







ಪುತ್ತೂರು: ಬೆಟ್ಟಂಪಾಡಿಯ ಬಿಲ್ವಗಿರಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಮಾ.1ರಂದು ಯಶೋಮತಿ ಏಕಾವಳಿ ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ.


ಬೆಟ್ಟಂಪಾಡಿಯ ಬಿಲ್ವಗಿರಿಯಲ್ಲಿ ನಿರ್ಮಿಸಿರುವ ವಿದ್ಯುದ್ವೀಪಗಳಿಂದ ಶೋಭಿಸುತ್ತಿರುವ ಶ್ರೀ ದುರ್ಗಾಂಬಾ ಕಲಾ ವೇದಿಕೆಯಲ್ಲಿ ಹತ್ತು ಸಮಸ್ತರ ಸೇವಾರ್ಥವಾಗಿ ಬಯಲಾಟ ಕಾರ್ಯಕ್ರಮದ ಬಾಬ್ತು ಯಶೋಮತಿ ಏಕಾವಳಿ ಎಂಬ ಪೌರಾಣಿಕ ಕಥಾಭಾಗ ಮೂಡಿಬರಲಿದೆ.



ಅಪರಾಹ್ನ 3ಗಂಟೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀದೇವಿಯ ಶೋಭಾಯಾತ್ರೆ ಬಿಲ್ವಗಿರಿಗೆ ಹೊರಡಲಿದೆ. ಸಂಜೆ 6.15ಕ್ಕೆ ಚೌಕಿಪೂಜೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










