






ಕಡಬ: ನಿವೃತ್ತ ಮುಖ್ಯಶಿಕ್ಷಕ ದಿ.ಸಾಂತಪ್ಪ ಗೌಡ ಪಿಜಕ್ಕಳ ಅವರು ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಹಾಗಾಗಿ ಅವರ ಹೆಸರು ಸಾಂತಪ್ಪ ಮಾಸ್ಟರ್ ಎಂದೇ ಅಮರವಾಗಿರುತ್ತದೆ ಎಂದು ಪುತ್ತೂರು ಎ.ಪಿ.ಎಮ್.ಸಿ.ಮಾಜಿ ಅಧ್ಯಕ್ಷರಾದ ಸೀತಾರಾಮ ಗೌಡ ಪೊಸವಳಿಕೆ ಹೇಳಿದರು.


ಮಾ.6ರಂದು ಕಡಬ ಪಿಜಕ್ಕಳ ಹರಿಕೃಪಾ ನಿವಾಸದಲ್ಲಿ ನಡೆದ ನಿವೃತ್ತ ಮುಖ್ಯಶಿಕ್ಷಕ, ಕುಮಾರದಾರ ಸೇತುವೆ ನಿರ್ಮಾಣದ ಹೋರಾಟ ಸಮಿತಿ ಅಧ್ಯಕ್ಷರೂ, ಊರಿನ ಹಿರಿಯ ಮಾರ್ಗದರ್ಶಕರೂ ಆಗಿದ್ದ ದಿ.ಸಾಂತಪ್ಪ ಗೌಡ ಪಿಜಕ್ಕಳ ಅವರ ಉತ್ತರಕ್ರಿಯೆ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು. ಸಾಂತಪ್ಪ ಮಾಸ್ಟರ್ ಅವರು ನಿವೃತ್ತಿ ಹೊಂದಿ ಇಹಲೋಕ ತ್ಯಜಿಸಿದರೂ ಅವರ ಹೆಸರಿನಲ್ಲಿ ಮಾಸ್ಟರ್ ಎಂಬ ಪದ ಬಂದೇ ಬರುತ್ತದೆ. ಯಾಕೆಂದರೆ ಶಿಕ್ಷಕನದ್ದು ವೃತ್ತಿಯಲ್ಲ ಸೇವೆ. ಕೃಷಿಕ ಕುಟುಂಬದಿಂದ ಹುಟ್ಟಿ ಆಗಿನ ಕಷ್ಟದ ಕಾಲದಲ್ಲೂ ವಿದ್ಯಾಭ್ಯಾಸ ಪಡೆದು ಶಿಕ್ಷಕ ಹುದ್ದೆಗೆ ನೇಮಕಗೊಂಡು ಹಲವಾರು ಶಾಲೆಗಳಲ್ಲಿ ಶಿಕ್ಷಕನಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಿಕ್ಷಣ ಇಲಾಖೆಯು ನೀಡುವ ಜನಮಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದ ಅವರು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿದ್ದು ಸದಾ ಎಲ್ಲರ ನೆನಪಿನಲ್ಲಿರುತ್ತಾರೆ. ಸಮಾಜದ ಹಲವಾರು ಸಂಘ ಸಂಸ್ಥೆಗಳಲ್ಲಿಯಯೂ ತನ್ನನ್ನು ತಾನು ತೊಡಗಿಕೊಂಡು ಸಮಾಜ ಮುಖಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಅವರ ಮಕ್ಕಳು ಕೂಡಾ ತಂದೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದರು.




