







ಬೆಳಿಗ್ಗೆ ದೇವಿಯ ದರ್ಶನ, ಮಧ್ಯಾಹ್ನ ವಿಶೇಷ ಭೋಜನ, ಪ್ರಮುಖರೊಂದಿಗೆ ಸಂವಾದ


ಪುತ್ತೂರು: ಪುತ್ತೂರಿನ ಕೊಟೇಚಾ ಹಾಲ್ನಲ್ಲಿ ಮಾ.1ರಂದು ನಡೆದ ಗಾಣಿಗ ಸಮಾಜದ ಜಿಲ್ಲಾ ಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮಕ್ಕೆ ಅಗಮಿಸಿದ್ದ, ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ ಮುಖ್ಯ ಸಲಹೆಗಾರರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದೀಜಿಯವರು ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದರು.




ಗುಜರಾತ್ನಿಂದ ಫೆ.28ರಂದು ಸಂಜೆ ಮಂಗಳೂರಿಗೆ ಆಗಮಿಸಿದ್ದ ಪ್ರಹ್ಲಾದ್ ಮೋದಿಯವರು ಮಾ.1ರಂದು ಬೆಳಿಗ್ಗೆ ಮಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಪುತ್ತೂರಿಗೆ ಆಗಮಿಸಿದ ಅವರು ಪ್ರಾರಂಭದಲ್ಲಿ ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ಅವರು ಪ್ರಹ್ಲಾದ್ ಮೋದಿಯವರಿಗೆ ದೇವಿಯ ಪ್ರಸಾದ ನೀಡಿ ಗೌರವಿಸಿದರು. ಬೆಟ್ಟದ ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಲಕ್ಷ್ಮೀ ಅರ್ಪಣ್ ಉಪಸ್ಥಿತರಿದ್ದರು. ಪುತ್ತೂರಿನ ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ, ಬಿಜೆಪಿ ನಗರ ಮಂಡಲಗಳಿಂದ ಪ್ರಹ್ಲಾದ್ ಮೋದಿಯವರನ್ನು ಗೌರವಿಸಿದರು.
ನಾನು ಒಬ್ಬ ಗಾಣಿಗ ಸಮಾಜದ ಸದಸ್ಯ. ಕರ್ನಾಟಕದಲ್ಲಿ ತನ್ನ ಸಮುದಾಯದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಗುಜರಾತ್ನಿಂದ ಆಗಮಿಸಿದ್ದು, ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡುವ ಸೌಭಾಗ್ಯ ದೊರೆತಿದೆ. ಹೀಗಾಗಿ ನಾನು ಕರ್ನಾಟಕದ ಗಾಣಿಜ ಸಮಾಜದರಿಗೆ ಬಹಳಷ್ಟು ಆಭಾರಿಯಾಗಿದ್ದೇನೆ. ಮಹಾಲಕ್ಷ್ಮೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ನನ್ನ ಮನಸ್ಸಿಗೆ ಬಹಳಷ್ಟು ಆನಂದವಾಗಿದೆ. ಇಂತಹ ಅಪೂರ್ವ ಅವಕಾಶವನ್ನು ನನ್ನ ಮನ ಮನದಲ್ಲಿ ಮರೆಯಲು ಸಾಧ್ಯವಿಲ್ಲ. ಬಹಳಷ್ಟು ಪುರಾತನ ಮಂದಿರವಾಗಿದ್ದು ಇದನ್ನು ಗಾಣಿಗ ಸಮಾಜದವರೇ ನಡೆಸುತ್ತಿದ್ದಾರೆ. ಕ್ಷೇತ್ರದ ಜೀರ್ಣೀದ್ಧಾರದ ಕಾಮಗಾರಿಗಳು ನಡೆಯುತ್ತಿರುವುದವು ನನ್ನ ಗಮನಕ್ಕೆ ಬಂದಿದೆ. ಸಮಾಜದ ದೊಡ್ಡ ವ್ಯಕ್ತಿಗಳು ಜೀರ್ಣೋದ್ಧಾರದಲ್ಲಿ ಕೈ ಜೊಡಿಸಿದ್ದು ಗುಜರಾತ್ನ ಗಾಣಿಗ ಸಮಾಜ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುಟುಂಬದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಸನಾತನ ಧರ್ಮದ ಎಲ್ಲಾ ಸಮಾಜದವರ ಮೂಲಕ ಈ ಕ್ಷೇತ್ರವು ಪುನರ್ ನಿರ್ಮಾಣಗೊಳ್ಳಲಿ ಹಾರೈಸಿದರು.
ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರವು ಹಿಂದೂಗಳ ದ್ಯೊತಕವಾಗಿದೆ. ಈ ದೇವಸ್ಥಾನದ ಜೀರ್ಣೋದ್ಧಾರ ಪ್ರಾರಂಭಗೊಂಡಿದ್ದು ಪ್ರತಿಯೊಬ್ಬರೂ ತನು ಮನ ಧನದ ಸಹಕಾರ ನೀಡುವ ಮೂಲಕ ಭವ್ಯ ಮಂದಿರ ನಿರ್ಮಾಣಗೊಳ್ಳಲು ಸಹಕಾರ ನೀಡುವಂತೆ ವಿನಂತಿಸಿದರು.
ನಂತರ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಕಾರ್ಯಕ್ರಮ ನಡೆಯುವ ಕೊಟೇಚಾ ಹಾಲ್ಗೆ ತೆರಳಿದರು. ಮಧ್ಯಾಹ್ನ ಗಾಣಿಗ ಸಂಗಮ ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ಮಧ್ಯಾಹ್ನದ ಭೋಜನ ಸವಿದರು. ಇದಾದ ಬಳಿಕ ನೆರೆದಿದ್ದ ಪ್ರಮುಖರೊಂದಿಗೆ ಸಂವಾದ ನಡೆಸಿದರು. ಡಾ.ಎಂ.ಕೆ ಪ್ರಸಾದ್, ಡಾ.ಕೆ ಸುರೇಶ್ ಪುತ್ತೂರಾಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಅಚ್ಚುತ್ತ ನಾಯಕ್, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಮರಾಟಿ ಸಂಘದ ಅಧ್ಯಕ್ಷ ಕರುಣಾಕರ ಪಾಂಗಳಾಯಿ, ಸತೀಶ್ ನಾಯಕ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಮಣಿಕಂಠ, ನಗರ ಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು, ಮನೋಹರ್ ಕಲ್ಲಾರೆ, ಶ್ರೀಧರ ತೆಂಕಿಲ, ನಾಗೇಶ್ ಟಿ.ಎಸ್., ಸಂತೋಷ್ ಬೋನಂತಾಯ, ಶಿವಶಕಂರ ಭಟ್, ಶ್ರೀಧರ ಆಚಾರ್ಯ, ಅಶೋಕ್ ಕುಂಬ್ಳೆ, ತಾ.ಪಂ ಮಾಜಿ ಸದದ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಪುರಸಭಾ ಮಾಜಿ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಇಂದುಶೇಖರ್, ಪ್ರಭಾ, ದಾಮೋದರ ಪಾಟಾಳಿ ಸೇರಿದಂತೆ ಹಲವು ಮಂದಿ ಪ್ರಮುಖರು ಭಾಗವಹಿಸಿದ್ದರು.










