮ್ಸ್, ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ, ಉಪಕರಣ ತಯಾರಿಕೆ ಕಾರ್ಯಗಾರ ರೋವರ್ ಲೀಡರ್ ಚಂದ್ರಾಕ್ಷ ನಡೆಸಿಕೊಟ್ಟರು. ಎಎಲ್‌ಟಿ ಗೈಡ್ ಮೇಬಲ್ ಡಿ ಸೋಜಾ ಇವರ ನೇತೃತ್ವದಲ್ಲಿ ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳಿಗೆ ಮನೋರಂಜನಾ ಆಟಗಳು, ಚಿತ್ರಕಲೆ ಹಾಗೂ ಕರಕುಶಲ ತರಬೇತಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ರೋವರ್ ಲೀಡರ್ ಚಂದ್ರಾಕ್ಷ , ರಕ್ಷಕ- ಶಿಕ್ಷಕ ಸಂಘದ ಸದಸ್ಯ ರಾಮಚಂದ್ರ ಭಟ್, ಸ್ಕೌಟ್ ಗೈಡ್ ವಿದ್ಯಾರ್ಥಿಗಳು, ಶಾಲಾ ಪ್ರಾಂಶುಪಾಲರು, ಶಾಲಾ ಸಂಚಾಲಕಿ, ಸ್ಕೌಟ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್, ಶಾಲಾ ಶಿಕ್ಷಕರು ಸೇರಿದಂತೆ ಎಲ್ಲರೂ ಒಟ್ಟಾಗಿ ಬೀರಮಲೆ ಬೆಟ್ಟದಲ್ಲಿರುವ ಬೌದ್ಧಿಕ ದಿವ್ಯಾಂಗರ ಪ್ರಜ್ಞಾ ಆಶ್ರಮಕ್ಕೆ ಭೇಟಿ ನೀಡಿದರು. ಶಿಬಿರಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆಶ್ರಮವಾಸಿಗಳಿಗೆ ಹೊಸ ಹುರುಪು ನೀಡಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಧ್ವಜಾವರೋಹಣ ಈ ಸಾಲಿನ ಸಂಭ್ರಮದ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here