







ಕಾವು: ಜನರೇಶನ್ ನೆಕ್ಸ್ಟ್ ಖ.ಇ.ಅ.ಖಿ ಇವರಿಂದ ನಡೆಸಲ್ಪಡುವ ಕರ್ನಾಟಕ ರಾಜ್ಯ ಮಟ್ಟದ ಅಬಾಕಸ್ ಮತ್ತು ಬ್ರೈನ್ ಜಿಮ್ ಕಾಂಪಿಟಿಷನ್ 2025-26ರಲ್ಲಿ ನೆಹರೂನಗರದ ವಿವೇಕಾನಂದ ಕೇಂದ್ರೀಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ ಆದ್ಯಾ ಐ.ಆರ್. ರವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಈಶ್ವರಮಂಗಲ ನಿವಾಸಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖಾ ವ್ಯವಸ್ಥಾಪಕ ರಾಜೇಶ್ ಡಿ. ಮತ್ತು ಶಿಕ್ಷಕಿ ಶಿಲ್ಪಾರಾಣಿ ದಂಪತಿಗಳ ಪುತ್ರಿಯಾಗಿದ್ದಾರೆ.















