ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಸವಣೂರು ಗ್ರಾಮ ಸಮಿತಿ ರಚನೆ

0

ಅಧ್ಯಕ್ಷ: ಮಹೇಶ್ ಸವಣೂರು, ಕಾರ್ಯದರ್ಶಿ ತಾರಾನಾಥ ಕಾಯರ್ಗ

ಪುತ್ತೂರು: ಹನುಮಗಿರಿ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ 2026ನೇ ಎಪ್ರಿಲ್‌ನಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಶ್ರೀ ರಾಮ ಹನುಮ ಜ್ಯೋತಿ ಯಾತ್ರೆ ಹಾಗೂ ಶ್ರೀ ರಾಮತಾರಕಜಪ ದೀಕ್ಷೆಯ ಸಲುವಾಗಿ ಸವಣೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಭಕ್ತಾದಿಗಳ ಸಭೆ ಹಾಗೂ ಗ್ರಾಮ ಸಮಿತಿ ರಚನೆಯ ಕುರಿತು ಸವಣೂರು ಯುವ ಸಭಾಭವನದಲ್ಲಿ ನಡೆಯಿತು.

ಸವಣೂರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ನ್ಯಾಯವಾದಿ ಮಹೇಶ್‌ ಕೆ ಸವಣೂರು, ಪ್ರಧಾನ ಕಾರ್ಯದರ್ಶಿಯಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗರವರನ್ನು ಆಯ್ಕೆ ಮಾಡಲಾಯಿತು. ಜಪಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ, ಸಹಸಂಚಾಲಕರಾಗಿ ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಭರತ್‌ ರೈ ಪಾಲ್ತಾಡಿ, ಲಿಂಗಪ್ಪ ರೈ ಚೆಂಬುತ್ತೋಡಿ, ಸವಣೂರು ಹಿಂದು ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀಧರ ಇಡ್ಯಾಡಿ, ರಥಯಾತ್ರೆ ಗ್ರಾಮ ಸಂಚಾಲಕರಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್‌ ಕುಮಾರ್ ಕೋಡಿಬೈಲು, ಸಹ ಸಂಚಾಲಕರಾಗಿ ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು, ಲಕ್ಷೋತ್ತರ ನಾರಿಕೇಲ ಗ್ರಾಮ ಸಂಚಾಲಕರಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಂಗಾಧರ ಪೆರಿಯಡ್ಕ, ಸಹ ಸಂಚಾಲಕರಾಗಿ ಪತ್ರಕರ್ತ ಪ್ರವೀಣ್‌ ಚೆನ್ನಾವರ, ಪುಟ್ಟಣ್ಣ ಗೌಡ ಬದಿಯಡ್ಕ, ಹೋಟೆಲ್ ಉದ್ಯಮಿ ರಾಮಕೃಷ್ಣ ಪ್ರಭು ಸವಣೂರು, ಭಜನಾ ಸಂಕೀರ್ತನ ಗ್ರಾಮ ಸಂಚಾಲಕರಾಗಿ ರಾಜೇಶ್‌ ಇಡ್ಯಾಡಿ, ಸಹಸಂಚಾಲಕರಾಗಿ ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾದ ತಾರನಾಥ ಬೊಳಿಯಾಲ, ಶಿವರಾಮ ಗೌಡ ಮೆದು, ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಮಹಿಳಾ ಸಮಿತಿ ಸಂಚಾಲಕರಾಗಿ ಸವಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಇಂದಿರಾ ಬಿ ಕೆ, ಸಹ ಸಂಚಾಲಕರಾಗಿ ಆಶಾ ರೈ ಕಲಾಯಿ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಅಧ್ಯಕ್ಷ ಸತೀಶ್‌ ಬಲ್ಯಾಯರವರನ್ನು ಆಯ್ಕೆ ಮಾಡಲಾಯಿತು.
ಬ್ರಹ್ಮಕಲಶೋತ್ಸವ ನಗರ ಗ್ರಾಮ ಸಮಿತಿ ನಗರ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ್ತ ಮೂಡೆತ್ತಾಯ ಮಾಹಿತಿ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ದ.ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್‌ ರೈ ಕೆಡೆಂಜಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್‌ ಮೆದು, ದ.ಕ, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here