







ಪುತ್ತೂರು: ಬೆಳ್ತಂಗಡಿಯ ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.21ರಂದು ರಾತ್ರಿ ಗಂಟೆ 10:30ಕ್ಕೆ ಗಯಾಪದ ಕಲಾವಿದೆರ್ ಉಬಾರ್ ಇವರ ಅಭಿನಯದ ಕಿಶೋರ್ ಜೋಗಿ ಉಬಾರ್ ರವರ ಸಂಚಾಲಕತ್ವದಲ್ಲಿ ಚಾರಿತ್ರಿಕ, ವಿಭಿನ್ನ ರಂಗ ಸಜ್ಜಿಕೆಯ ರವಿಶಂಕರ ಶಾಸ್ತ್ರಿ ಮಣಿಲ, ಪುಣಚ ಇವರ ಕಲ್ಪನೆಯಲ್ಲಿ ಮೂಡಿಬಂದ ಚಾರಿತ್ರಿಕ, ಪೌರಾಣಿಕ ತುಳುನಾಟಕ
“ನಾಗ ಮಾಣಿಕ್ಯ ” ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತದೊಂದಿಗೆ ರಾಜೇಶ್ ಶಾಂತಿನಗರ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ವಿಶಿಷ್ಟ ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ, ಲಿತು ಸೌಂಡ್ಸ್ ಮತ್ತು ಲೈಟ್ಸ್ ಶಾಂತಿನಗರ ಇದರ ಕೃಷ್ಣ ಮುಂಡ್ಯ, ಸುಕೇಶ್ ವರ್ಕಾಡಿ ಮತ್ತು ಸಿದ್ದು ಬೆದ್ರ ಇವರ ಕೈ ಚಳಕ, ಪ್ರದೀಪ್ ಕಾವು ಇವರ ಮುಖವರ್ಣಿಕೆಯೊಂದಿಗೆ ಗುಣಕರ ಅಗ್ನಾಡಿಯವರ ನಿರ್ವಹಣೆಯೊಂದಿಗೆ ಮೂಡಿಬರಲಿದೆ.


ಕಲಾವಿದರುಗಳಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ, ಬಿ ಜಗದೀಶ್ ಶಿಬರ, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ವಿ.ಆರ್. ಅನುಷಾ ಜೋಗಿ ಪುರುಷರಕಟ್ಟೆ, ಸಂಧ್ಯಾಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್ ಆರ್ ಪುತ್ತೂರು, ಅನೀಶ್ ಉಬಾರ್, ಎ.ಯನ್ ಕೊಳಂಬೆ ರಾಮಕುಂಜ,
ಭರತ್ ಕುಮಾರ್ ಶಾಂತಿನಗರ, ಲಿತಿನ್ ಶಾಂತಿನಗರ, ಮನ್ವಿತ್ ಬೆಳ್ಳಿಪ್ಪಾಡಿ , ಹೃತಿಕ ಬೆಳ್ಳಿಪ್ಪಾಡಿ, ಪ್ರಣಿತಾ ಬಿ ಶಾಂತಿನಗರ ಅಭಿನಯಿಸಲಿದ್ದಾರೆ. ನಾಟಕದ ತಾಂತ್ರಿಕ ವರ್ಗದಲ್ಲಿ ವಿಜಯ್ ಶಾಂತಿನಗರ, ಭರತ್ ಶಾಂತಿನಗರ ಹರ್ಷ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಂಡದ ಪ್ರಕಟಣೆ ತಿಳಿಸಿದೆ.



ನಾಟಕ ಬುಕ್ಕಿಂಗ್ ಮಾಡಲು 9902543273, 9008136330 ಸಂಪರ್ಕಿಸಬಹುದಾಗಿದೆ.










