ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವಕ್ಕೆ ಗೊನೆಮುಹೂರ್ತ

0

ಪೆರ್ನೆ: ಕೊರತಿಕಟ್ಟೆ, ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಫೆ.21ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವ ನಡೆಯಲಿದ್ದು, ಈ ಪ್ರಯುಕ್ತ ಗೊನೆಮುಹೂರ್ತವು ಫೆ. 18ರಂದು ನಡೆಯಿತು. ಮಾಡತ್ತಾರು ಕ್ಷೇತ್ರದ ಭಂಡಾರದ ಮನೆಯಾದ ಅತ್ತೆಜಾಲಿನಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಈಶ್ವರ ಪ್ರಸನ್ನ.ಕೆ ಇವರು ಗೊನೆಮುಹೂರ್ತ ನೆರವೇರಿಸಿದರು.

ಫೆ.21ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ಶ್ರೀವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿ ದೈವ ಮತ್ತು ಗುಳಿಗ ದೈವ ಹಾಗೂ ನಾಗ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ ನಡೆಯಲಿದೆ.. ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ ಬಳಿಕ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ, ಸಂಜೆ ಅತ್ತೆಜಾಲು ಭಂಡಾರದ ಮನೆಯಿಂದ ಮಾಡತ್ತಾರು ದೈವಸ್ಧಾನಕ್ಕೆ ಭಂಡಾರ ಬಂದು, ಕ್ಷೇತ್ರದಲ್ಲಿ ಭಂಡಾರ ಏರಿ ತಂಬಿಲ ಸೇವೆ, ಎಣ್ಣೆ ಬೂಳ್ಯ ಬಳಿಕ ಪ್ರಸಾದ ಭೋಜನ ನಡೆದು, ದೈವಗಳ ನೇಮೋತ್ಸವ ನಡೆಯಲಿದೆ.

ಗೊನೆ ಮುಹೂರ್ತದ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಕಿರಣ್ ಶೆಟ್ಟಿ ಮುಂಡೋವಿನಕೋಡಿ, ಕಾರ್ಯದರ್ಶಿ ಎನ್ ಶಿವಪ್ಪ ನಾಯ್ಕ್, ಜೊತೆ ಕಾರ್ಯದರ್ಶಿ ಶ್ರೀಕಾಂತ್ ಯಾದವ್ ನಾಗಮೂಲೆ, ಸಂಘಟನಾ ಕಾರ್ಯದರ್ಶಿ ಮುತ್ತಪ್ಪ ಸಾಲಿಯಾನ್, ಕೋಶಾಧಿಕಾರಿ ಕೃಷ್ಣಕುಮಾರ್ ಪೆರ್ನೆಕೋಡಿ, ಟ್ರಸ್ಟಿಗಳಾದ ದಯಾನಂದ ಪೂಜಾರಿ ಮಾಡತ್ತಾರು, ಆನಂದ ಶೆಟ್ಟಿ ಅತ್ತೆಜಾಲು, ಸೀತಾರಾಮ ನಾಯಕ್ ಪಾಲೆದಕೋಡಿ, ರಮೇಶ್ ಹನುಮಾಜೆ, ಗಿರಿಯಪ್ಪ ಗೌಡ ಸಾಣೆವು, ಜಾನಕಿ ಕೊರತಿಕಟ್ಟೆ ಹಾಗೂ ಊರಿನ ಭಕ್ತರು ಉಪಸ್ಧಿತರಿದ್ದರು.

LEAVE A REPLY

Please enter your comment!
Please enter your name here