







ಪುತ್ತೂರು: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಫೆ.12ರಂದು ಆರಂಭಗೊಂಡಿದ್ದು ಫೆ.18ರಂದು ಮಹಾ ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಿತು.



ದೇವಾಲಯದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಗೌರವಾಧ್ಯಕ್ಷರಾದ ನಿರಂಜನ ರೈ ಎಲ್ನಾಡುಗುತ್ತು, ಮಲ್ಲಿಕಾ ಪ್ರಸಾದ್ ಭಂಡಾರಿ ಮೇನಾಲ, ರತನ್ ಕುಮಾರ್ ನಾಕ್ ಕರ್ನೂರು ಗುತ್ತು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ವಿಕ್ರಮ್ ರೈ ಸಾಂತ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಅರುಣ್ ಕುಮಾರ ಪುತ್ತಿಲ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಮೊಹನದಾಸ್ ಶೆಟ್ಟಿ ನೂಜಿಬೈಲು, ಜಾತ್ರೋತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ನಿವೃತ್ತ ಉಪತಹಶೀಲ್ದಾರ್ ರಾಮಣ್ಣ ನಾಯ್ಕ ಸಸ್ಯಹಿತು, ಚಿನ್ಮಯ ರೈ ನಡುಬೈಲು, ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ರಮಾನಂದ ಕೋರಿಗದ್ದೆ, ಹರೀಶ್ ರಾವ್ ಪಿ. ಸತೀಶ್ ಸುರುಳಿಮೂಲೆ, ಜತ್ತಪ್ಪಗೌಡ ಕೊಂಕಣಿಗುಂಡಿ, ರಮೇಶ್ ರೈ ಸಾಂತ್ಯ, ಆನಂದ ರೈ ಸಾಂತ್ಯ, ಜಯಚಂದ್ರ ಸೇರಾಜೆ, ಸುಭಾಶ್ಚಂದ್ರ ರೈ ಕರ್ನೂರು, ವಿಠಲ್ ಶೆಟ್ಟಿ ಸಾಂತ್ಯ, ಜಗದೀಶ್ ಶೆಟ್ಟಿ ಕುತ್ಯಾಳ, ರಾಮ್ ಪ್ರಸಾದ್ ಆಳ್ವ ಮೇನಾಲ, ರಾಮ ಮೇನಾಲ, ಸದಾಶಿವ ರೈ ನಡುಬೈಲು, ದೀಪಕ್ ಕುಮಾರ್ ಮುಂಡ್ಯ, ಆನಂದ ಗೌಡ ಕೆಮ್ಮತಡ್ಕ, ಧನಂಜಯ ಗೌಡ ಕೆಮ್ಮತ್ತಡ್ಕ, ರಮೇಶ್ ಆಳ್ವ ಅಲೆಪ್ಪಾಡಿ, ಜಯಾನಂದ ಕೋರಿಗದ್ದೆ, ಜಗನಾಥ ರೈ ನೆಲ್ಲಿತ್ತಡ್ಕ, ರಮೇಶ್ ಪೂಜಾರಿ ಮುಂಡ್ಯ, ಶೇಖರ್ ಪೂಜಾರಿ ಮುಂಡ್ಯ, ಪ್ರದೀಪ್ ರೈ ಮೇನಾಲ, ರಾಜೇಶ್ ಪಂಚೋಡಿ, ಡಾ. ಶ್ರೀಕುಮಾರ್ ಕತ್ರಿಬೈಲು, ಗಿರೀಶ್ ರೈ ಮರಕ್ಕಡ, ಸಂದೀಪ್ ಕಾರಂತ, ವಿನೋದ್ರಾಜ್ ರೈ ಅನಿಲೆ, ಸತೀಶ್ ಶೆಟ್ಟಿ ಮುಂಡ್ಯ, ನಾಗರಾಜ್ ಭಟ್ ಕನ್ನಡ್ಕ, ಮಧುಕರ ರೈ ಸಾಂತ್ಯ, ಸುರೇಶ್ ಆಳ್ವ, ರಾಜೇಂದ್ರ ಪ್ರಸಾದ್ ರೈ ಮೇನಾಲ, ನವೀನ್ ಗೌಡ ಕುಕ್ಕುಡೇಲು, ಶಂಕರ್ ಮುಕ್ಕಾರಿ ಪಟ್ರೋಡಿ, ಮತ್ತು ಉತ್ಸವ ಸಮಿತಿ, ಜೀರ್ಣೋದ್ದಾರ ಸಮಿತಿ, ಪದಾಧಿಕಾರಿಗಳು ಸದಸ್ಯರು, ಹಾಗೂ ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು. ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.



ದೇವರ ಅವಭೃತಸ್ನಾನ
ಫೆ.19ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಸಿಯಾಳ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಉತ್ಸವ ಬಲಿ ಹೊರಟು ಅವಭೃತಸ್ನಾನಕ್ಕೆ ಸಸ್ಪೆಟ್ಟಿಗೆ ಶ್ರೀದೇವರ ಸವಾರಿ, ಕಟ್ಟೆಪೂಜೆ, ಅವಭೃತ ಸ್ನಾನ ನಡೆಯಲಿದೆ. ರಾತ್ರಿ ಹನುಮಗಿರಿ ಮೇಳದವರಿಂದ ಕಲ್ಯಾಣತ್ರಯ ಯಕ್ಷಗಾನ ಬಯಲಾಟ ನಡೆಯಲಿದೆ.









