






ನಿಡ್ಪಳ್ಳಿ: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕರ್ನಪ್ಪಾಡಿ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾ.1ರಂದು ಭೇಟಿ ನೀಡಿ ದೈವಗಳ ಪ್ರಸಾದ ಸ್ವೀಕರಿಸಿದರು.


ಕರ್ನಪ್ಪಾಡಿಯಲ್ಲಿ ಫೆ.27ರಂದು ಶ್ರೀ ಕೊಡಮಣಿತ್ತಾಯ ದೈವದ ಪ್ರತಿಷ್ಟಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಯ ನೆಲೆಯಲ್ಲಿ ಅವರು ಉದ್ಘಾಟಿಸಬೇಕಿತ್ತು. ಆದರೆ ಅಂದು ಅವರಿಗೆ ಬೇರೆ ತುರ್ತು ಕಾರ್ಯಕ್ರಮ ಇದ್ದ ಕಾರಣ ಆಗಮಿಸಲು ಅನಾನುಕೂಲವಾದ ಕಾರಣ ಇಂದು ಭೇಟಿ ನೀಡಿದರು.



ಪಕ್ಷದ ಮುಖಂಡರು ಅವರ ಜತೆಗಿದ್ದರು. ಕೊಡಮಣಿತ್ತಾಯ ದೈವಸ್ಥಾನ ಪ್ರತಿಷ್ಟಾ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ಆರ್.ಕೋಡಿ ಶಾಲು ಹಾಕಿ ಅವರನ್ನು ಗೌರವಿಸಿ ಸ್ವಾಗತಿಸಿದರು. ಪ್ರತಿಷ್ಟಾ ಸಮಿತಿಯ ಕೋಶಾಧಿಕಾರಿ ರಾಜೇಶ್ ನೆಲ್ಲಿತ್ತಡ್ಕ, ಪ್ರಖ್ಯಾತ್ ನುಳಿಯಾಲು, ಗರಡಿ ಸೇವಾ ಸಮಿತಿ ಸದಸ್ಯ ರಮೇಶ್ ಪೂಜಾರಿ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.










