






ಪುತ್ತೂರು: ಮನೆಯಂಗಳದ ಬಾವಿಗೆ ಬಿದ್ದಿದ್ದ ಎರಡು ನಾಯಿಗಳನ್ನು ಪುತ್ತೂರು ಅಗ್ನಿಶಾಮಕದಳದವರು ರಕ್ಷಣೆ ಮಾಡಿದ ಘಟನೆ ಮಾ.2ರಂದು ನಡೆದ ಬಗ್ಗೆ ವರದಿಯಾಗಿದೆ.


ಆರ್ಯಾಪು ಗ್ರಾಮದ ಮರಿಕೆ ಲೀಲಾವತಿ ಅವರ ಮನೆಯ ಅಂಗಳದ ಬಾವಿಗೆ ಬೆಳ್ಳಂಬೆಳಗ್ಗೆ ಎರಡು ನಾಯಿಗಳು ಬಿದ್ದಿದ್ದು, ಅದನ್ನು ಗಮನಿಸಿದ ಅವರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದರು. ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ಬಾವಿಯಲ್ಲಿ ಬಿದ್ದಿರುವ ಎರಡೂ ನಾಯಿಗಳನ್ನು ಹರಸಾಹಸ ಪಟ್ಟು ಒಂದೊಂದರಂತೆ ಮೇಲಕ್ಕೆತ್ತಿ ರಕ್ಷಿಸುವಲ್ಲಿ ಸಫಲರಾದರು.













