






ಪುತ್ತೂರು: ಮಾ.3ರಂದು ಫಲ್ಗುಣ ಪೂರ್ಣಿಮೆಯಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಅವಧಿ ದೃಷ್ಟಿಯಿಂದ ಇದು ವರ್ಷದ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ. ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಂದ್ರಗ್ರಹಣದ ಅಂಗವಾಗಿ ಗ್ರಹಣ ಶಾಂತಿ ನಡೆಯಲಿದೆ. ಅಂದು ಮಧ್ಯಾಹ್ನ ಅನ್ನಪ್ರಸಾದ ಇರುವುದಿಲ್ಲ.
ಸಿಂಹ, ಕನ್ಯಾ, ಮಕರ, ಮೀನಾ ರಾಶಿಯವರು ಗ್ರಹಣ ಕಾಲದಲ್ಲಿ ವ್ರತಾಚರಣೆ ಮಾಡಬೇಕು. ದೇವಳದಲ್ಲಿ ಚಂದ್ರಗ್ರಹಣ ಶಾಂತಿ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಇರುವುದಿಲ್ಲ. ರಾತ್ರಿ ಪೂಜೆ 6.48ರ ಬಳಿಕ ಅಭಿಷೇಕಾಧಿಗಳು ನಡೆದು ಮಂಗಳಾರತಿ ಮಾಡಲಾಗುವುದು. ಗ್ರಹಣ ಶಾಂತಿ ಮಾಡಿಸುವ ಭಕ್ತರು ಸೇವೆಯೊಂದಕ್ಕೆ ರೂ. 100ರ ಸೇವಾ ರಶೀದಿಯನ್ನು ಪಡೆದುಕೊಳ್ಳುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ತಿಳಿಸಿದ್ದಾರೆ.












