







ಪುತ್ತೂರು: ಮಾ.1ರಂದು ಸಾರಡ್ಕ ಆರಾಧನಾ ಕಲಾಭವನದಲ್ಲಿ ನಡೆಯುವ ಸಾರಡ್ಕ ಕೃಷಿ ಹಬ್ಬ ಕಾರ್ಯಕ್ರಮದಲ್ಲಿ ಡಾ. ವಿಘ್ನೇಶ್ವರ ವರ್ಮುಡಿಯವರ ಕೃತಿ ‘ ಅಡಿಕೆ ಮಾರುಕಟ್ಟೆ ಸ್ಥಿತಿ ಗತಿ’ ಬಿಡುಗಡೆಗೊಳ್ಳಲಿದೆ.


ಪ್ರಗತಿಪರ ಕೃಷಿಕ ಹಾಗೂ ಕ್ಯಾಂಪ್ಕೋದ ಮಾಜಿ ಉಪಾಧ್ಯಕ್ಷ ಶಂ.ನಾ. ಖಂಡಿಗೆ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಡಿಕೆ ಮಾರುಕಟ್ಟೆ ಸ್ಥಿತಿ ಗತಿ ಬಗ್ಗೆ ಡಾ. ವಿಘ್ನೇಶ್ವರ ವರ್ಮುಡಿಯವರ ಉಪನ್ಯಾಸ ಕಾರ್ಯಕ್ರಮವಿದೆ.