ಸಾಮಾಜಿಕ ಮುಂದಾಳು ಪಿಜಕ್ಕಳ ಗಿರಿಧರ ರೈ ಮಾತನಾಡಿ, ದಿ.ಸಾಂತಪ್ಪ ಮಾಸ್ಟರ್‌ರವರು ಒಬ್ಬ ಆದರ್ಶ ಶಿಕ್ಷಕನಾಗಿ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಪಾಲೋಳಿ ಸೇತುವೆ ನಿರ್ಮಾಣದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು, ಸೇತುವೆ ನಿರ್ಮಾಣಕ್ಕೆ ಪ್ರಮುಖ ಕಾರಣರ್ತರಾಗಿ, ಊರಿನ ಅಭಿವೃದ್ದಿಯಲ್ಲಿ ಬಹುದೊಡ್ಡ ಪಾತ್ರವಹಿಸಿದ್ದಾರೆ ಎಂದರು. ಕುಟುಂಬದ ಹಿರಿಯರಾದ ನಿವೃತ್ತ ಶಿಕ್ಷಕ ಜನಾರ್ದನ ಗೌಡ ಪಣೆಮಜಲುರವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಸಾಂತಪ್ಪ ಗೌಡರವರು ನಿವೃತ್ತಿಯ ನಂತರವೂ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಮಾನಸದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ ವ್ಯಕ್ತಿಯಾಗಿದ್ದರು. ವಿವಿಧ ಸಂಘ-ಸಂಸ್ಥೆಗಳಲ್ಲಿ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಸಮಾಜದ ಏಳಿಗೆಗಾಗಿ ಶ್ರಮಿಸಿ, ಕಾಲ ಕಾಲಕ್ಕೆ ಸಮರ್ಪಕ ಮಾರ್ಗದರ್ಶನ ನೀಡಿ ಊರಿನ ಅಭಿವೃದ್ಧಿಗೆ ಅವಿರತ ಶ್ರಮ ಪಟ್ಟಿರುವುದು ಸದಾ ಸ್ಮರಣೀಯವಾಗಿದೆ ಎಂದು ಹೇಳಿದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಉಪಾಧ್ಯಕ್ಷರಾದ ರಾಮಕೃಷ್ಣ ಗೌಡ ಯು.ಪಿ., ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುರೇಶ್ ಬೈಲು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಎಸ್., ಕಡಬ ಶಾಖಾ ವ್ಯವಸ್ಥಾಪಕ ಶಿವಪ್ರಸಾದ್, ಶಾಖಾ ಮಾಜಿ ವ್ಯವಸ್ಥಾಪಕರಾದ ಧರ್ಮರಾಜ್ ಕೆ., ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಸುದರ್ಶನ ಗೌಡ ಕೋಡಿಂಬಾಳ, ಸದಸ್ಯರಾದ ವಿಶ್ವನಾಥ ಗೌಡ ಇಡಾಳ, ಧನಂಜಯ ಕೊಡಂಗೆ, ಬೆಳ್ಯಪ್ಪ ಗೌಡ ಕಾರ್ಕಳ, ಕಮಲಾಶ್ರೀನಿವಾಸ, ಗಣೇಶ್ ಗೌಡ ಮುಜೂರು, ಕೃಷ್ಣಪ್ಪ ಗೌಡ ಕೊಂಬಾರು, ಕುಶಾಲಪ್ಪ ಗೌಡ ಕೆರ್ನಡ್ಕ, ಪುರುಷೋತ್ತಮ ಗೌಡ ಕಳಿಗೆ, ಬಾಲಕೃಷ್ಣ ಗೌಡ ಹೇಮಳ, ಜಯರಾಮ ಗೌಡ ಬಳಕ್ಕಬೆ, ಕುಶಾಲಪ್ಪ ಗೌಡ ನಡುವಳಿಕೆ, ಭವಾನಿಶಂಕರ ಮೇಲಂಟ, ಚಂದ್ರಶೇಖರ ಗೌಡ ಕೋಡಿಬೈಲು, ರಾಮಚಂದ್ರ ಕುತ್ಯಾಡಿ, ಚಂದ್ರಶೇಖರ ಕಡಂಪಲ, ಭಾಸ್ಕರ ಗೌಡ ಎಲುವಾಳೆ, ಹರೀಶ್ ಗೌಡ ಕೊಡಂದೂರು, ಶಾಖಾ ಸಿಬ್ಬಂದಿಗಳಾದ ಚೇತನ್‌ಕುಮಾರ್, ಅಶ್ವಿತಾ ಬಿ.ಸಿ., ಯತೀಶ್ ಡಿ., ಪಿಗ್ಮಿ ಸಂಗ್ರಾಹಕರಾದ ಪೂರ್ಣಿಮಾ ಜಿ., ಗೀತಾ ಆರ್ತಿಲ, ಇಂಜನಿಯರ್‌ಗಳಾದ ದುರ್ಗಾಪ್ರಸಾದ್ ಕೆ.