ಮೇಲೂರು ಅಂಗನವಾಡಿಯಲ್ಲಿ ಬಾಲಮೇಳ

0

ರಾಮಕುಂಜ; ಕಡಬ ತಾಲೂಕು ಹಳೆನೇರೆಂಕಿ ಗ್ರಾಮದ ಮೇಲೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ ನಡೆಯಿತು.



ಅಧ್ಯಕ್ಷತೆಯನ್ನು ಪುಟಾಣಿ ಲಹರಿ ವಹಿಸಿದ್ದರು. ಕೊಯಿಲ ವಲಯದ ಅಂಗನವಾಡಿ ಮೇಲ್ವಿಚಾರಕಿ ನಂದನಕುಮಾರಿ ಅವರು ಬಾಲ ಮೇಳ ಆಚರಿಸುವ ಉದ್ದೇಶದ ಬಗ್ಗೆ ತಿಳಿಸಿದರು. ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಸುಚೇತ ಬರಂಬೆಟ್ಟು, ಮಾಲತಿ ಕದ್ರ, ಮಾಜಿ ಸದಸ್ಯರಾದ ವಸಂತ ಗೌಡ ಪರಕ್ಕಾಲು, ಕುಶಾಲಪ್ಪ ಗೌಡ ಮೊರಂಕಾಡಿ, ಮೇಲೂರು ಅಂಗನವಾಡಿ ಬಾಲವಿಕಾಸ ಸಮಿತಿಯ ಚಂದ್ರಾವತಿ, ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಯಶೋಧ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದ್ರಿ ಅಂಗನವಾಡಿಯಲ್ಲಿ ಆಂಗ್ಲ ಮಾಧ್ಯಮವನ್ನು ಪುಟಾಣಿಗಳಿಗೆ ಕಲಿಸಲಾಗುತ್ತಿದೆ. ಪರಿಣಾಮವಾಗಿ ಅಂಗನವಾಡಿ ಪುಟಾಣಿ ವೇದ್ಯಾ ಆಂಗ್ಲ ಮಾಧ್ಯಮದಲ್ಲಿ ಇಂಗ್ಲಿಷ್ ಕಥೆಯನ್ನು ಹೇಳಿ ಗಮನ ಸೆಳೆದರು. ಅದೇ ರೀತಿ ಇತರೇ ಪುಟಾಣಿಗಳು ಆಂಗ್ಲ ಮಾಧ್ಯಮದ ಹಾಡು, ನೃತ್ಯ, ಕನ್ನಡ ಹಾಡು ನೃತ್ಯಗಳನ್ನು ಪ್ರದರ್ಶಿಸಿದರು. ಹೇಮಾವತಿ ಕನೆಮಾರು ಸ್ವಾಗತಿಸಿದರು. ಸುಲೋಚನಾ ಮೊರಂಕಾಡಿ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಪ್ರಪುಲ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು.

LEAVE A REPLY

Please enter your comment!
Please enter your name here