ಪಿ., ಪೂವಪ್ಪ ಅಂತಿಬೆಟ್ಟು, ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ., ಕಡಬ ತಾಲೂಕು ಯುವಜನ ವೇದಿಕೆ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ ಮೇಲಿನ ಮನೆ, ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಮಹಮ್ಮದ್ ಕುಂಞ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎ.ಪಿ.ಗಿರೀಶ್, ಪುತ್ತೂರು ಠಾಣೆಯ ಹೆಡ್‌ಕಾನ್ಸ್‌ಸ್ಟೇಬಲ್ ಸತೀಶ್ ನೂಜಿ, ಕಡಬ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ನೀಲಾವತಿ ಶಿವರಾಮ್, ಸದಸ್ಯರಾದ ದಯಾನಂದ ಗೌಡ, ರೋಹಿತ್ ಗೌಡ, ಕೃಷ್ಣಪ್ಪ ಪೂಜಾರಿ, ಅಕ್ಷತಾ ಕೋಡಿಂಬಾಳ, ತಾ.ಪಂ.ಮಾಜಿ ಸದಸ್ಯರಾದ ಗಣೇಶ ಕೈಕುರೆ, ಅಂಬುಲ ಟ್ರೇಡರ್ಸ್ ನ ಮಾಲಕ ಸತೀಶ್ ಗೌಡ ಅಂಬುಲ, ವಾಸುದೇವ ಗೌಡ ಕೇನ್ಯ, ನಿವೃತ್ತ ಶಿಕ್ಷಕರಾದ ಕಿಟ್ಟಣ್ಣ ರೈ, ತೋಮಸ್, ತಮ್ಮಯ್ಯ ಗೌಡ, ಕುರಿಯನ್, ಶಿವರಾಮ ಗೌಡ, ವಿಮಲ, ಬೇಬಿ, ಶಿಕ್ಷಕರಾದ ತೀರ್ಥೇಶ್ ಪಡೆಜ್ಜಾರು, ವಾಸುದೇವ ಗೌಡ ಕೋಲ್ಪೆ, ಉದ್ಯಮಿ ಸುಂದರ ಗೌಡ ಮಂಡೆಕರ, ಗುತ್ತಿಗಾರು ಸಿ.ಎ.ಬ್ಯಾಂಕ್ ನಿರ್ದೇಶಕ ಜಯಪ್ರಕಾಶ್ ಮೊಗ್ರ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚಿಲಂಪಾಡಿ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವಪ್ರಸಾದ್ ಪುತ್ತಿಲ, ಗುತ್ತಿಗಾರು ಗ್ರಾಮಾಡಳಿತಾಧಿಕಾರಿ ಭಾರತಿ, ಪ್ರಮುಖರಾದ ಗೋಪಾಲಕೃಷ್ಣ, ಬಾಲಕೃಷ್ಣ ಗೌಡ ಕೋಲ್ಪೆ, ಶೇಷಗಿರಿ, ಯಶ್ವಿತ್, ದಾಮೋದರ ಗೌಡ ಕಣಜಾಲು, ಮಹೇಶ್ ಕೋಡಿಬೈಲ್, ಶೈಲೇಶ್ ಮಾರಪ್ಪೆ, ಸೇಸಮ್ಮ ಬೆಂಗಳೂರು, ನಾಗರಾಜ ಗೌಡ ಬೆಂಗಳೂರು, ರಕ್ಷಿತ್ ಪುತ್ತಿಲ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಮೃತರ ಪತ್ನಿ ನಿವೃತ್ತ ಮುಖ್ಯಶಿಕ್ಷಕಿ ರುಕ್ಮಿಣಿ ಕೆ.ಬಿ., ಪುತ್ರ ಕಾರ್ತಿಕ್ ಗೌಡ ಪಿಜಕ್ಕಳ, ಸೊಸೆ ಅನಿತಾಕಾರ್ತಿಕ್ ಪಿಜಕ್ಕಳ, ಪುತ್ರಿಯರಾದ ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಸಂಧ್ಯಾ ಪಿ.ಎಸ್., ಸುಳ್ಯ ಸರಕಾರಿ ಪ.ಪೂ.ಕಾಲೇಜು ಉಪನ್ಯಾಸಕಿ ಲತಾ ಪಿ.ಎಸ್., ಅಳಿಯಂದಿರಾದ ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಜಯಪ್ರಶಾಂತ್ ಅಂಬೆಕಲ್ಲು, ಆರ್ಮಿ ಗುಪ್ತಚರ ಇಲಾಖೆಯ ಅಧಿಕಾರಿ ವಿನೋದ್ ಎ.ಸಿ.ಅತ್ಯಾಡಿ, ಮೊಮ್ಮಕ್ಕಳಾದ ನಿಹಾಲ್ ಗೌಡ, ನಿಖಿಲ್ ಗೌಡ, ಪ್ರದ್ಯೋತ್, ಪ್ರಜ್ಞಾ, ಸಹೋದರರಾದ ನಿವೃತ್ತ ಶಿಕ್ಷಕ ಪೂವಪ್ಪ ಗೌಡ ಪಿಜಕ್ಕಳ, ರಾಮಣ್ಣ ಗೌಡ ಪಿಜಕ್ಕಳ, ಸಹೋದರಿಯರು, ಕುಟುಂಬಸ್ಥರು ಅಥಿತಿಗಳನ್ನು ಬರಮಾಡಿಕೊಂಡರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ೧ ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು.










